ಸಹ್ಯಾದ್ರಿ ಸಂಚಯ ತಂಡದ ಚಾರಣ

ಸಹ್ಯಾದ್ರಿ ಸಂಚಯ ತಂಡದ ಚಾರಣ

ಉಡುಪಿ: ಪರಿಸರ ಸಂಘಟನೆಯಾದ ‘ಸಹ್ಯಾದ್ರಿ ಸಂಚಯ’ ಉಡುಪಿ ವಿಭಾಗ ಮತ್ತು ಯೂತ್ ಹಾಸ್ಟೆಲ್ ಉಡುಪಿ ಆಶ್ರಯದಲ್ಲಿ ಕವಲೇದುರ್ಗ ಕೋಟೆಗೆ ಚಾರಣ ಹಮ್ಮಿಕೊಳ್ಳಲಾಗಿತ್ತು. ಯುವ ಜನಾಂಗದಲ್ಲಿ ಪರಿಸರ ಆಸಕ್ತಿ ಬೆಳೆಸುವ ದೃಷ್ಟಿಯಿಂದ ಈ ಚಾರಣ ಹಮ್ಮಿಕೊಳ್ಳಲಾಗಿತ್ತು.

ಪರಿಸರಾಸಕ್ತೆ ರಕ್ಷಾ ಪೈ ಚಾರಣಿಗರನ್ನು ಉದ್ದೇಶಿಸಿ ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅದರಲ್ಲೂ ಪರಿಸರ ವೀಕ್ಷಣೆಯ ನೆಪದಲ್ಲಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುವಾಗ ಹೆಚ್ಚಿನ ಎಚ್ಚರಿಕೆವಹಿಸಬೇಕು. ಪರಿಸರಾಸಕ್ತರಾಗಿ ನಮ್ಮ ಸಾಮಾಜಿಕ ಜವಾಬ್ದಾರಿಯೂ ಹೆಚ್ಚಿದೆ. ಚಾರಣ ನಡೆಸೋದರಿಂದ ಪ್ರಕೃತಿ ಮತ್ತು ಮನುಷ್ಯ ಸಂಬಂಧ ಮತ್ತಷ್ಟು ದೃಢವಾಗುತ್ತೆ ಎಂದರು.

ಸಂಪೂರ್ಣ ಒಂದು ದಿನದ ಚಾರಣದಲ್ಲಿ ಉಡುಪಿಯ 30 ಮಂದಿ ಯುವ ಚಾರಣಿಗರು ಭಾಗಿಯಾದರು. ಸಹ್ಯಾದಿ ಸಂಚಯ ಉಡುಪಿ ವಿಭಾಗದ ಪ್ರಮುಖರಾದ ನವನೀತ ಶೆಟ್ಟಿ, ವಾದಿರಾಜ್ ಶೇಟ್, ರೋಹಿತ್ ಮತ್ತು ಯೂತ್ ಹಾಸ್ಟೆಲ್ ಸದಸ್ಯ ಧನಂಜಯ, ಮಾಧವ ಯುವ ಚಾರಣಿಗರಿಗೆ ಮಾರ್ಗದರ್ಶನ ಮಾಡಿದರು.