ಶಾಸಕ ಮಾಂಕಾಳ್ ವೈದ್ಯ ಹಾಜರಿದ್ದ ಕಾರ್ಯಕ್ರಮದಲ್ಲಿ ಕೈಯಲ್ಲಿ ಸಿಡಿಮದ್ದು ಸ್ಪೋಟಗೊಂಡು ವ್ಯಕ್ತಿಗೆ ಗಾಯ

Spread the love

ಶಾಸಕ ಮಾಂಕಾಳ್ ವೈದ್ಯ ಹಾಜರಿದ್ದ ಕಾರ್ಯಕ್ರಮದಲ್ಲಿ ಕೈಯಲ್ಲಿ ಸಿಡಿಮದ್ದು ಸ್ಪೋಟಗೊಂಡು ವ್ಯಕ್ತಿಗೆ ಗಾಯ

ಕಾರವಾರ: ಕಾರ್ಯಕ್ರಮವೊಂದರಲ್ಲಿ ಶಾಸಕ ಮಂಕಾಳ ವೈದ್ಯ ಉಪಸ್ಥಿತರಿದ್ದ ವೇದಿಕೆಯ ಸಮೀಪದಲ್ಲೇ ನಿಂತಿದ್ದ ವ್ಯಕ್ತಿಯೋರ್ವನ ಕೈಯ್ಯಲ್ಲಿ ಸಿಡಿಮದ್ದು ಸ್ಫೋಟಗೊಂಡ ಘಟನೆ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹೊಸಾಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,  ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಲು ಭಟ್ಕಳ ಶಾಸಕ ಮಾಂಕಾಳ ವೈದ್ಯ ಆಗಮಸಿದ್ದು, ಈ ವೇಳೆ ರೈಮಂಡ್ ಮಿರಾಂದ ಎನ್ನುವ ವ್ಯಕ್ತಿ ಸಿಡಿಮದ್ದು ಸ್ಪೋಟಿಸುತ್ತಿದ್ದ ವೇಳೆ ತಪ್ಪಿ ಸಿಡಿಮದ್ದು ಆತನ ಕೈಯಲ್ಲಿಯೇ ಸ್ಪೋಟಗೊಂಡಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ರೈಮಂಡ್ ಮಿರಾಂದಾ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love