ಶಾಸಕ ಬಿ ಎಮ್ ಎಸ್ ಕೊರೋನಾ ಚಿಕಿತ್ಸೆಗೆ ಸರಕಾರದಿಂದ ಹಣ ಪಡೆದಿದ್ದರೆ ತನಿಖೆಯಾಗಲಿ – ಮಾಜಿ ಶಾಸಕ ಗೋಪಾಲ ಪೂಜಾರಿ

Spread the love

ಶಾಸಕ ಬಿ ಎಮ್ ಎಸ್ ಕೊರೋನಾ ಚಿಕಿತ್ಸೆಗೆ ಸರಕಾರದಿಂದ ಹಣ ಪಡೆದಿದ್ದರೆ ತನಿಖೆಯಾಗಲಿ – ಮಾಜಿ ಶಾಸಕ ಗೋಪಾಲ ಪೂಜಾರಿ

ಕುಂದಾಪುರ: ಬೈಂದೂರು ಕ್ಷೇತ್ರದ ಶಾಸಕರು ವೈದ್ಯಕೀಯ ಚಿಕಿತ್ಸೆಗಾಗಿ 3,66,861 ಲಕ್ಷ ರೂ. ಬಿಲ್ ಮಾಡಿ, ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಿಂದ ತಿಳಿಯಿತು. ಇದು ಕೊರೋನಾ ವೈದ್ಯಕೀಯ ಚಿಕಿತ್ಸೆಗೆ ಪಡೆದಿರುವ ಹಣವಾದರೆ ಕೂಡಲೇ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯಮಟ್ಟದ ಖಾಸಗಿ ಚಾನೆಲ್ ಒಂದರಲ್ಲಿ ಬಂದಿರುವ ಸುದ್ದಿಗೆ ಇಲ್ಲಿನ ಹೆಮ್ಮಾಡಿ ಸಮೀಪದ ಕಟ್ ಬೇಲ್ತೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅವರು ಮಾತನಾಡಿದರು.

ನನಗೆ ಗೊತ್ತಿರುವ ಹಾಗೆ ಬೈಂದೂರು ಶಾಸಕರಿಗೆ ಕೊರೋನಾ ಬಂದಿಲ್ಲ. ಮಾಧ್ಯಮಗಳಲ್ಲಿ ಬಂದಿರುವ ವಿಚಾರ ಸತ್ಯವೇ ಆಗಿದ್ದರೆ, ಅವರು ಎಲ್ಲಿ ತಪಾಸಣೆ ಮಾಡಿದ್ದು, ಚಿಕಿತ್ಸೆಗೆ ಎಲ್ಲಿ ದಾಖಲಾಗಿದ್ದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸಲಿ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಒತ್ತಾಯಿಸಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಇರುವವರು ಅಂದರೆ ಬಿಳಿ ಹಾಳೆಯಂತೆ ಪಾರದರ್ಶಕವಾಗಿರಬೇಕು. ಶಾಸಕರು ಎಲ್ಲಿ ದಾಖಲಾಗಿದ್ದರು ಎನ್ನುವ ವಿಚಾರವನ್ನು ಸ್ಪಷ್ಟಪಡಿಸಬೇಕು ಎಂದ ಅವರು, ನಾನು ಸಹ ಕೊರೋನಾ ಪಾಸಿಟಿವ್ ಗೆ ಒಳಗಾಗಿದ್ದು, ಕುಂದಾಪುರ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಸ್ವಲ್ಪ ದಿನ ಮನೆಯಲ್ಲಿಯೇ ವಿಶ್ರಾಂತಿ ಪಡೆದು ಗುಣಮುಖರಾಗಿರುವುದಾಗಿ ತಿಳಿಸಿದರು.


Spread the love