ಶಿಕ್ಷಣ ಕೇವಲ ಡಿಗ್ರಿಗೆ ಮಾತ್ರ ಸಿಮೀತವಲ್ಲ: ಎಂ ವೀರಪ್ಪ ಮೊಯಿಲಿ

Spread the love

ಶಿಕ್ಷಣ ಕೇವಲ ಡಿಗ್ರಿಗೆ ಮಾತ್ರ ಸಿಮೀತವಲ್ಲ: ಎಂ ವೀರಪ್ಪ ಮೊಯಿಲಿ

ಮಂಗಳೂರು:  ನಾಯಕತ್ವದ ಗುಣಗಳನ್ನು ಕಲಿಸಿಕೊಟ್ಟ ಪ್ರಯೋಗ ಶಾಲೆ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಎಂದು ಚಿಕ್ಕಬಳ್ಳಾಪುರ ಲೋಕಸಭಾಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಹೇಳಿದರು.

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಫೆಬ್ರವರಿ 26 ರಂದು ನಡೆದ ರವೀಂದ್ರ ಕಲಾಭವನ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಕಲಾಭವನದ ಉದ್ಘಾಟನೆ ನಡೆಸಿ ಮಾತನಾಡಿದ ಅವರು, ಕಾಲೇಜು ಜೀವನವನ್ನು ಮೆಲುಕು ಹಾಕುತ್ತಾ, ಶಿಕ್ಷಣ ಕೇವಲ ಡಿಗ್ರಿಗೆ ಮಾತ್ರ ಸಿಮೀತವಲ್ಲ, ಪ್ರತಿಯೊಬ್ಬರ ಜೀವನ ನಡೆಯನ್ನು ತಿಳಿಸುವ ಸಾಧನವಾಗಿದೆ. ಮೆರಿಟ್ ಹುಟ್ಟಿನಿಂದ ಬರುವಂತಹದಲ್ಲ, ಸಂಸ್ಕಾರ, ಪರಿಶ್ರಮದಿಂದ ಬರುತ್ತೆ ಎಂದರು.

ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಸದಾ ಇರಬೇಕು, ಸೂಕ್ತ ಅವಕಾಶ ವಿದ್ಯಾ ಸಂಸ್ಥೆ ನೀಡಬೇಕು. ಶಿಕ್ಷಣದ ಜೊತೆಗೆ ಇತರ ಚಟುವಟಿಕಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವೂ ತೊಡಗಿಸಿಕೊಳ್ಳಬೇಕು ಆಗ ಮಾತ್ರ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನೂತನವಾಗಿ ನಿರ್ಮಾಣಗೊಂಡ ರವೀಂದ್ರ ಕಲಾಭವನ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಮರ್ಪಣೆಯಾಗಿದೆ. ಕಲಾಭವನದ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಸ್ಮಾರ್ಟ್ ಸಿಟಿಯ ವ್ಯಾಪಿಯಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಬರುವುದಾದರೆ ಅನುದಾನ ಬಿಡುಗಡೆ ಮಾಡವುದಾಗಿ ನಗಾರಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಭರವಸೆ ನೀಡಿದರು.

ಕುಲಸಚಿವರು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಪ್ರೊ ಎ ಎಂ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು,

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ , ಮಹಾನಗರ ಪಾಲಿಕೆ ಮಹಾಪೌರರು ಭಾಸ್ಕರ್ ಕೆ, ಪ್ರಾಂಶುಪಾಲರು ಡಾ ಉದಯ ಕುಮಾರ್, ಉಪಸ್ಥಿತರಿದ್ದರು.


Spread the love