ಸಂತ್ರಸ್ತರಿಗೆ ಹೊಸಮನೆ ನಿರ್ಮಾಣಕ್ಕೆ ತಲಾ 5ಲಕ್ಷ ರೂ ಪರಿಹಾರ : ಯಡಿಯೂರಪ್ಪ

Spread the love

ಸಂತ್ರಸ್ತರಿಗೆ ಹೊಸಮನೆ ನಿರ್ಮಾಣಕ್ಕೆ ತಲಾ 5ಲಕ್ಷ ರೂ ಪರಿಹಾರ : ಯಡಿಯೂರಪ್ಪ

ಮಂಗಳೂರು : ಬೆಳ್ತಂಗಡಿಯ ಕುಕ್ಕಾವು ಗ್ರಾಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿ ನೆರೆ ಸಂತ್ರಸ್ತರ ಜೊತೆಗೆ ಮಾತುಕತೆ ನಡೆಸಿ, ಸಂತ್ರಸ್ತರಿಗೆ ಹೊಸಮನೆ ನಿರ್ಮಣಕ್ಕೆ ತಲಾ 5ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಂಗಳೂರು ಬಜ್ಪೆ ವಿಮಾನ ನಿಲ್ದಾಣ ಕ್ಕೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನಿಂದ ಆಗಮಿಸಿ ಬೆಳ್ತಂಗಡಿ ಗೆ ತೆರಳಿ ನೆರೆಯಿಂದ ಕೊಚ್ಚಿ ಹೋದ ಕುಕ್ಕಾವು ಸೇತುವೆಗೆ ಭೇಟಿ ನೀಡಿದ ಬಳಿಕ ಕುಕ್ಕಾವು ಪರಿಹಾರ ಕೇಂದ್ರದ ಲ್ಲಿ ಸಂತ್ರಸ್ತರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರನ್ನುದ್ದೇಶಿ ಮಾತನಾಡುತ್ತಿದ್ದರು.

ಸಂತ್ರಸ್ತರ ಮನೆ ರಿಪೇರಿ ಗೆ ತಲಾ ಒಂದು ಲಕ್ಷ ರೂ ಪರಿಹಾರ ನೀಡಲಾಗುವುದು. ಬಾಡಿಗೆ ಮನೆ ಪಡೆದು ಬಾಡಿಗೆ ನೀಡಲು ಮಾಸಿಕ ತಲಾ 5ಸಾವಿರ ನೀಡಲಾಗುವುದು ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಹಾನಿ ಗೀಡಾದ ರಸ್ತೆ, ಸೇತುವೆ ತಡೆಗೋಡೆ ನಿರ್ಮಾಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. 275 ಮನೆಗಳು ಸಂಪೂರ್ಣ ಹಾನಿಯಾಗಿದ್ದು ಹೊಸ ಮನೆ ಕಟ್ಟಲು ವ್ಯವಸ್ಥೆ ಮಾಡಲಾಗುವುದು. ಪರಿಹಾರ ಕೇಂದ್ರದಲ್ಲಿರುವ ಎಲ್ಲ ಕುಟುಂಬಗಳಿಗೆ ಇದೀಗ ತತ್ ಕ್ಷಣ ಹತ್ತುಸಾವಿರ ರೂ ಪರಿಹಾರ ನೀಡಲಾಗುವುದು ಯಡಿಯೂರಪ್ಪ ತಿಳಿಸಿದ್ದಾರೆ.

ಸಂಸದ ಬಳಿನ್ ಕುಮಾರ್ ಕಟೀಲು, ಶಾಸಕರಾದ ಹರೀಶ್ ಪೂಂಜ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮೊದಲಾದವರು ಉಪಸ್ಥಿತರಿದ್ದರು.


Spread the love