ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ, ನವೇನ ಪ್ರಾರ್ಥನೆ-ಐದನೇ ದಿನ

13

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವ, ನವೇನ ಪ್ರಾರ್ಥನೆ-ಐದನೇ ದಿನ

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಮಹೋತ್ಸವಕ್ಕೆ ತಯಾರಿಯಾಗಿ ಐದನೇ ದಿನದ ಬಲಿ ಪೂಜೆಯನ್ನು ಫೆಬ್ರವರಿ 10 ರಂದು ಮಿಲಾಗ್ರಿಸ್ ದೇವಾಲಯದಲ್ಲಿ ವೈ. ಸಿ. ಎಸ್. (ಯಂಗ್ ಕ್ರಿಸ್ಚಿಯನ್ ಮೂವ್‍ಮೆಂಟ್) ಸಂಘಟನೆಯ ನಿರ್ದೇಶಕ ಫಾ. ರೂಪೇಶ್ ಮಾಡ್ತರವರು ಯುವಜನರಿಗಾಗಿ ಅರ್ಪಿಸಿದರು.

ಯುವಜನರು ಸಮುದಾಯಾದ, ಸಮಾಜದ ಆಧಾರ ಸ್ಥಂಭವಾಗಿದ್ದಾರೆ. ಯುವಕನಾಗಿ ಯೇಸು ಸ್ವಾಮಿ ತನ್ನ ತಂದೆ-ತಾಯಿಗೆ ವಿಧೇಯಾರಾಗಿ ನಡೆದರಲ್ಲದೆ ತನ್ನ ಜೀವನವನ್ನು ಪರರ ಸೇವಗಾಗಿ ಮುಡಿಪಾಗಿಟ್ಟರು. ಇಂದಿನ ಯುವಜನರಿಗೆ ಯೇಸು ಸ್ವಾಮಿ ಅದರ್ಶ ಮತ್ತು ಪ್ರೇರಣೆಯಾಗಿದ್ದಾರೆ. ಯುವಜನರು ಯೇಸುಸ್ವಾಮಿಯ ಪಂಥಾಹ್ವಾನವನ್ನು ಸ್ವೀಕರಿಸಿ ಅವರ ಹಾದಿಯಲ್ಲಿ ನಡೆಯಲು ಯುವಜನರಿಗೆ ಕರೆ ನೀಡಿದರು. ಸಮಾಜದ ಹಿರಿಯರು ಯುವಜನರಿಗೆ ಒಳಿತು ಮಾಡಿದಾಗ ಪ್ರಶಂಸೆ ವ್ಯಕ್ತಪಡಿಸಿ ತಪ್ಪು ಮಾಡಿದಾಗ ಯುವಜನರ ಗೌರವಕ್ಕೆ ದಕ್ಕೆ ಬಾರದಂತೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ಹೇಳಿದರು. ಬಲಿಪೂಜೆಯ ಆರಂಭಕ್ಕೆ ಎಲ್ಲಾ ಯುವಜನರು ಮುಖ್ಯದ್ವಾರದಿಂದ ಬಲಿಪೀಠದವರೆಗೆ ಸಾಲಾಗಿ ಮೆರವಣಿಗೆಯಲ್ಲಿ ಬಂದು ಕರ್ತರಿಗೆ ಪ್ರಣಾಮ ಸಲ್ಲಿಸಿದರು

ಫಾ. ಫ್ರಾನ್ಸಿಸ್ ಡಿ’ಸೋಜ ಸಂಸ್ಥೆಯ ಆಡಳಿತಾಧಿಕಾರಿ ನವೇನ ಪ್ರಾರ್ಥನೆ ನಡೆಸಿ ಕೊಟ್ಟರು. ಬಲಿಪೂಜೆಯಲ್ಲಿ ಭಾಗವಹಿಸಲು ಭಕ್ತಿ ಗೀತೆಗಳನ್ನು ಹಾಡಿದ ಯುವಜನರ  ಗಾಯನ ಮಂಡಳಿಯ ಸದಸ್ಯರಿಗೆ ಫಾ. ಒನಿಲ್ ಡಿ’ಸೋಜ ಸಂಸ್ಥೆಯ ನಿರ್ದೇಶಕರು ಧನ್ಯವಾದ ಸಲ್ಲಿಸಿದರು. ಸಾವಿರಾರು ಭಕ್ತಾಧಿಗಳು ಬಲಿಪೂಜೆ ಮತ್ತು ನವೇನ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.