ಸಂಸತ್ತಿನಲ್ಲಿ ಜನಪರವಾಗಿ ಧ್ವನಿಯಾಗಲು ಪ್ರಮೋದ್ ಮಧ್ವರಾಜ್ ಅವರನ್ನು ಅಯ್ಕೆ ಮಾಡಿ : ವಿಶ್ವಾಸ್ ಶೆಟ್ಟಿ
ಕುಂದಾಪುರ : ಉಡುಪಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು ಅದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಪ್ರಮೋದ್ ಮದ್ವರಾಜ್ ಅವರನ್ನು ಸಂಸದರಾಗಿ ಅಯ್ಕೆ ಮಾಡುವ ಅವಶ್ಯಕತೆ ಇದೆ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಘಟಕದ ಜಿಲ್ಲಾ ಅಧ್ಯಕ್ಷರಾದ ವಿಶ್ವಾಸ್ ಶೆಟ್ಟಿ ಹೇಳಿದ್ದಾರೆ
ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಜನತೆ ಕಸ್ತೂರಿ ರಂಗನ್ ಸಮಸ್ಯೆ ಎದುರಿಸುತ್ತಿದ್ದು ಕೇಂದ್ರ ಸರಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಪ್ರಸ್ತುತ ಸಂಸದೆ ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದಾರೆ
ಅಡಿಕೆ ಬೆಳೆಗಾರರ ಸಮಸ್ಯೆ ರಾಷ್ಟ್ರೀಯ ಹೆದ್ದಾರಿ ಹೆದ್ದಾರಿ ಸಮಸ್ಯೆ ರಬ್ಬರ್ ಬೆಳೆಗಾರರ ಸಮಸ್ಯೆ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿ ನಾಶವಾಗುದ್ದರೂ ರೈತರಿಗೆ ಸೂಕ್ತ ಪರಿಹಾರ ಮತ್ತು ಸಮಸ್ಯೆ ಯ ಬಗ್ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಿನ ಸಂಸದರೂ ಸಂಪೂರ್ಣ ವಿಫಲ ಹೆದ್ದಾರಿಗಳಲ್ಲಿ ಟೋಲ್ ವಸೂಲಿ ವಿರುದ್ದ ಜನತೆ ಪ್ರತಿಭಟನೆ ಮಾಡಿದರೂ ಜನರಿಗೆ ನ್ಯಾಯ ಒದಗಿಸಲು ಈಗಿನ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ.
ಮೀನುಗಾರರು ನಾಪತ್ತೆಯಾಗಿ ಅನೇಕ ತಿಂಗಳು ಕಳೆದರೂ ಮೀನುಗಾರ ಕುಟುಂಬಕ್ಕೆ ನ್ಯಾಯ ಒದಗಿಸಲು, ಸಿ ಅರ್ ಜೆಡ್ ಸಮಸ್ಯೆ ಬಗ್ಗೆ ಒಂದೇ ಒಂದು ಮಾತಾಡದ ಸಂಸದರೂ ಪರಿಹಾರ ಕಂಡುಕೊಳ್ಳುವಲ್ಲಿ ಸಂಸದರು ವಿಫಲರಾಗಿದ್ದಾರೆ.
ಈ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಲು ಶೋಭಾ ಕರಂದ್ಲಾಜೆ ಸಂಪೂರ್ಣ ವಿಫಲರಾಗಿದ್ದು ಈ ಬಾರಿ ಜಿಲ್ಲೆಯ ಜನತೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದ್ವನಿ ಎತ್ತಿ ಕೇಂದ್ರ ಸರಕಾರದ ಗಮನಕ್ಜೆ ತಂದು ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಬ್ಯಾರ್ಥಿ ಪ್ರಮೋದ್ ಮದ್ವರಾಜ್ ಅವರನ್ನು ಬೆಂಬಲಿಸಲು ಉಡುಪಿ ಚಿಕ್ಕಮಗಳೂರು ಜನತೆಯಲ್ಲಿ ವಿಶ್ವಾಸ್ ಶೆಟ್ಟಿ ಮಾಧ್ಯಮ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ