ಶಿವರಾಜ್ ಕರ್ಕೆರಾ ಕೊಲೆ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ

Spread the love

ಶಿವರಾಜ್ ಕರ್ಕೆರಾ ಕೊಲೆ ಪ್ರಕರಣ; ಇನ್ನಿಬ್ಬರು ಆರೋಪಿಗಳ ಬಂಧನ

ಮಂಗಳೂರು: ತಣ್ಣಿರುಬಾವಿ ಶಿವರಾಜ್ ಕರ್ಕೆರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರು ಆರೋಪಿಗಳನ್ನು ಪಣಂಬೂರು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ತಣ್ಣೀರುಬಾವಿ ನಿವಾಸಿ ಜೀವನ್ ಪಿರೇರಾ (36) ಮತ್ತು ಬಾಗಲಕೋಟೆ ನಿವಾಸಿ ಸತೀಶ್ (29) ಎಂದು ಗುರುತಿಸಲಾಗಿದೆ.

ಜನವರಿ 22 ರಂದು ಬೆಳಗಿನ ಜಾವ ಮನೆಯ ಟೆರೆಸ್ ಮೇಲೆ ಮಲಗಿದ್ದ ಶಿವರಾಜ್ ಕರ್ಕೇರಾ ಎಂಬವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಇದಕ್ಕೆ ಸಂಬಂಧಿಸಿ ಈಗಾಗಲೇ 3 ಜನ ಆರೋಪಿಗಳನ್ನು ಬಂಧಿಸಿದ್ದು ಬಂಧಿತರು ನ್ಯಾಯಾಂಗ ಬಂಧನದಲ್ಲಿದ್ದು, ಪ್ರಸ್ತುತ ಕೊಲೆ ಕೃತ್ಯ ಸಂಚು ರೂಪಿಸಲು ಸಹಕರಿಸಿ ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವುದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.


Spread the love