ಸಂಘಪರಿವಾರದಿಂದ ಈದ್ ಮೀಲಾದ್ ಆಚರಣೆಯ ಸಂದರ್ಭ ಶಾಂತಿ ಕದಡುವ ಹುನ್ನಾರ: ಗರಿಷ್ಠ ಭದ್ರತೆ ನೀಡಲು ಎಸ್‌ಡಿಪಿಐ ಆಗ್ರಹ

Spread the love

ಸಂಘಪರಿವಾರದಿಂದ ಈದ್ ಮೀಲಾದ್ ಆಚರಣೆಯ ಸಂದರ್ಭ ಶಾಂತಿ ಕದಡುವ ಹುನ್ನಾರ: ಗರಿಷ್ಠ ಭದ್ರತೆ ನೀಡಲು ಎಸ್‌ಡಿಪಿಐ ಆಗ್ರಹ

ಮಂಗಳೂರು: ನಾಗಮಂಗಳದಲ್ಲಿ ನಡೆದ ಘಟನೆಯನ್ನು ನೆಪವಾಗಿರಿಸಿಕೊಂಡು ಈದ್ ಮೀಲಾದ್ ಆಚರಣೆಯ ಸಂದರ್ಭದಲ್ಲಿ ಸಂಘಪರಿವಾರ ಶಾಂತಿ ಕದಡುವ ಸಲುವಾಗಿ ಕಿಡಿಗೇಡಿ ಕೃತ್ಯ ನಡೆಸುವ ಅಪಾಯ ಇದೆ.ಹಾಗಾಗಿ ಈದ್ ಮೀಲಾದ್ ಆಚರಣೆಗೆ ಹಾಗೂ ಪ್ರಮುಖವಾಗಿ ಮೆರವಣಿಗೆ ಸಂದರ್ಭದಲ್ಲಿ ಸೂಕ್ತ ಗರಿಷ್ಠ ಭದ್ರತೆಯನ್ನು ಪೋಲಿಸ್ ಇಲಾಖೆ ನೀಡಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಮಂಡ್ಯದ ನಾಗಮಂಗಲದಲ್ಲಿ ನಡೆದ ಅಹಿತಕರ ಘಟನೆಯನ್ನು ನೆಪವಾಗಿರಿಸಿಕೊಂಡು ಶರಣ್ ಪಂಪ್‌ವೆಲ್,ಆರ್ ಅಶೋಕ್, ಪ್ರತಾಪ್ ಸಿಂಹ ಸೇರಿದಂತೆ ಸಂಘಪರಿವಾರ ಹಾಗೂ ಬಿಜೆಪಿ ನಾಯಕರು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಚೋದನಕಾರಿ ಭಾಷಣಕಾರರ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿ ಬಂಧಿಸಬೇಕಾಗಿದ್ದ ಪೋಲೀಸರು ಮೌನಕ್ಕೆ ಶರಣಾಗಿರುವುದು ಖಂಡನೀಯ.

ಶರಣ್ ಪಂಪ್‌ವೆಲ್ ನೇರವಾಗಿಯೇ ಈದ್ ಮೀಲಾದ್ ಆಚರಣೆಯ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಸುವ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರು ಪೋಲೀಸರು ಈತನಕ ಕ್ರಮ ಕೈಗೊಂಡಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದರು ಇಂತಹ ಕೋಮು ಕ್ರಿಮಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಸರ್ಕಾರ ಕೇಶವ ಕೃಪದ ಪ್ರಮುಖರನ್ನು ಸಂತುಷ್ಟ ಪಡಿಸುವಂತಹ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ‌.

ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯ ಅಂಗವಾಗಿ ಜಿಲ್ಲಾಧ್ಯಂತ ನಡೆಯುವ ಕಾರ್ಯಕ್ರಮ ಹಾಗೂ ಮೆರವಣಿಗೆಗಳಿಗೆ ಪೋಲಿಸ್ ಇಲಾಖೆ ಗರಿಷ್ಠ ಭದ್ರತೆ ನೀಡಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments