ಶ್ವಾನ ನೋಂದಣಿ ಪ್ರಮಾಣ ಪತ್ರ:ಮಹಾನಗರಪಾಲಿಕೆ ಸ್ಪಷ್ಟೀಕರಣ

Spread the love

ಶ್ವಾನ ನೋಂದಣಿ ಪ್ರಮಾಣ ಪತ್ರ:ಮಹಾನಗರಪಾಲಿಕೆ ಸ್ಪಷ್ಟೀಕರಣ

ಮಂಗಳೂರು: ಸಾರ್ವಜನಿಕರು ಶ್ವಾನ ನೋಂದಣಿ ಪ್ರಮಾಣ ಪತ್ರ ಪಡೆಯುವ ಬಗ್ಗೆ ದಿನಾಂಕ 28/11/2023 ರಂದು ಪ್ರಕಟಣೆಯಾದ ಪತ್ರಿಕಾ ವರದಿಗೆ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಲಾಗಿದೆ

ಪಾಲಿಕೆ ವ್ಯಾಪ್ತಿಯ ಶ್ವಾನ ಹೊಂದಿರುವ ನಾಗರೀಕರು ಶ್ವಾನ ನೋಂದಣಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿ ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಯ ಕಚೇರಿಗೆ ಹಲವು ಪತ್ರಗಳು ಬಂದಿದ್ದು, ಸದರಿ ವಿಷಯದ ಬಗ್ಗೆ ಸಾರ್ವಜನಿಕರು ಹಾಗೂ ಪ್ರಾಣಿ ಪ್ರಿಯರು ಸಾಕಷ್ಟು ಗೊಂದಲ ವ್ಯಕ್ತಪಡಿಸುತ್ತಿರುವುದನ್ನು ಗಮನಿಸಲಾಗಿದೆ. ಪ್ರಸ್ತುತ ಶ್ವಾನ ನೋಂದಣಿ ಪ್ರಮಾಣ ಪತ್ರ ಪಡೆಯುವ ಬಗ್ಗೆ ಇರುವ ಕಾನೂನು ನಿಯಮಗಳ ರಚನೆಯು ಪ್ರಗತಿಯಲ್ಲಿದ್ದು, ಸ್ಪಷ್ಟ ನಿರ್ಣಯವಾದ ಬಳಿಕ ನಾಗರೀಕರ ಗಮನಕ್ಕಾಗಿ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ಶ್ವಾನ ನೋಂದಣಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಿಯಮ ಜಾರಿಯಾಗುವವರೆಗೂ ಯಾವುದೇ ಇತರ ನಿರಾಕ್ಷೇಪಣಾ ಪತ್ರ ಮತ್ತು ದಾಖಲೆಗಳ ಕುರಿತು ಗೊಂದಲಕ್ಕೊಳಗಾಗಬಾರದೆಂದು ಮಹಾನಗರಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love