ಸರ್ಜಿಕಲ್ ಸ್ಟ್ರೈಕ್ ಮಾಡುವ ಮೋದಿಗೆ 7 ಮೀನುಗಾರರನ್ನು ಹುಡುಕಲು ಆಗಲ್ವಾ – ಬಿಜೆಪಿ ನಾಯಕಿ ತಾರಾಗೆ ಡಾ| ಜಿ ಶಂಕರ್ ಕ್ಲಾಸ್

ಸರ್ಜಿಕಲ್ ಸ್ಟ್ರೈಕ್ ಮಾಡುವ ಮೋದಿಗೆ 7 ಮೀನುಗಾರರನ್ನು ಹುಡುಕಲು ಆಗಲ್ವಾ – ಬಿಜೆಪಿ ನಾಯಕಿ ತಾರಾಗೆ ಡಾ| ಜಿ ಶಂಕರ್ ಕ್ಲಾಸ್

ಕುಂದಾಪುರ: ಎ.19ರಂದು ಮಧ್ಯಾಹ್ನ ಬಗ್ವಾಡಿ ಶ್ರೀಮಹಿಷಾಸುರ ಮರ್ದಿನಿ ದೇವಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಮೀನುಗಾರರ ವಿವಿಧ ಬೇಡಿಕೆಗಳಿಗೆ ಸ್ಪಂದಿಸದ ಬಗ್ಗೆ ಬಿಜೆಪಿ ಸ್ಟಾರ್ ಪ್ರಚಾರಕಿ ನಟಿ ತಾರಾ ಹಾಗೂ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿಯವರನ್ನು ಮೀನುಗಾರ ಮುಖಂಡ, ಉದ್ಯಮಿ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ ಡಾ.ಜಿ.ಶಂಕರ್ ತೀವ್ರ ತರಾಟೆಗೆ ತೆಗೆದುಕೊಂಡ ಪರಿ ಇದು. ಈ ಮಾತುಕತೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೇವಳದ ರಥೋತ್ಸವದ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ ಸಭೆ ಯಲ್ಲಿ ಭಾಗವಹಿಸಿದ್ದ ಜಿ.ಶಂಕರ್, ಅಲ್ಲಿಗೆ ಆಗಮಿಸಿದ ಚಿತ್ರನಟಿ ತಾರಾ ಹಾಗೂ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರನ್ನು ವೇದಿಕೆಯಿಂದ ಇಳಿದು ಬಂದು ಗೌರಯುತವಾಗಿ ಸ್ವಾಗತಿಸಿಕೊಂಡರು. ಕಳೆದ ಹತ್ತು ವರ್ಷ ಗಳಿಂದ ಈಡೇರದ ಮೀನುಗಾರರ ಸಮಸ್ಯೆಗಳ ಕುರಿತು ಜಿ.ಶಂಕರ್ ಈ ಸಂದರ್ಭದಲ್ಲಿ ಅವರ ಮುಂದಿಟ್ಟರು.

ಮೀನುಗಾರರನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ಎರಡು ಬಾರಿ ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಮನವಿಯನ್ನು ಕೇಂದ್ರ ತಿರಸ್ಕರಿಸಿದೆ. ಅದೇ ರೀತಿ ಮೀನುಗಾರರಿಗೆ ಡಿಸೆಲ್ ಸಬ್ಸಿಡಿಯನ್ನು ಕೇಂದ್ರ ಸರಕಾರ ನೀಡಿಲ್ಲ. ಕಳೆದ ಹಲವು ತಿಂಗಳುಗಳಿಂದ ನಾಪತ್ತೆಯಾಗಿರುವ ಏಳು ಮೀನುಗಾರರನ್ನು ಈವರೆಗೆ ಪತ್ತೆ ಮಾಡಲು ಸರಕಾರಕ್ಕೆ ಸಾಧ್ಯ ವಾಗಿಲ್ಲ. ಈ ಕಾರಣದಿಂದ ನಾನು ಈ ಬಾರಿಯ ಚುನಾವಣೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಫೀಲ್ಡ್ಗೆ ಇಳಿಯಬೇಕಾಯಿತು ಎಂದು ಜಿ.ಶಂಕರ್ ತಿಳಿಸಿದರು.

ಬೈಂದೂರು ಕ್ಷೇತ್ರದಲ್ಲಿ ನಾವು ಈವರೆಗೆ ಫೀಲ್ಡ್ಗೆ ಇಳಿದಿಲ್ಲ. ಮೀನುಗಾರರ ತಾಳ್ಮೆಯನ್ನು ಪರೀಕ್ಷೆ ಮಾಡಲು ಹೋಗಬೇಡಿ. ಸಾಕಷ್ಟು ಮೀನುಗಾರರು ಬಿಜೆಪಿಯಲ್ಲಿ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಕೂಡಾ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸಿಲ್ಲ. ಆದರೆ ಈ ಬಾರಿ ಮೀನುಗಾರರ ಹಿತ ರಕ್ಷಣೆಯ ಉದ್ದೇಶದಿಂದ ಫೀಲ್ಡ್ಗೆ ಇಳಿಯಲೇ ಬೇಕಾಯಿತು ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನನಗೆ ಆತ್ಮೀಯರಾಗಿದ್ದಾರೆ. ಆದರೆ ಸಮಸ್ತ ಮೀನುಗಾರರ ವಿಚಾರ ಬಂದಾಗ ಅವರ ಹಿತ ಕಾಪಾಡುವುದು ನನ್ನ ಕರ್ತವ್ಯ. ನಮ್ಮ ಬೇಡಿಕೆಯನ್ನು ಯಡಿಯೂರಪ್ಪರಿಗೆ ತಿಳಿಸಿ, ಎರಡು ಮೂರು ದಿನದಲ್ಲಿ ನಮಗೆ ಭರವಸೆ ದೊರೆಯದಿದ್ದರೆ ಮೀನುಗಾರರು ಈ ಚುನಾವಣೆಯಲ್ಲಿ ಏನು ಮಾಡುತ್ತಾರೆ ನೋಡಿ ಎಂದು ಜಿ.ಶಂಕರ್ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ದೇ ವೇಳೆ ವಿಡಿಯೋ ದಲ್ಲಿ ಜಿ.ಶಂಕರ್ ಏರುದನಿಯಲ್ಲಿ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರಿಗೆ ಉಡಾಫೆ ಮಾತನಾಡಬೇಡಿ, ಇದೆಲ್ಲಾ ನಡೆಯುದಿಲ್ಲಾ ಇನ್ನು. ನಿಮಗೆ ನೆತ್ತಿಗೆ ಏರಿದೆಯೇ, ನಾನು ಹೇಳಿದ್ದು ಮಾಡುತ್ತೇನೆ. ಕಾಂಗ್ರೆಸ್ ನವರನ್ನು ಬಿಟ್ಟು ಬಿಡಿ ನೀವು ಏನು ಮಾಡಿದ್ರಿ ಹೇಳಿ. ನಾನು ಹತ್ತು ವರ್ಷ ಯಡಿಯೂರಪ್ಪ ನವರ ಬಳಿ ಫೈಲ್ ಹಿಡಿದು ತಿರುಗಾಡಿದ್ದೇನೆ. ಯಡಿಯೂರಪ್ಪ ನಿಮ್ಮ ಗುರುಗಳು ಮಾಡಬೇಕಾಗಿತ್ತಲ್ಲಾ. ಕರಾವಳಿ ಅವರ ವೋಟು ಬೇಡವೆ ನಿಮಗೆ. ನೀವು ಬಂದು ಏನು ಮಾಡಿದ್ರಿ ಹೇಳಿ , 9 ರೂಪಾಯಿ ಡಿಸೇಲ್ ಸಬ್ಸಿಡಿ ಕೊಟ್ರ ಮೀನುಗಾರರಿಗೆ. ನಿಮ್ಮ ಹತ್ರ ದೊಡ್ಡ ದೊಡ್ಡ ಕ್ಷಿಪಣಿ ಎಲ್ಲಾ ಇದೆ ಏಳು ಜನ ಮೀನುಗಾರರನ್ನು ಹುಡುಕಲು ಆಗಿಲ್ಲಾ ಅಂದರೆ ಮೋದಿ ಏನು ಮಾಡ್ತಾರೆ ಎಂದು ಪ್ರಶ್ನಿಸಿದ್ದಾರೆ. ವಿಚಾರದ ಗಂಭೀರತೆಯನ್ನು ಅರಿತ ಬಿಜೆಪಿ ಪದಾಧಿಕಾರಿಗಳು ಮತ್ತು ಮೀನುಗಾರ ಮುಖಂಡರು ಇರ್ವರನ್ನು ಸಂತೈಸಿದ್ದಾರೆ.

Notify of
Krishna Kulkarni

What a nonsense statement given by Mr Dr G Shankar Searching of missing fishermen is the duty of Karnataka police in case they not found it is the failure of Karnataka Police Let him ask resignation of Home Minister of Karnataka Why he haa to blame It has become a fashion to blame Modiji for every inciddnt

Manikanta

Modi govt avra kaiyali adastu hudukalu prayathnisidare.. Nima mythri sarkara yen madide. Yavano obba Minister naveen samudra ke ilibeka keltare.. Innobba avru namge vote madala navyake hudukbeku antare.. Mythri sarkara ke qn maadi..