ಶಿರೂರು ಸ್ವಾಮೀಜಿ ನಿಧನ: ವೀರೇಂದ್ರ ಹೆಗ್ಗಡೆ ಯವರ ಸಂತಾಪ

Spread the love

ಶಿರೂರು ಸ್ವಾಮೀಜಿ ನಿಧನ: ವೀರೇಂದ್ರ ಹೆಗ್ಗಡೆ ಯವರ ಸಂತಾಪ

ಶೀರೂರು ಪೂಜ್ಯಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಅಕಾಲಿಕ ನಿಧನದ ಸುದ್ದಿ ತಿಳಿದು ದುಃಖವಾಯಿತು.

ಪೂಜ್ಯ ಸ್ವಾಮೀಜಿಯವರು ಸಂಸ್ಕøತ ಮತ್ತುಮಧ್ವ ತತ್ವಗಳಲ್ಲಿ ಘನ ವಿದ್ವಾಂಸರು.ಭಗವಾನ್ ಶ್ರೀ ಕೃಷ್ಣನ ಎರಡು ವರ್ಷಗಳ ಅವರ ಪರ್ಯಾಯದಅವಧಿಯಲ್ಲಿ ನಿತ್ಯವೂ ವೈವಿಧ್ಯಮಯ ಅಲಂಕಾರಗಳನ್ನು ಮಾಡಿ ಭಗವಾನ್ ಶ್ರೀ ಕೃಷ್ಣ ಸದಾ ಸ್ಮರಣೀಯವಾಗುವಂತೆ ಮಾಡಿದ್ದಾರೆ.ಅವರುಕೂಡಾ ಶಾಶ್ವತ ಸ್ಮರಣೀಯರಾಗಿ ಸೇವೆ ಮಾಡಿದ್ದಾರೆ.

ಸಾಮಾಜಿಕ ಕಾರ್ಯಗಳ ಬಗ್ಯೆಅವರಉತ್ಸಾಹ ಹಾಗೂ ಯುವಜನತೆಯನ್ನುಧಾರ್ಮಿಕ ಕಾರ್ಯಗಳತ್ತ ಆಕರ್ಷಿಸುವಕಾರ್ಯಕ್ರಮಗಳು ಉತ್ತಮ ಫಲ ನೀಡಿವೆ.

ಪೂಜ್ಯರು ನೇರಮಾತುಮತ್ತು ಮುಚ್ಚುಮರೆಇಲ್ಲದ ನಿಲುವುಗಳಿಂದ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು.ಅವರ ಅಕಾಲಿಕ ಮರಣದಿಂದ ನನಗೆ ಆಶ್ಚರ್ಯವೂ, ದುಃಖವೂಆಗಿದೆ.ಅವರು ಮಾಡಿದ ಸತ್ಕಾರ್ಯಗಳನ್ನು ಸದಾ ನೆನಪಿಡುವಂತೆಶ್ರೀ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಶ್ರೀ ಕೃಷ್ಣ ಹರಸಲೆಂದು ಪ್ರಾರ್ಥಿಸುತ್ತೇನೆ.

ಶೀರೂರು ಶ್ರೀ ನಿಧನಕ್ಕೆ ಯುಟಿಕೆ ಸಂತಾಪ

ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಅಗಲುವಿಕೆ ಮನಸ್ಸಿಗೆ ತುಂಬಾ ನೋವು ನೀಡಿದೆ.
ಆಧ್ಯಾತ್ಮಿಕ ಗುರುಗಳಾಗಿ, ಮಾನವೀಯತೆಯ ಹರಿಕಾರರಾಗಿದ್ದ ಸ್ವಾಮೀಜಿಯವರ ನಿಧನಕ್ಕೆ ನಗರಾಭಿವೃದ್ಧಿ ಮತ್ತು ವಸತಿ ಸಚಿವರಾದ ಯು.ಟಿ.ಖಾದರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love