ಶ್ರೇಯಸ್ ಕೊಟ್ಯಾನ್‍ಗೆ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Spread the love

ಶ್ರೇಯಸ್ ಕೊಟ್ಯಾನ್‍ಗೆ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಉಡುಪಿ : ಭಾರತದ ಗಣತಂತ್ರ ದಿವಸದ ಪ್ರಯುಕ್ತ ಹಾಗೂ “ಸಂವಿಧಾನ ದಿವಸ” ವನ್ನು ಆಚರಿಸುವ ಪ್ರಯುಕ್ತ “ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರು” (Patriotism & Nation Building) ಕುರಿತ ಇಂಗ್ಲೀಷ್ ಭಾಷೆಯ ಭಾಷಣಸ್ಪರ್ಧೆಯನ್ನು ನೆಹರು ಯುವ ಕೇಂದ್ರ ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ಆಯೋಜಿಸಿತ್ತು.


ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಶ್ರೇಯಸ್ ಕೊಟ್ಯಾನ್ ರವರು ಇದೇ ಜನವರಿ ಯ 21-22 ರಂದು ನವದೆಹಲಿಯ ನಡೆದ ರಾಷ್ಟ್ರ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ, 2 ರೂ ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಗಳಿಸಿದ್ದಾರೆ.

ಕೇಂದ್ರ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಡಾ. ಅಮರೇಂದ್ರ ಕುಮಾರ್ ದುಬೆ IAS, ಇವರು ಪ್ರಶಸ್ತಿ ನೀಡಿ ಗೌರವಿಸಿದರು. ಬಹುಮಾನ ವಿತರಣೆಯ ವೇಳೆ ನೆಹರು ಯುವ ಕೇಂದ್ರ ಸಂಘಟನೆಯ ವೈಸ್ ಚೇರ್‍ಮ್ಯಾನ್ ದಿನೇಶ್ ಪ್ರತಾಪ್ ಸಿಂಗ್, ನೆಹರು ಯುವ ಕೇಂದ್ರ ಸಂಘಟನೆಯ ಡಿಜಿ, ಮೇಜರ್ ಜನರಲ್ ದಿಲಾವರ್ ಸಿಂಗ್, ನೆಹರು ಯುವ ಕೇಂದ್ರ ಸಂಘಟನೆಯ ಎಕ್ಸುಕ್ಯೂಟಿವ್ ಡೈರೆಕ್ಟರ್ ವೀರೇಂದ್ರ ಮಿಶ್ರಾ ಹಾಗೂ ಕೇಂದ್ರ ಯುವ ಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಉನ್ನತ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸಾಧನೆಯ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯವರು ಹರ್ಷ ಹಾಗೂ ಪ್ರಶಂಸೆ ವ್ಯಕ್ತಪಡಿಸಿದ್ದು, ಇದೇ ಜನವರಿ 26 ರಂದು ನಡೆಯುವ ಗಣರಾಜ್ಯ ದಿನದಂದು ಜಿಲ್ಲಾ ಮಟ್ಟದಲ್ಲಿ ಶ್ರೇಯಸ್ ಜಿ ಕೊಟ್ಯಾನ್ ರವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲು ಆಯೋಜಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.


Spread the love