ಶಿಕ್ಷಕರ -ಪದವಿಧರರ ಮತದಾನ ಗೊಂದಲ- ಸುಶೀಲ್ ನೊರೊನ್ಹ

Spread the love

ಶಿಕ್ಷಕರ -ಪದವಿಧರರ ಮತದಾನ ಗೊಂದಲ- ಸುಶೀಲ್ ನೊರೊನ್ಹ

ಮಂಗಳೂರು:ಜೂನ್ 8ರಂದು ನಡೆಯುವ ಶಿಕ್ಷಕರ ಹಾಗೂ ಪದವಿಧರರ ವಿಧಾನ ಪರಿಷತಿನ ಮತದಾನ ಬಗ್ಗೆ ಮತದಾರರು ಗೊಂದಲದಲ್ಲಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಶಿಕ್ಷಕರು ಅತೀ ಹೆಚ್ಚಿನ ನೊಂದಾವಣಿಯಾಗಿದ್ದು ಪದವಿಧರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿತರಿದ್ದಾರೆ.

ಆದರೆ ಇವರಿಗೆ ಮತದಾನ ಮಾಡಲು ಅವೈಜಾನಿಕ ಮತದಾರ ಪಟ್ಟಿ ಹಾಗೂ ಮತದಾನ ಕೇಂದ್ರ ವಿದ್ದು ಹೆಚ್ಚಿನ ಹೊಸ ಮತದಾರರು ಗೊಂದಲದಲ್ಲಿದ್ದಾರೆ ಇನ್ನೊಂದೆಡೆ ಮೊದಲನೇ ಹಾಗೂ ಎರಡನೇ ಪ್ರಾಶಸ್ತ್ಯ ಮತದಾನದ ಅರಿವಿನ ಕೊರತೆ,ಶಾಲಾ ಶಿಕ್ಷಕರಿಗೆ ಮತದಾನ ಮಾಡಲು ರಜೆಯನ್ನು ಘೋಷಣೆ ಮಾಡದಿರುವುದರಿಂದ ಹೆಚ್ಚಿನ ಮತದಾನ ಆಗುವ ಬಗ್ಗೆ ಸಂಶಯವಿದೆ. ಈ ಬಗ್ಗೆ ಚುನಾವಣ ಆಯೋಗ ಹಾಗೂ ಜಿಲ್ಲಾ ಆಡಳಿತ ವಿಷೇಷ ಅಸಕ್ತಿ ತೊರಿಸದಿರುವುದು ಕಂಡು ಬರುತ್ತದೆ. ಈ ಬಗ್ಗೆ ಕೂಡಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ವಿನಂತಿಸಿದ್ದಾರೆ.


Spread the love