ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ

Spread the love

ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ
ದೆಹಲಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ನೀಡುವ ಈ ವರ್ಷದ ವಿಶಿಷ್ಟ ಕನ್ನಡಿಗ ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕøತ ಅಂತರರಾಷ್ಟ್ರೀಯ ಖ್ಯಾತಿ ನೃತ್ಯಕಲಾವಿದ ಮತ್ತು ನೃತ್ಯ ಸಂಯೋಜಕ ಶ್ರೀ ಸೈಯದ್ ಸಲ್ಲಾವುದ್ದೀನ್ ಪಾಷಾ ಹಾಗೂ ಶಿಕ್ಷಣ ತಜ್ಞ ಹಾಗೂ ರಂಗಕರ್ಮಿ ಡಾ.ಎಸ್.ಎಲ್.ಭಂಡಾರಕರ್ ಅವರನ್ನು ಆಯ್ಕೆ ಮಾಡಲಾಗಿದೆ.

slbhandarkar syed-s-pasha

ಈ ಪ್ರಶಸ್ತಿಯನ್ನು ದಿನಾಂಕ 13.11.2011ರಂದು ನಡೆಯುವ ರಾಜ್ಯೋತ್ಸವ ಸಮಾರಂಭದಲ್ಲಿ ಸುಪ್ರೀಂಕೋರ್ಟ್‍ನ ನ್ಯಾಯವಾದಿ ಸಂಜಯ್ ಹೆಗಡೆ ಅವರು ಪ್ರಧಾನ ಮಾಡಲಿದ್ದಾರೆ. ಕನ್ನಡಕ್ಕೆ ವಿಶೇಷವಾಗಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ದೆಹಲಿ ಕರ್ನಾಟಕ ಸಂಘ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ನೀಡುತ್ತಾ ಬಂದಿದೆ.
ಶ್ರೀ ಸೈಯದ್ ಸಲ್ಲಾವುದ್ದೀನ್ ಪಾಷಾ
ಶ್ರೀ ಸೈಯದ್ ಸಲ್ಲಾವುದ್ದೀನ್ ಪಾಷಾಅವರು ಕಳೆದ 30 ವರ್ಷದಿಂದ ವಿಕಲ ಚೇತನರಿಗೆ ನೃತ್ಯತರಬೇತಿಯನ್ನು“ಎಬಿಲಿಟಿ ಅನ್‍ಲಿಮಿಟೆಡ್” ಸಂಸ್ಥೆಯ ಮೂಲಕ ನೀಡುತ್ತಾ ಬಂದಿದ್ದಾರೆ. ವಿಕಲಚೇತನರಿಗೆಗಾಲಿಕುರ್ಚಿಯ ಮೇಲೆ ಗಂಟೆಗಟ್ಟಲೆ ಕುಳಿತು ಶಾಸ್ತ್ರೀಯ ನೃತ್ಯ ಕಲೆಗಳನ್ನು ಕಲಿಸಿ, ಅವರಕಲೆಯನ್ನುರಾಷ್ಟ್ರ ಮತ್ತುಅಂತರಾಷ್ಟ್ರೀಯ ವೇದಿಕೆಯ ಮೇಲೆ ಪ್ರದರ್ಶಿಸಿ ಅವರಿಗೆ ಸಮಾಜದಲ್ಲಿ ಸಮಾನತೆ, ಗೌರವ ಮತ್ತು ಸಬಲೀಕರಣಕ್ಕಾಗಿತಮ್ಮಜೀವನವನ್ನು ಸಮರ್ಪಿಸಿದ್ದಾರೆ.ಇವರು ವಿಕಲಚೇತನರಿಗಾಗಿ ಗಾಲಿ ಕುರ್ಚಿಯ ಮೆಲೆ ಆವಿಷ್ಕಾರ ಮಾಡಿ ಸಂಯೋಜಿಸಿರುವ ರಾಮಾಯಣಆನ್ ವೀಲ್ಸ್, ಭಗವದ್ಗೀತಾಆನ್ ವೀಲ್ಸ್, ಯೋಗಾಆನ್ ವೀಲ್ಸ್, ಭರತನಾಟ್ಯಆನ್ ವೀಲ್ಸ್, ಸೂಫಿಆನ್ ವೀಲ್ಸ್ ಹೀಗೆ ನೂರಕ್ಕೂ ಹೆಚ್ಚು ನೃತ್ಯ ರೂಪಕಗಳು ಮತ್ತು ಹತ್ತು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ವಿಶ್ವದಾದ್ಯಂತ ನೀಡಿ ಲಿಮ್ಕಾ ಬುಕ್‍ಆಪ್‍ರೆಕಾಡ್ರ್ಸ್ ಮತ್ತುಗಿನ್ನಿಸ್ ವಲ್ರ್ಡರೆಕಾರ್ಡ್‍ನಲ್ಲಿ ವಿಶ್ವದಾಖಲೆ ಸ್ಥಾಪಿಸಿದ್ದಾರೆ.
ಇವರರಾಷ್ಟ್ರೀಯ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿ ಸನ್ಮಾನ ಮತ್ತು ಸಾಧನೆಗಳು:
ರಾಷ್ಟ್ರ ಪ್ರಶಸ್ತಿ 2007 : ವಿಕಲ ಚೇತನರಿಗೆಕಲೆಯ ಮೂಲಕ ಸಮಾಜದಲ್ಲಿಘನತೆ, ಸಬಲೀಕರಣಕ್ಕಾಗಿ ಪೂರ್ವರಾಷ್ಟ್ರಪತಿ ಶ್ರೀಮತಿ ಪ್ರತಿಭಾದೇವಿ ಸಿಂಗ್ ಪಾಟೀಲ್‍ಅವರಿಂದರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಕರ್ಮವೀರ ಪುರಸ್ಕಾರ 2010: ನೃತ್ಯ ಸಂಯೋಜನೆಯ ಮೂಲಕ ವಿಶೇಷ ನೃತ್ಯ ರೂಪಕಗಳನ್ನು ಗಾಲಿಕುರ್ಚಿಯ ಮೇಲೆ ಆವಿಷ್ಕಾರ ಮಾಡಿ ವಿಕಲಚೇತನರಿಗೆತರಬೇತಿ ನೀಡಿ, ಅವರಿಗೆಕಲಾಕ್ಷೇತ್ರದಲ್ಲಿ ಹೊಸ ಆಯಾಮವನ್ನು ನೀಡಿಅವರಿಗೆ ನೃತ್ಯದ ಮೂಲಕ ಹೊಸ ಜೀವನವನ್ನು ನೀಡಿ ಸಮಾಜದಲ್ಲಿಘನತೆ, ಗೌರವವನ್ನು ನೀಡಿದ್ದಕ್ಕಾಗಿ ಮತ್ತು ಸಬಲೀಕರಣಕ್ಕಾಗಿದೇಶದ ಪ್ರತಿಷ್ಠಿತ “ಸಂಸ್ಕøತಿ ಪೌಂಢೇಶನ್”ರವರಿಂದಕರ್ಮವೀರ ಪುರಸ್ಕಾರ ಪಡೆದಿದ್ದಾರೆ.
ಕರ್ನಾಟಕರಾಜ್ಯಪಾಲರಿಂದ ಪ್ರಶಸ್ತಿ 2001: ಶ್ರೀಯುತ ಪಾಷಾರವರು ವಿಶೇಷ ನೃತ್ಯತರಬೇತಿ ಮೂಲಕ ವಿವಿಧರೀತಿಯ ಅಂಗವಿಕಲ ಮಕ್ಕಳಿಗೆ ಶಾಸ್ತ್ರೀಯ ನೃತ್ಯ ಸಂಯೋಜನೆಯನ್ನು ಮೂಡಿಸಿರುವ ಅಸಾಧರಣ ಸೇವೆಯನ್ನುಕೃತಜ್ಞತೆಯಿಂದ ಸ್ಮರಿಸುತ್ತಾಕರ್ನಾಟಕದ ಪೂರ್ವರಾಜ್ಯಪಾಲರಾದ ಶ್ರೀಮತಿ ವಿ.ಎಸ್.ರಮಾದೇವಿಯವರು ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ.
ಕರ್ನಾಟಕ ಸಂಗೀತ ನೃತ್ಯಅಕಾಡೆಮಿಯ (ಕರ್ನಾಟಕ ಸರ್ಕಾರ) ಸದಸ್ಯರಾಗಿ ಸೇವೆ 1995-1998 : ಕರ್ನಾಟಕ ಸಂಗೀತ ನೃತ್ಯಅಕಾಡೆಮಿಯ ಸದಸ್ಯರಾಗಿ ಹಲವಾರು ನೃತ್ಯ ಕಾರ್ಯಾಗಾರಗಳು, ನೃತ್ಯೋತ್ಸವಗಳು ಮತ್ತು ಅನೇಕ ಹಿರಿಯ ನೃತ್ಯಕಲಾವಿದರಿಗೆ, ಗುರುಗಳಿಗೆ, ಪ್ರಶಸ್ತಿ, ಪ್ರೋತ್ಸಾಹ ಮತ್ತುಅಕಾಡೆಮಿಯ ಕಾರ್ಯಗಳನ್ನು ನಿರ್ವಹಿಸಿ, ಅಂದಿನ ಕರ್ನಾಟಕ ಸಂಗೀತ ನೃತ್ಯಅಕಾಡೆಮಿಯಅಧ್ಯಕ್ಷರಾದ ಶ್ರೀಮತಿ ಚಂದ್ರಭಾಗದೇವಿಯವರಒಡಗೂಡಿ 1995ರಿಂದ 1998ರವರೆಗೆ ಸೇವೆ ಸಲ್ಲಿಸಿದ್ದಾರೆ.
ಲಿಮ್ಕಾಬುಕ್‍ನಲ್ಲಿ ವಿಶ್ವದಾಖಲೆ 2008: ವಿಕಲಚೇತನರಿಗಾಗಿಗಾಲಿಕುರ್ಚಿ ಮೇಲೆ ನೂರಕ್ಕೂ ಹೆಚ್ಚು ವಿಶೇಷ ನೃತ್ಯ ಸಂಯೋಜನೆ ಮತ್ತು ವಿಶ್ವದಾದ್ಯಂತ ಹತ್ತು ಸಾವಿರಕ್ಕೂಅಧಿಕ ಪ್ರದರ್ಶನಗಳನ್ನು ನೀಡಿ ಲಿಮ್ಕಾ ಬುಕ್‍ಆಪ್ ವಲ್ಡ್‍ರೆಕಾಡ್ರ್ಸ್‍ನಲ್ಲಿ ವಿಶ್ವದಾಖಲೆಯನ್ನು ಮಾಡಿದ್ದಾರೆ.
ಗಿನ್ನಿಸ್‍ದಾಖಲೆ 2011: ಗಾಲಿಕುರ್ಚಿಯ ಮೇಲೆ ಕುಳಿತು 1 ನಿಮಿಷದಲ್ಲಿ 63 ಬಾರಿ (ಹಳೆಯ ದಾಖಲೆ ಫ್ರಾನ್ಸ್‍ನಜೆಫ್ರಿಯವರ 32 ಬಾರಿ) ಸುತ್ತುವಕಾರ್ಯವನ್ನುದೆಹಲಿಯಗುರು ಪಾಷಾರವರ ಶಿಷ್ಯ ಗುಲ್ಯನ್‍ಕುಮಾರ್ ಮಾಡಿದೇಶದ ಹೆಸರನ್ನು ವಿಶ್ವದರ್ಜೆಗೆ ಏರಿಸಿದ್ದಾರೆ. ಮತ್ತು ವಿಕಲ ಚೇತನರಕಲಾಕ್ಷೇತ್ರದಲ್ಲಿಇದೊಂದುಇತಿಹಾಸ ಮತ್ತುಉದಾಹರಣೆಯಾಗಿದೆ.
ಯುರೋಪ್‍ಖಂಡದಇತಿಹಾಸದಲ್ಲಿ ಪ್ರಥಮ ಬಾರಿಗೆ ವಿಕಲಚೇತನರಅತಿದೊಡ್ಡ ನೃತ್ಯರೂಪಕ 2003:
ಫಿನ್ ಲ್ಯಾಂಡ್‍ದೇಶದ ನೂರಕ್ಕೂ ಹೆಚ್ಚು ವಿವಿಧ ಪ್ರಕಾರದಅಂಗವಿಕಲತೆಯ ಮಕ್ಕಳಿಗೆ ರಾಮಾಯಣ ನೃತ್ಯ ಸಂಯೋಜನೆ ನೀಡಿಅಂತರರಾಷ್ಟ್ರೀಯ ಮಕ್ಕಳ ನಾಟಕೋತ್ಸವದಲ್ಲಿ ಭಾಗವಹಿಸಿ ಇತಿಹಾಸ ಸೃಷ್ಟಿಸಿದ್ದಾರೆ.
2002ರಲ್ಲಿ ಇಸ್ಲಾಮಿಕ್ ಮ್ಯೂಸಿಯಂ ಆಫ್ ಮಲೇಷಿಯಾದಉದ್ಘಾಟನಾ ಸಮಾರಂಭದಲ್ಲಿ ಮಲೇಷಿಯಾದ ಪೂರ್ವ ಪ್ರಧಾನ ಮಂತ್ರಿಡಾ. ಮಹತಿರ್ ಬಿನ್ ಮಹಮದ್, ಅಲ್ಲಿನರಾಜ ಮತ್ತುರಾಣಿಯರ ಮುಂದೆತಮ್ಮಕಥಕ್ ನೃತ್ಯ ಪ್ರದರ್ಶನ ನೀಡಿ ಪ್ರಶಂಸೆ ಮತ್ತು ಪ್ರಶಸ್ತಿ ಪಡೆದಿದ್ದಾರೆ.
2005,2007 ಮತ್ತು 2014ರಲ್ಲಿ ಭಾರತದ ಪೂರ್ವರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಶ್ರೀಮತಿ ಪ್ರತಿಭಾ ಸಿಂಗ್ ಪಾಟೀಲ್, ಪ್ರಸಕ್ತರಾಷ್ಟ್ರಪತಿ ಶ್ರೀಯುತ ಪ್ರಣಬ್ ಮುಖರ್ಜಿ, ಪೂರ್ವ ಪ್ರಧಾನ ಮಂತ್ರಿಡಾ.ಮನಮೋಹನ್ ಸಿಂಗ್, ಶ್ರೀಮತಿ ಸೋನಿಯಾಗಾಂಧಿ, ಮುಂತಾದವರ ಸಮ್ಮುಖದಲ್ಲಿತಮ್ಮ ಕಲಾ ಪ್ರದರ್ಶನ ನೀಡಿ ಪ್ರಶಸ್ತಿ ಮತ್ತು ಸನ್ಮಾನಗಳನ್ನು ಪಡೆದಿದ್ದಾರೆ.
ಡಾ|| ಎಸ್. ಎಲ್.ಭಂಡಾರಕರ್
ಕರ್ನಾಟಕದಬೆಳಗಾವಿಯಡಾ. ಎಸ್.ಎಲ್.ಭಂಡಾರಕರ್‍ದೆಹಲಿ ಸರಕಾರದತರಬೇತಿ ಮತ್ತುತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಉಪ-ನಿರ್ದೇಶಕರಾಗಿ (ಕಾರ್ಯದರ್ಶಿಗಳ ವಿಭಾಗ) ಕಾರ್ಯನಿರ್ವಹಿಸುತ್ತಿದ್ದಾರೆ.ದೆಹಲಿ ಸರಕಾರದತಾಂತ್ರಿಕ ಶಿಕ್ಷಣ ಇಲಾಖೆಯಅಡಿಯಲ್ಲಿಇರುವದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ, ದೆಹಲಿ ಮಹಿಳಾ ತಾಂತ್ರಿಕ ವಿಶ್ವವಿದ್ಯಾಲಯ, ದೆಹಲಿ ಔಷಧಿ ವಿಜ್ಞಾನ ಮತ್ತು ಸಂಶೋಧನೆ ವಿಶ್ವವಿದ್ಯಾಲಯಗಳೊಂದಿಗೆ ದೆಹಲಿ ಸರಕಾರದ ಸುಮಾರು 6 ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯಗಳು ಹಾಗು 35 ಖಾಸಗಿ ತಾಂತ್ರಿಕ ಮಹಾವಿದ್ಯಾಲಯಗಳ ಕಾರ್ಯಭಾರವನ್ನು ನೋಡಿಕೊಳ್ಳುತ್ತಿದ್ದಾರೆ. ಜೊತೆಗೆಭಾರತೀಯ ಕೃಷಿ ಅನುಸಂಧಾನ ಸಂಸ್ಥೆ, ಹೊಸದೆಹಲಿ ಹಾಗೂ “ಜಾಯಿಂಟ್ ಪಾರ್ಲಿಮೆಂಟ್‍ರಿಕ್ರ್ಯುಟಮೆಂಟ್ ಸೆಲ್’ನಲ್ಲಿಆಯ್ಕೆ ಸಮಿತಿಯ ಸದಸ್ಯರಾಗಿ ಹಾಗು ಅನೇಕ ತಾಂತ್ರಿಕ ಶಿಕ್ಷಣ ಮಂಡಳಿಗಳ ವೀಕ್ಷಕರಾಗಿಸೇವೆ ಸಲ್ಲಿಸುತ್ತಿದ್ದಾರೆ.2010 ರಿಂದ 2012 ರವರೆಗೆಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಪ್ರಥಮ ಉಪ-ಕುಲಸಚಿವರಾಗಿ ಕೆಲಸ ನಿರ್ವಹಿಸಿದ್ದಾರೆ.ಈ ಸಮಯದಲ್ಲಿ ವಿಶ್ವವಿದ್ಯಾಲಯಕಟ್ಟುವ ಕೆಲಸ ಮಾಡಿ, ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದಾರೆ.

ಕೇಂದ್ರೀಯ ಲೋಕಸೇವಾ ಆಯೋಗದÀ ಮೂಲಕ 2000ರಲ್ಲಿ ಆಯ್ಕೆಯಾಗಿ, ತರಬೇತಿ ಮತ್ತುತಾಂತ್ರಿಕ ಶಿಕ್ಷಣ ಇಲಾಖೆಗೆ ಆಯ್ಕೆಗೊಂಡಇವರುವಿದ್ಯಾಭಾಸವನ್ನುಮುಂದುವರೆಸಿ, ಎಮ್‍ಟೆಕ್, ಎಮ್. ಬಿ. ಎ ಹಾಗು ಪಿ.ಹೆಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಸುಮಾರು 25ಕ್ಕಿಂತÀ ಹೆಚ್ಚಿಗೆ ಸಂಶೋಧನಾ ಪ್ರಬಂಧಗಳನ್ನು ಅನೇಕ ರಾಷ್ಟ್ರೀಯ ಹಾಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಂಡಿಸಿದ್ದಾರೆ.

ಇವರ ಮೊದಲ ಕೃತಿ “ವೆಹಿಕಲ್‍ಟ್ರಾನ್ಸ್‍ಪೋರ್ಟ ಮ್ಯಾನೆಜಮೇಂಟ್” ಅಂತಿಮವರ್ಷದ ಬಿ.ಇ/ಬಿ.ಟೆಕ್ ಹಾಗು ಡಿಪ್ಲೊಮಾಅಟೊಮೋಬೈಲ್ ವಿದ್ಯಾರ್ಥಿಗಳಿಗೆ ದೇಶದತಾಂತ್ರಿಕ ಶಿಕ್ಷಣ ಇಲಾಖೆಯ ಮಹಾವಿದ್ಯಾಲಯಗಳು ಹಾಗು ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕವನ್ನಾಗಿ ಅಳವಡಿಸಿಕೊಳ್ಳಲಾಗಿದೆ.

ಇವರ“ಆಲ್ಟರ್‍ನೇಟಿವ್ ಫ್ಯುಯಲ್ ಸಿ.ಎನ್.ಜಿ ಫಾರ್‍ದೆಹಲಿ” ಮತ್ತು “ವೆಹಿಕ್ಯೂ¯ರ್‍ಪೊಲ್ಯೂಶನ್‍ಆಂಡ್‍ಆಲ್ಟರ್‍ನೇಟಿವ್ ಫ್ಯುಯಲ್” ಪುಸ್ತಕಗಳನ್ನು ಜರ್ಮನಿಯಲಾಂಬರ್ಟಅಕ್ಯಾಡಮಿಕ್ ಪಬ್ಲಿಷಿಂಗ್ ಕಂಪನಿ, ಪ್ರಕಟಸಿದೆ.

“ನ್ಯಾಷನಲ್ ಬುಕ್‍ಟ್ರಸ್ಟ್” ನವದೆಹಲಿಯಲ್ಲಿಕನ್ನಡಅನುವಾದಕರಾಗಿ ಕೆಲಸ ನಿರ್ವಹಿಸಿ, ಮೂಲತ: ಶ್ರೀ.ಎಲ್.ಪಿ.ಮಹಾಜನಅವರ“ರಸ್ತೆ ಸಂಚಾರ ನಿಯಮಗಳು” ಕೃತಿಯನ್ನುಕನ್ನಡಕ್ಕೆ ಅನುವಾದಿಸಿದ್ದಾರೆ. ಸುಮಾರುಎರಡು ಸಾವಿರಕ್ಕಿಂತ ಹೆಚ್ಚಿನರೇಡೀಯೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಧ್ವನಿಯನ್ನು ನೀಡಿದ್ದಾರೆ.

ದೆಹಲಿಯಜನಕಪುರಿಕನ್ನಡಕೂಟದಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಅನೇಕ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ದೆಹಲಿ ಕರ್ನಾಟಕ ಸಂಘದಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಸಾಂಸ್ಕøತಿಕ ಸಮಿತಿಯ ಸದಸ್ಯರಾಗಿ,ಸಂಘದ ಮುಖಪತ್ರಿಕೆಅಭಿಮತದಜಂಟಿ ಪ್ರಧಾನಸಂಪಾದಕರಾಗಿಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ.ದೆಹಲಿ ಕನ್ನಡಶಿಕ್ಷಣ ಸಂಸ್ಥೆಯ “ಪ್ರಬಂಧನ ಮಂಡಳಿಯ ಸದಸ್ಯರಾಗಿ” ಸೇವೆ ಸಲ್ಲಿಸಿದ್ದಾರೆ.ಅನೇಕ ನಾಟಕಗಳನ್ನು ಮರಾಠಿಯಿಂದಕನ್ನಡಕ್ಕೆ ಅನುವಾದಿಸಿದ್ದಾರೆ ಅಲ್ಲದೆ ಅನೇಕಕನ್ನಡದ ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ.ದೆಹಲಿ ಕರ್ನಾಟಕ ಸಂಘದನಾಟಕೋತ್ಸವಗಳಲ್ಲಿ ಅನೇಕ ಬಾರಿಅತ್ಯುತ್ತಮ ನಟನ ಪ್ರಶಸ್ತಿ ಪಡೆದಿದ್ದಾರೆ.


Spread the love