ಸರಕಾರದ ಅಧಿಕಾರಿಗಳ ಎಡವಟ್ಟು ಡಿಸಿಪಿ ಅಣ್ಣಾಮಲೈ ವರ್ಗಾವಣೆ ರದ್ದು – ಸರಕಾರ ಸ್ಪಷ್ಟನೆ

Spread the love

ಸರಕಾರದ ಅಧಿಕಾರಿಗಳ ಎಡವಟ್ಟು ಡಿಸಿಪಿ ಅಣ್ಣಾಮಲೈ ವರ್ಗಾವಣೆ ರದ್ದು – ಸರಕಾರ ಸ್ಪಷ್ಟನೆ

ಬೆಂಗಳೂರು; ಬೆಂಗಳೂರು ದಕ್ಷಿಣ ಭಾಗದ ಡಿಸಿಪಿ ಅಣ್ಣಾ ಮಲೈ ಅವರನ್ನು ವರ್ಗಾವಣೆ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿತ್ತು ಅದರಲ್ಲಿ ಡಿಸಿಪಿ ಅಣ್ಣಾ ಮಲೈ ಅವರ ಹೆಸರು ಕೂಡ ಇದ್ದು ಯಾವುದೇ ಹುದ್ದೆ ನೀಡಿಲ್ಲದಿರುವುದು ಚರ್ಚೆಗೆ ಕಾರಣವಾಗಿತ್ತು.

ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅಣ್ಣಾಮಲೈ ವರ್ಗಾವಣೆ ಆದೇಶವನ್ನು ರದ್ದು ಮಾಡಿದೆ ಅದರ ಜೊತೆಗೆ ಇದು ಸಿಬ್ಬಂದಿಯ ಎಡವಟ್ಟಿನಿಂದ ಆದ ಪ್ರಮಾದ ಅಧಿಕಾರಿಗಳ ಹೆಸರನ್ನು ಟೈಪ್ ಮಾಡುವುದರ ಜೊತೆಗೆ ಅಣ್ಣಾಮಲೈ ಅವರ ಹೆಸರನ್ನೂ ಟೈಪ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


Spread the love