ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಿಂದ ಜಿಪಿಎಲ್ ವಿಶೇಷ ಸಂಗ್ರಾರ್ಹ ಸಂಚಿಕೆ ಬಿಡುಗಡೆ

ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಿಂದ ಜಿಪಿಎಲ್ ವಿಶೇಷ ಸಂಗ್ರಾರ್ಹ ಸಂಚಿಕೆ ಬಿಡುಗಡೆ

ಕಾಶೀಮಠದ 21 ನೇ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀಮದ್ ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರು ಮಂಗಳೂರಿನ ಸಂಘನಿಕೇತನದಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಪಿಎಲ್ ವಿಶೇಷ ಸಂಗ್ರಹಾರ್ಹ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ಪ್ರಥಮ ಪ್ರತಿಯನ್ನು ಸಂಯಂಮೀಂದ್ರ ತೀರ್ಥ ಸ್ವಾಮೀಜಿಯವರು ಆಲ್ ಟೆಂಪಲ್ ಎಸೋಸಿಯೇಶನ್ ಅಧ್ಯಕ್ಷರಾಗಿರುವ ಚಾರ್ಟೆಡ್ ಅಕೌಂಟೆಂಟ್ ಜಗನ್ನಾಥ ಕಾಮತ್ ಅವರಿಗೆ ನೀಡಿದರು. ಇದೇ ಸಂದರ್ಭದಲ್ಲಿ ಜಿಪಿಎಲ್ ಆಯೋಜಕರನ್ನು ಸ್ವಾಮೀಜಿಯವರು ಹರಸಿದರು.

ಜಿಪಿಎಲ್ ವಿಶೇಷ ಸಂಚಿಕೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಸಮಗ್ರ ವಿವರಗಳು ಅದರೊಂದಿಗೆ ಕೊಡಿಯಾಲ್ ಸ್ಫೋರ್ಟ್ ಎಸೋಸಿಯೇಷನ್ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ವಿವಿಧ ಸಮಾಜಸೇವಾ ಕಾರ್ಯಗಳ ಫೋಟೋ ಮತ್ತು ಮಾಹಿತಿಗಳು ಒಳಗೊಂಡಿವೆ.

ಈ ವಿಶೇಷ ಸಂಚಿಕೆಯನ್ನು ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಹಾಗೂ ವಾಯಿಸ್ ಆಫ್ ಜಿಎಸ್ ಬಿ ಸೆಮಿಫೈನಲ್ ನಲ್ಲಿ ಉಪಸ್ಥಿತರಿದ್ದ ಸಂಗೀತಪ್ರಿಯರಿಗೆ ಹಂಚಲಾಗಿತ್ತು. ಈ ವಿಶೇಷ ಸಂಚಿಕೆಯನ್ನು ವಾಯಿಸ್ ಆಫ್ ಜಿಎಸ್ ಬಿ ಸೆಮಿಫೈನಲ್ ಸುತ್ತಿನಲ್ಲಿ ಆಯೋಜಕರು ರಘುವೀರ್ ಭಂಡಾರಕಾರ್ಸ್ ಮತ್ತು ವೇದಿಕೆಯಲ್ಲಿದ್ದ ವಿಶೇಷ ಅತಿಥಿಗಣ್ಯರಿಗೆ ಹಸ್ತಾಂತರಿಸಿದರು.