ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

Spread the love

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್‍ರವರು ಜುಲಾಯಿ 7 ರ ಬೆಳಗ್ಗೆ ತಮ್ಮ 85 ನೇ ವಯಸ್ಸಿನಲ್ಲಿ ದೈವಾದೀನರಾದರು.

1934ರಲ್ಲಿ ಕಿರೆಂನಲ್ಲಿ ಜನಿಸಿದ ಇವರು 1960ರಲ್ಲಿ ಗುರುದೀಕ್ಷೆಯನ್ನು ಪಡೆದರು. ಧವರ್iಗುರುಗಳಾಗಿ ಬಿಜೈ, ಶಿರ್ವಾ,ಅತ್ತೂರು, ಅಲ್ಲಿಪಾದೆ, ಸುಳ್ಯಾ, ಬೆಳ್ತಂಗಡಿ, ಅಗ್ರಾರ್, ತಣ್ಣೀರುಬಾವಿ, ವಿಜಯಡ್ಕ ಹಾಗೂ ತೊಕೂರು ಚರ್ಚ್‍ಗಳಲ್ಲಿ ವಿಚಾರಣ ಗುರುಗಳಾಗಿ ಹಾಗೂ ರೊಸಾರಿಯೊ ಹೈಸ್ಕೂಲ್(1969 -1973) ,ಕಲ್ಯಾಣಪುರ ಹೈಸ್ಕೂಲ್(1973 -1979), ಕೂಳೂರು ಹೈಸ್ಕೂಲ್(1981 – 1987) ಹಾಗೂ ಕಾಸ್ಸಿಯ ಹೈಸ್ಕೂಲ್ (1988 -1993) ಇಲ್ಲಿ ಮುಖ್ಯೋಪಾದಯರಾಗಿ ಸೇವೆಸಲ್ಲಿರುತ್ತಾರೆ.

ಅವರ ಅಂತ್ಯಕ್ರಿಯೆಯು, ನಾಳೆ 8.7.2019 ರಂದು ಸಂಜೆ 4 ಗಂಟೆಗೆ, ವಾಲೆನ್ಸಿಯ ಚರ್ಚ್‍ನಲ್ಲಿ ನಡೆಯಲಿದೆ


Spread the love