ಸಂಸದ  ನಳಿನ್ ಕುಮಾರ್ ಕಟೀಲ್ ರಿಂದ  ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್  ಭೇಟಿ

72

ಸಂಸದ  ನಳಿನ್ ಕುಮಾರ್ ಕಟೀಲ್ ರಿಂದ  ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಮುರಳೀಧರನ್  ಭೇಟಿ

ದಕ್ಷಿಣ ಕನ್ನಡ ಸಂಸದ  ನಳಿನ್ ಕುಮಾರ್ ಕಟೀಲ್  ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ  ವಿ.ಮುರಳೀಧರನ್ವರನ್ನು ಭೇಟಿ ಮಾಡಿ ಕೆಲ ದಿನಗಳ ಹಿಂದೆ ಮಸ್ಕತ್ ಪೊಲೀಸರಿಂದ ಬಂಧಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ನಿವಾಸಿ  ಪ್ರಕಾಶ್ ಪೂಜಾರಿ ಇವರನ್ನು ಭಾರತಕ್ಕೆ ಕರೆತರುವ ವಿಚಾರವಾಗಿ ಮಧ್ಯಪ್ರವೇಶಿಸಲು ಮಸ್ಕತ್ ನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಂಸದರು ಸಚಿವರನ್ನು ವಿನಂತಿಸಿದರು.

ಈ ವಿಚಾರವಾಗಿ ವಿದೇಶಾಂಗ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು ಕಾನೂನು ತೊಡಕು ನಿವಾರಣೆಯಾದ ತಕ್ಷಣ ಅವರನ್ನು ಸ್ವದೇಶಕ್ಕೆ ಕರೆತರುವ ಭರವಸೆ ನೀಡಿದರು

ಇದಲ್ಲದೇ ಉದ್ಯೋಗಕ್ಕೆಂದು ಕುವೈಟ್ ಗೆ ತೆರಳಿ ಸಿಲುಕಿಕೊಂಡಿರುವ 73 ಭಾರತೀಯರ ಪೈಕಿ ಸ್ವದೇಶಕ್ಕೆ ಮರಳಲಿಚ್ಚಿಸಿರುವ 13 ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಸಲುವಾಗಿ ಹಣಕಾಸಿನ ತೊಡಕಿನಲ್ಲಿರುವ ಇವರಿಗೆ ವಿಮಾನ ಟಿಕೆಟ್ ನ ವ್ಯವಸ್ಥೆ ಮಾಡಿಸಿಕೊಡಲು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸಚಿವರನ್ನು ವಿನಂತಿಸಿದರು. ವಿಮಾನ ಟಿಕೆಟ್ ನ ವ್ಯವಸ್ಥೆ ಮಾಡಿಸಿಕೊಡುವ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಶಿಲಿಸಲಾಗುವುದು ಎಂದು ಸಚಿವರು ತಿಳಿಸಿದರು.

Leave a Reply

Please enter your comment!
Please enter your name here