ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ

Spread the love

ಸಚಿವ ಯು.ಟಿ. ಖಾದರ್ ಗೆ AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಅಮೆರಿಕದ ಇಲಿನಾಯ್ಸ್ ರಾಜ್ಯದ ನೇಪರ್ವಿಲ್ಲೆಯ ಯೆಲ್ಲೋ ಬಾಕ್ಸ್ ಸಭಾಂಗಣದಲ್ಲಿ ಜು. 25ರಂದು ಅಮೆರಿಕನ್ ಮಲ್ಟಿ ಎಥ್ನಿಕ್ ಕಮಿಷನ್ (AMEC)ಯ 15ನೇ ವಾರ್ಷಿಕ ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು

ಸಾರ್ವಜನಿಕ ಸೇವೆಯಲ್ಲಿ ಹಲವು ದಶಕಗಳಿಂದ ಸಲ್ಲಿಸಿರುವ ಸೇವೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ನಾಯಕತ್ವ, ಸಮಗ್ರ ಆಡಳಿತ ಹಾಗೂ ಸಮುದಾಯ-ಕೇಂದ್ರಿತ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಯು.ಟಿ. ಖಾದರ್ ಅವರನ್ನು AMEC ಗ್ಲೋಬಲ್ ಸಿಟಿಝನ್ ಲೀಡರ್ಶಿಪ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

2009ರಲ್ಲಿ ಸ್ಥಾಪನೆಯಾದ ಚಿಕಾಗೋ ಮೂಲದ ಲಾಭರಹಿತ ಸಂಸ್ಥೆಯಾದ AMEC ನಾಯಕತ್ವ, ಸಾರ್ವಜನಿಕ ಭಾಗವಹಿಸುವಿಕೆಗೆ ಉತ್ತೇಜನ, ಅಂತರರಾಷ್ಟ್ರೀಯ ಸಹಕಾರ ಹಾಗೂ ವಿವಿಧ ಸಂಸ್ಕೃತಿಗಳ ನಡುವೆ ಪರಸ್ಪರ ತಿಳಿವಳಿಕೆಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಅದರ ವಾರ್ಷಿಕ ಕಾಂಗ್ರೆಷನಲ್ ಗ್ಲೋಬಲ್ ಚಾಂಪಿಯನ್ಸ್ ಗಾಲಾ ಕಾರ್ಯಕ್ರಮದಲ್ಲಿ ಸರ್ಕಾರ, ಉದ್ಯಮ, ಶಿಕ್ಷಣ, ಆರೋಗ್ಯ, ಮಾಧ್ಯಮ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆ ನೀಡಿದ ಜಾಗತಿಕ ನಾಯಕರನ್ನು ಗುರುತಿಸಿ ಗೌರವಿಸಲಾಗುತ್ತದೆ.


Spread the love
Subscribe
Notify of

0 Comments