ಸವಿತಾಗೆ ಡಾಕ್ಟೆರೇಟ್ ಪದವಿ ಪ್ರದಾನ

ಸವಿತಾಗೆ ಡಾಕ್ಟೆರೇಟ್ ಪದವಿ ಪ್ರದಾನ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಸವಿತಾ ಅವರಿಗೆ ತಮಿಳುನಾಡಿನ ಕೊಯಿಮ್ಬುತ್ತೂರಿನ ಭಾರತಿಯಾರ್ ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿ ಗೌರವಿಸಿದೆ.

ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಆನ್ಕೋಲಜಿಯ ಸಮಾಜ ಕಲ್ಯಾಣ ವಿಭಾಗ ಮುಖ್ಯಸ್ಥ ಡಾ. ಜಾನೆಟ್ ಪರಮೇಶ್ವರ್ ಅವರ ಮಾರ್ಗದರ್ಶನದಲ್ಲಿ ‘ ಎ ಸ್ಟಡಿ ಆನ್ ಕೋಪಿಂಗ್ ಪ್ಯಾಟರ್ನ್ ಆಫ್ ದಿ ಕೇರ್‍ಗೀವರ್ಸ್ ಆಫ್ ಸ್ಕೈಜೋಫ್ರೆನಿಕ್ ಪೇಶೆಂಟ್ಸ್ ಕೊರೆಲೇಟೆಡ್ ವಿತ್ ಪರ್ಸನಾಲಿಟಿ ಟೈಪ್ ಆ್ಯಂಡ್ ಸೀವಿಯಾರಿಟಿ ಆಫ್ ದಿ ಇಲ್‍ನೆಸ್’ ಎಂಬ ವಿಷಯಕ್ಕೆ ಈ ಗೌರವ ಲಭಿಸಿದೆ. ಇವರು ಯತೀಶ್ ಬಂಗೇರ ಅವರ ಪತ್ನಿಯಾಗಿದ್ದಾರೆ.