ಶಾಸಕರಿಗೆ 10ಕೋಟಿ ಹಣದ ಆಮಿಷ; ಯಡಿಯೂರಪ್ಪ ವಿರುದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ದೂರು

ಶಾಸಕರಿಗೆ 10ಕೋಟಿ ಹಣದ ಆಮಿಷ; ಯಡಿಯೂರಪ್ಪ ವಿರುದ್ದ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ದೂರು

ಉಡುಪಿ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಬಿ.ಎಸ್ ಯಡಿಯೂರಪ್ಪ ಮತ್ತು ಭಾರತೀಯ ಜನತಾ ಪಕ್ಷದ ಮೇಲೆ ಆಡಿಯೋ ಟೇಪ್ನಲ್ಲಿ ಅಸಂವಿಧಾನಿಕವಾಗಿ ಶಾಸಕರನ್ನು ತಲಾ 10 ಕೋಟಿ ಕೊಟ್ಟು ಖರೀದಿಸುತ್ತೇವೆ ಎಂದು ಹಾಗೂ ರಾಜ್ಯದ ಗೌರವಾನ್ವಿತ ವಿಧಾನಸಭಾ ಸಭಾಧ್ಯಕ್ಷರ ಹೆಸರು ಮತ್ತು ದೇಶದ ಪ್ರಧಾನಿ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿ ರಾಜ್ಯದ ನಾಗರಿಕರಲ್ಲಿ ಗೊಂದಲವನ್ನು ಉಂಟು ಮಾಡಿದ್ದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕರಾದ ಕುಮಾರ್ಚಂದ್ರ ರವರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್ ವಿ. ಅಮೀನ್ರವರು ನೀಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ಶಾಸಕರ ಪುತ್ರರ ನಡುವಿನ ಮಾತುಕತೆಗಳ ಟೇಪ್ ರಾಜ್ಯದಲ್ಲೆಲ್ಲಾ ಸುದ್ದಿಯಾಗಿದ್ದು ಸಾಂವಿಧಾನಿಕವಾಗಿ ರಚನೆಯಾಗಿರುವ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಭಾರತೀಯ ಜನತಾಪಕ್ಷ ಮತ್ತು ಯಡಿಯೂರಪ್ಪ ಕಳೆದ 6 ತಿಂಗಳಿನಿಂದಲೂ ಸತತ ಪ್ರಯತ್ನ ಮಾಡುತ್ತಿದ್ದು ಹಾಗೂ ಜನತಂತ್ರ ದುರ್ಬಲಗೊಳಿಸಲು ವಾಮಮಾರ್ಗವನ್ನು ಅನುಸರಿಸುತ್ತಿದ್ದಾರೆ.

ಪ್ರತಿ ಶಾಸಕರಿಗೂ 10 ಕೋಟಿ ಹಣ ಕೊಡತ್ತೇನೆಂಬ ಆಶ್ವಾಸನೆಯಿಂದ ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವುದು ಅಕ್ಷಮ್ಯ ಅಪರಾಧ. ಿವರಿಬ್ಬರ ಸಂವಾದಲ್ಲಿ ರಾಜ್ಯದ ಗೌರವಾನ್ವಿತ ವಿಧಾನಸಭಾ ಅಧ್ಯಕ್ಷರ ಹೆಸರು ಮತ್ತು ದೇಶದ ಪ್ರಧಾನಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರನ್ನು ಪ್ರಸ್ತಾಪಿಸಿ ರಾಜ್ಯದ ನಾಗರಿಕರಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ. ಪ್ರಜಾತಂತ್ರ ರಕ್ಷಣೆ ಇಂದು ದೇಶದಲ್ಲಿ ಅತ್ಯಂತ ಜರೂರಿನ ಕೆಲಸವಾಗಿದೆ. ಪ್ರಜಾಂತಂತ್ರವಿದ್ದರೆ ಮಾತ್ರ ನಾಗರಿಕ ಸರ್ಕಾರಗಳು ಕೆಲಸ ಮಾಡಲಬಲ್ಲವು. ಭಾರತೀಯ ಜನತಾ ಪಕ್ಷದ ಇಂದಿನ ಕಾರ್ಯಸೂಚಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಶಾಸನ ಸಭೆಗಳ ಮೇಳಿನ ಪಿತೂರಿ ನಡೆಸುತ್ತಿರುವುದು ಇದು ಅತ್ಯಂತ ಅಪಾಯಕಾರಿಯಾಗಿದ್ದು, ಈ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಬಿ ಎಸ್ ಯಡ್ಯೂರಪ್ಪ ಮತ್ತು ಭಾರತೀಯ ಜನತಾ ಪಕ್ಷದ ಮೇಲೆ ಕಾನೂನು ಕ್ರಮ ಜರುಗಿಸವಂತೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಪ್ರಶಾಂತ್ ಪೂಜಾರಿ, ದೀಪಕ್ ಕೋಟ್ಯಾನ್, ಶೇಖರ್ ಪೂಜಾರಿ, ಜೋಯಲ್ ಮಥಾಯಸ್, ದಿನೇಶ್ ನಾಯಕ್, ಹರೀಶ್ ಪೂಜಾರಿ, ಮಣಿಕಂಠ, ಸುರೇಶ್ ಪೂಜಾರಿ ಉಪಸ್ಥಿತರಿದ್ದರು.