ವ್ಯಕ್ತಿಯೊಬ್ಬರ ಕೊಲೆಗೆ ಸಂಚು ; ಸಿಸಿಬಿ ಪೋಲಿಸರಿಂದ ಆರು ಮಂದಿ ಬಂಧನ

Spread the love

ವ್ಯಕ್ತಿಯೊಬ್ಬರ ಕೊಲೆಗೆ ಸಂಚು ; ಸಿಸಿಬಿ ಪೋಲಿಸರಿಂದ ಆರು ಮಂದಿ ಬಂಧನ

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆ ಹಾಗೂ ದರೋಡೆಗೆ ಸಂಚು ರೂಪಿಸುತ್ತಿದ್ದ ಆರು ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಸಫ್ವಾನ್ ಹುಸೇನ್, ಮೊಹಮ್ಮದ್ ಫೈಸಲ್, ಅಬ್ದುಲ್ ನಾಸೀರ್, ಸಂಶುದ್ದಿನ್, ಉಮ್ಮರ್ ಫಾರೂಕ್, ಮೊಹಮ್ಮದ್ ಅನ್ಸಾರ್ ಎಂದು ಗುರುತಿಸಲಾಗಿದೆ.

ಫೆಬ್ರವರಿ19 ರಂದು ಮಂಗಳೂರು ನಗರದ ಪಣಂಬೂರು ಪೋಲಿಸ್ ಠಾಣಾ ವ್ಯಾಪ್ತಿಯ ತಣ್ಣೀರು ಬಾವಿ ಬೀಚ್ ರಸ್ತೆಯಲ್ಲಿ ಮಾರತಿ ಸ್ವಿಫ್ಟ್ ಕಾರು ಹಾಗೂ ರಿಕ್ಷಾವೊಂದರಲ್ಲಿ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದವರು ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸತ್ತಿದ್ದ ಬಗ್ಗೆ ಮಂಗಳೂರು ಸಿಸಿಬಿ ಪೋಲಿಸರಿಗೆ ಮಾಹಿತಿ ಬಂದಂತೆ ಸದ್ರಿ ಸ್ಥಳದಲ್ಲದ್ದ ಕಾರನ್ನು ಅಡ್ಡಗಟ್ಟಿ ರಿಕ್ಷಾದಲ್ಲಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 2 ಪಿಸ್ತೂಲುಗಳು, 7 ಸಜೀವ ಮದ್ದುಗುಂಡುಗಳು, 3 ಚೂರಿಗಳೂ, 3 ಮೊಬೈಲ್ ಫೋನ್, ಮಾರುತಿ ಸ್ವಿಫ್ಟ್ ಕಾರು, ಬಜಾಜ್ ಆಟೋರಿಕ್ಷಾವನ್ನು ವಶಪಡಿಸಿಕೊಳ್ಳಲಾಗಿದೆ.

 


Spread the love