ಶಾಕಿಂಗ್ ಸಂಡೆ; ಉಡುಪಿ ಜಿಲ್ಲೆಯಲ್ಲಿ ಮೂವರು ಪೊಲೀಸರು ಸೇರಿದಂತೆ 18 ಮಂದಿಗೆ ಕೊರೋನಾ ಪಾಸಿಟಿವ್

Spread the love

ಶಾಕಿಂಗ್ ಸಂಡೆ; ಉಡುಪಿ ಜಿಲ್ಲೆಯಲ್ಲಿ ಮೂವರು ಪೊಲೀಸರು ಸೇರಿದಂತೆ 18 ಮಂದಿಗೆ ಕೊರೋನಾ ಪಾಸಿಟಿವ್

ಉಡುಪಿ: ಉಡುಪಿ ಜಿಲ್ಲೆಯ 18 ಮಂದಿಯಲ್ಲಿ ಭಾನುವಾರ ಕರೋನಾ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದೆ.

ಜಿಲ್ಲೆಯಲ್ಲಿ ಮೇ 24 ರಂದು ಒಟ್ಟು 18 ಹೊಸ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಿಂದ ಬಂದ 13 ಮಂದಿ, ಕ್ವಾರಂಟೈನ್ ನಲ್ಲಿದ್ದ 13 ಮಂದಿ, ಕಂಟೈನ್ಮೆಂಟ್ ಜೋನ್ ಸಂಪರ್ಕದಿಂದ ಮೂವರಿಗೆ ಹಾಗೂ ಸಂಪರ್ಕ ಮಾಹಿತಿ ಇಲ್ಲದ ಇಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಸೋಂಕಿತರಲ್ಲಿ ಮೂವರು ಮಕ್ಕಳು, 7 ಮಹಿಳೆಯರು ಮತ್ತು 8 ಪುರುಷರು ಸೇರಿದ್ದಾರೆ.

ಈ 18 ಪ್ರಕರಣಗಳ ಪೈಕಿ ಇದರಲ್ಲಿ ಕಾರ್ಕಳ ಗ್ರಾಮಾಂತರ, ಅಜೆಕಾರು ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಮೂವರ ಪೊಲೀಸ್ ಸಿಬಂದಿಗಳು ಸೇರಿದ್ದಾರೆ.


Spread the love