ಸಂತ ಅಲೋಶಿಯಸ್ ಗೊನ್ಸಾಗ 450 ನೇ ವರ್ಷಾಚರಣೆ

Spread the love

ಸಂತ ಅಲೋಶಿಯಸ್ ಗೊನ್ಸಾಗ 450 ನೇ ವರ್ಷಾಚರಣೆ

 

ಕಾಲೇಜಿನ ಹೆಸರನ್ನು  ಪುಣ್ಯ ಪುರುಷರಾದ ಸಂತ ಅಲೋಶಿಯಸ್ ಗೊನ್ಸಾಗ ನೆನಪಿನಲ್ಲಿ ಸಂತ ಅಲೋಶಿಯಸ್ ಕಾಲೇಜು ಎಂದು ನಾಮಕರಣ ಮಾಡಲಾಗಿದೆ. 16 ನೇ ಶತಮಾನದಲ್ಲಿ ಇಟಲಿ ದೇಶದ ರಾಜಕುಮಾರರಾಗಿದ್ದ ಅಲೋಶಿಯಸ್ ಗೊನ್ಸಾಗ ರವರು ಎಲ್ಲಾ ಸುಖ, ವೈಭೋಗಗಳಿದ್ದರೂ ಅವುಗಳನ್ನೆಲ್ಲಾ ತ್ಯಾಗ ಮಾಡಿ ದೀನ ದಲಿತರ, ರೋಗಿಗಳ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟವರು. ಪ್ಲೇಗ್ ಎನ್ನುವ ಮಹಾ ಮಾರಿ ಇಡೀ ದೇಶವನ್ನು ಆವರಿಸಿ ರೋಗ ಪೀಡಿತರನ್ನು ಮುಟ್ಟಲು ಯಾರೂ ಧೈರ್ಯಮಾಡದಿದ್ದಾಗ ಅಲೋಶಿಯಸ್ ತನಗಾಗುವ ತೊಂದರೆಗಳನ್ನು ಲೆಕ್ಕಿಸದೆ ಪೀಡಿತರ ಸೇವೆ ಮಾಡಿದರು. ಕೊನೆಗೆ ಆ ಮಹಾಮಾರಿ ರೋಗಕ್ಕೆ ಕೇವಲ 24 ನೇ ವಯಸ್ಸಿನಲ್ಲಿ ತನ್ನ ಜೀವವನ್ನೇ ಬಲಿದಾನ ಮಾಡಿದರು (21-06-1591). ಅವರ ಸೇವೆ ಹಾಗೂ ಬಲಿದಾನ ಆದರ್ಶಪ್ರಾಯವಾಗಿದ್ದು ಆ ಶ್ರೇಷ್ಟ ವ್ಯಕ್ತಿತ್ವವನ್ನು ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಿ ಗುರುತಿಸಲಾಗಿದೆ.

ಈ ವರ್ಷ ಸಂತ ಅಲೋಶಿಯಸ್ ಗೊನ್ಸಾಗರವರ 450 ನೇ ವರ್ಷವಾಗಿದ್ದು ಅವರ ಹೆಸರಿನಲ್ಲಿ ವರ್ಷ ಪೂರ್ತಿ ಸಮಾಜ, ದೇಶಕ್ಕೆ ಉಪಯುಕ್ತವಾಗುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ 19-08-2018 ರಿಂದ 25-08-2018 ರವರೆಗೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸಲು ‘ಸೇವಾ ಸಪ್ತಾಹ’ ವನ್ನು ಆಚರಿಸಲು ನಿರ್ಧರಿಸಲಾಗಿದೆ.

ಸಂತ ಅಲೋಶಿಯಸ್ ಚಾಪೆಲ್ ನಲ್ಲಿ ವಿಶೇಷ ಪೂಜೆ ನಡೆಸಲಾಗುವುದು.

ನಂತರ ಸಂತ ಅಲೋಶಿಯಸ್ ಹೈಸ್ಕೂಲ್ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳು:

  • ಬೆಂಗಳೂರಿನ ಆರ್ಚ್ಬಿಷಪ್ ಅತಿ ವಂದನೀಯ ಪೀಟರ್ ಮಚಾಡೊ
  • ಮಂಗಳೂರಿನ ನೂತನ ಬಿಷಪ್ ಆಗಿ ನಿಯುಕ್ತಗೊಂಡಿರುವ ಅತಿ ವಂದನೀಯ ಪೀಟರ್ ಪೌಲ್ ಸಲ್ಡಾನ್ಹ
  • ಡಾ. ಎಂ.ಆರ್. ರವಿ, ಐಎಎಸ್ , ಮುಖ್ಯ ಆಡಳಿತಾಧಿಕಾರಿ ಯವರು, ದಕ.

ಕಾರ್ಯಕ್ರಮದಲ್ಲಿ ನಗರದ ಗಣ್ಯರು, ದಾನಿಗಳು, ಹಳೇ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಪ್ರತಿನಿಧಿಗಳು, ವಿದ್ಯಾರ್ಥಿ ಪ್ರತಿನಿಧಿಗಳುಹಾಗೂ ಇತರ ಆಹ್ವಾನಿತರು ಭಾಗವಹಿಸುತ್ತಾರೆ.

ಸೇವಾ ಸಪ್ತಾಹದ ಇತರ ಕಾರ್ಯಕ್ರಮಗಳು: ಪರಿಸರವನ್ನು ಸಂರಕ್ಷಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು – ವಿವರಗಳನ್ನು ಲಗತ್ತಿಸಲಾಗಿದೆ.

ರೆ. ಡಾ.ಪ್ರವೀಣ್ ಮಾರ್ಟಿಸ್, ರೆ.ಫಾ.ಡೈನೀಶಿಯಸ್ ವಾಝ್


Spread the love