ಸಚಿವ ಖಾದರ್ ಚಪ್ಪಲಿ ಹೇಳಿಕೆ; ಕ್ಷಮೆಗೆ ಬಿಜೆಪಿ ಒತ್ತಾಯ

Spread the love

ಸಚಿವ ಖಾದರ್ ಚಪ್ಪಲಿ ಹೇಳಿಕೆ; ಕ್ಷಮೆಗೆ  ಬಿಜೆಪಿ ಒತ್ತಾಯ

ಮಂಗಳೂರು: ಸಿ.ಪಿ.ಐ.ಎಮ್ ಮಂಗಳೂರಿನಲ್ಲಿ ಆಯೋಜಿಸಿದ್ದ ಸೌಹಾರ್ಧ ರ್ಯಾಲಿಗೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಗಮನವನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಿತ್ತು ಮತ್ತು ಬೃಹತ್ ಪ್ರತಿಭಟನಾ ರ್ಯಾಲಿಯನ್ನು ನಡೆಸಿತ್ತು .

ಪಿಣರಾಯಿ ವಿಜಯನ್‍ರ ರಕ್ತಸಿಕ್ತ ರಾಜಕೀಯ ಗೂಂಡಾಗಿರಿಯ ಕರಾಳ ಮುಖವನ್ನು ಅರಿತ ದ.ಕ.ಜಿಲ್ಲೆಯ ಜನರು ಈ ಕರೆಗೆ ಸ್ಪಂದಿಸಿ, ತಮ್ಮ ವಿರೋಧ ವ್ಯಕ್ತ ಪಡಿಸಿದ್ದರು.ಆದರೆ ಹಿಂದೂಗಳ ಓಟಿನಿಂದಾಗಿ ನಾನು ಶಾಸಕನಾಗಿರುವುದು ಎಂದು ಹೇಳುತ್ತಿರುವ ಮಂಗಳೂರು ಕ್ಷೇತ್ರದ ಶಾಸಕ ಮತ್ತು ಸಚಿವರಾದ ಯು.ಟಿ.ಖಾದರ್‍ರವರು ಈ ಹರತಾಳವನ್ನು ಬೆಂಬಲಿಸಿದ ದ.ಕ.ಜನತೆಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬ ಸಂಸ್ಕ್ರತಿ ಹೀನವಾದ ಮಾತುಗಳಿಂದ ಜನರನ್ನು ಅವಮಾನಿಸಿರುವುದು ಅತ್ಯಂತ ಖಂಡನೀಯವಾಗಿದೆ.

ಯು.ಟಿ.ಖಾದರ್‍ರವರು ರಾಜ್ಯದ ಆರೋಗ್ಯ ಸಚಿವರಾಗಿರುವ ಸಮಯದಲ್ಲಿ ತನ್ನ ಕಾರ್ಯವನ್ನು ಸರಿಯಾಗಿ ನಿಭಾಯಿಸದೆ,ಅನೇಕ ಭೃಷ್ಟಾಚಾರದ ಮಾತುಗಳು ಕೂಡಾ ಕೇಳಿ ಬಂದಿರುವುದರಿಂದ ಖಾತೆ ಬದಲಿಸಿಕೊಂಡು ಆಹಾರ ಸಚಿವರಾದ ನಂತರವೂ ಕೂಡಾ ರಾಜ್ಯದಲ್ಲಿ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ನಾನಾ ರೀತಿಯ ಲೋಪಗಳು ಕಂಡುಬಂದರೂ ಕೂಡಾ ಆವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಈ ರೀತಿಯ ಸಂಸ್ಕøತಿ ಹೀನ ಮಾತುಗಳು ಅವರ ಕೀಳುಮಟ್ಟದ ರಾಜಕೀಯವನ್ನು ತೋರಿಸುತ್ತದೆ.

ಆದ್ದರಿಂದ ಸಚಿವರು ಕೂಡಲೇ ಜಿಲ್ಲೆಯ ಜನತೆಯ ಮುಂದೆ ಕ್ಷಮೆಯಾಚಿಸಬೇಕು ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಇಲ್ಲವಾದಲ್ಲಿ ಈ ಮಾತಿಗೆ ಕ್ಷೇತ್ರದ ಜನತೆಯೇ ಸೂಕ್ತ ಉತ್ತರವನ್ನು ಮುಂದಿನ ಚುನಾವಣೆಯಲ್ಲಿ ನೀಡಲಿದ್ದಾರೆ ಎಂದು ಜಿಲ್ಲಾ ವಕ್ತಾರ ಜಿತೇಂದ್ರ.ಎಸ್.ಕೊಟ್ಟಾರಿ ತಿಳಿಸಿರುತ್ತಾರೆ.


Spread the love