ಶ್ರೀ ಕನ್ನಿಕಾ ವಿದ್ಯಾಭಾರತಿ ಮಹಿಳಾ ಸಂಘ: ಆಮಂತ್ರಣ ಪತ್ರಿಕೆ ಬಿಡುಗಡೆ

Spread the love

ಶ್ರೀ ಕನ್ನಿಕಾ ವಿದ್ಯಾಭಾರತಿ ಮಹಿಳಾ ಸಂಘ: ಆಮಂತ್ರಣ ಪತ್ರಿಕೆ ಬಿಡುಗಡೆ

ಕುಂದಾಪುರ: ಶ್ರೀ ಕನ್ನಿಕಾ ವಿದ್ಯಾಭಾರತಿ ಮಹಿಳಾ ಸಂಘ (ರಿ) ಕಂಡ್ಲೂರು ಇದರ 15ನೇ ವರ್ಷದ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶನಿವಾರ ಜರುಗಿತು.

ಕಂಡ್ಲೂರಿನ‌ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಸನ್ ಪ್ರೌಢ ಶಾಲಾ ಶಿಕ್ಷಕರಾದ ಗೋಪಾಲ ವಿಷ್ಣು ಭಟ್ ಮತ್ತು ರಜನಿ ಗೋಪಾಲ ಭಟ್ ದಂಪತಿಗಳು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷೆ ಸೀಮಾ ವಸಂತ್, ಅಧ್ಯಕ್ಷೆ ಜಯಂತಿ ಶೇರೆಗಾರ್, ಕಾರ್ಯದರ್ಶಿ ರೇಖಾ ಜೋಗಿ, ಕೋಶಾಧಿಕಾರಿ ಗೌರಿ ಶ್ರೀಯಾನ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.


Spread the love