ಸಹ್ಯಾದ್ರಿ 10ಕೆ ರನ್ ಮಂಗಳೂರು

Spread the love

ಸಹ್ಯಾದ್ರಿ 10ಕೆ ರನ್ ಮಂಗಳೂರು

ಸ್ವಚ್ಛ – ಪರಿಸರ – ಹಸಿರು – ಉಸಿರು ಮತ್ತು ಆರೋಗ್ಯಕರ ಪರಿಸರದ ಬಗ್ಗೆ ಜಾಗೃತಿ ಮೂದಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಅಥ್ಲೆಟಿಕ್ ಅಸೋಸಿಯೇಷನ್ ಇವರು ಫಿಟ್ ಇಂಡಿಯಾ ಥೀಮ್ ಗೆ ಅನುಗುಣವಾಗಿ ‘ಸಹ್ಯಾದ್ರಿ 10ಕೆ ರನ್ ಮಂಗಳೂರು’ ಮೆಗಾ ಈವೆಂಟ್‍ನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ಭಂಡಾರಿ ಫೌಂಡೇಶನ್ ಇವರು ಪ್ರಾಯೋಜಕರು. ಈ ಮ್ಯಾರಥಾನ್ ಮೆಗಾ ಈವೆಂಟ್ 02-02-2020, ಬೆಳಿಗ್ಗೆ 6:00 ರಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮ ಈ ಕೆಳಗಿನ ಸಂಸ್ಥೆಗಳ ಸಹಯೋಗದೊಂದಿಗೆ ನಡೆಯುತ್ತಿದೆ.
• ಕರ್ನಾಟಕ ಸರ್ಕಾರದ ಯುವ ಸಬಲೀಕರಣ್ ಮತ್ತು ಕ್ರೀಡಾ ಇಲಾಖೆ
• ಮಂಗಳೂರು ವಿಶ್ವವಿದ್ಯಾಲಯ
• ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
• ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ
• ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ – ಕೆಎಎ

• 10ಕೆ ರನ್ ಮಂಗಳೂರು ಇದರ ಟೈಟಲ್ ಪ್ರಾಯೋಜಕತ್ವವನ್ನು ಸಹ್ಯಾದ್ರಿ ಕಾಲೇಜ್ ಆಫ್ ಎಂಜೀನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ವಹಿಸಿಕೊಂಡಿದೆ.
• ‘ಸಹ್ಯಾದ್ರಿ 10ಕೆ ರನ್ ಇದರ ಪ್ರಾಯೋಜಕ ರಾಯಭಾರಿ ನಟ, ಸಂಗೀತ ನಿರ್ದೇಶಕ ಗುರುಕಿರಣ್.

10ಕೆ ರನ್ ಮಂಗಳೂರು ಇದರ ಸಹ ಪ್ರಾಯೋಜಕತ್ವವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಲ್ ಕಾರ್ಗೋ ಲಾಜಿಸ್ಟಿಕ್ ಲಿ., ಕೆನರಾ ಬ್ಯಾಂಕ್, ಹಾಂಗ್ಯೋ ಐಸ್ ಕ್ರೀಂ, ಎಸ್ ಸಿ ಡಿ ಸಿ ಸಿ ಬ್ಯಾಂಕ್ ಲಿ., ಸ್ಯಾಮ್ಸ್ ಟೆಕ್ನೋ ಮ್ಯಾಕ್ ಪ್ರೈ ಲಿ., ಕ್ಯೂಟಾಕ್, ರಾಮಕೃಷ್ಣ ಮಿಷನ್ ಮಂಗಳೂರು, ಎಮ್‍ಫಸಿಸ್, ಸ್ಲೀಪ್ ವೆಲ್, ಆರ್‍ಡಿಸಿ ಕಾಂಕ್ರೀಟ್, ಗರೊಡಿ ಸ್ಟೀಲ್ಸ್, ಎಮ್ ಎಸ್ ಪೈ ಎಂಡ್ ಕೊ. ಇವರುಗಳು ವಹಿಸಿಕೊಂಡಿರುತ್ತಾರೆ.
ಸಹ್ಯಾದ್ರಿ 10ಕೆ ರನ್ ಈ ಕೆಳಗಿನ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುವುದು:
ಚಾಲೆಂಜ್ ರನ್ – 10ಕೆ – ಪುರುಷರು ಮತ್ತು ಮಹಿಳೆಯರಿಗೆ
ಇದರಲ್ಲಿ ಭಾಗವಹಿಸುವುದರಿಂದ ಗ್ರೀನ್, ಹೆಲ್ದೀ – ಮಂಗಳೂರು, ಆರೋಗ್ಯ್ ಮತ್ತು ಫಿಟ್ ನೆಸ್ ಇದರ ಅರಿವನ್ನು ಕರಾವಳಿ ಮತ್ತು ಮಲೆನಾಡಿನೆಲ್ಲೆಡೆ ಪಸರಿಸುವ ಉದ್ಡೇಶ.
• 10ಕೆ ಇಲೈಟ್ ರನ್ 18 ವರ್ಷದಿಂದ ಮೇಲಿನ ಪುರುಷರು ಮತ್ತು ಮಹಿಳೆಯರಿಗೆ
• 10ಕೆ ರನ್ – ಮುಕ್ತ ವಿಭಾಗ – 18 ವರ್ಷದಿಂದ ಮೇಲಿನ ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ
• 10ಕೆ ರನ್ ವಿದ್ಯಾರ್ಥಿಗಳಿಗೆ – 18 ರಿಂದ 25 ವರ್ಷಗಳವರೆಗೆ

• ಕಾಂಪಿಟಿಟಿವ್ ರನ್ – ಪುರುಷರು ಮತ್ತು ಮಹಿಳೆಯರಿಗೆ
5ಕೆ ರನ್ – 16 ರಿಂದ 25 ವರ್ಷಗಳವರೆಗೆ ಪುರುಷರು ಮತ್ತು ಮಹಿಳೆಯರಿಗೆ
• ಫ್ಯೂಚರ್ ರನ್ – 2ಕೆ ಮಕ್ಕಳಿಗಾಗಿ – ಹುಡುಗರು ಮತ್ತು ಹುಡುಗಿಯರು
ಇದು 14-16 ವಯೋಮಾನದ ಮಕ್ಕಳಿಗಾಗಿ. ಇದರಲ್ಲಿ ಗುರುತಿಸಲ್ಪಟ್ಟ ಕೆಲವು ಮಕ್ಕಳನ್ನು ಡಿ ಕೆ ಎ ಎ ಸಂಸ್ಥೆಯವರು ತರಭೇತುಗೊಳಿಸಿ, ಮಂಗಳೂರಿನ ಮುಂದಿನ ಚಾಂಪಿಯನ್ಸ್ ನ್ನು ತಯಾರು ಮಾಡುವ ಉದ್ದೇಶ.

• 5ಕೆ ಮಜಾ ಮತ್ತು ಹೆಲ್ದೀ ರನ್ – ಎಲ್ಲರಿಗೂ ಅವಕಾಶ
16 ವರ್ಷದಿಂದ ಮೇಲಿನ ಪುರುಷರು ಮತ್ತು ಮಹಿಳೆಯರಿಗೆ
ಇದನ್ನು ಫಿಟ್ ಇಂಡಿಯಾ ಮೂವ್ ಮೆಂಟ್ ಉದ್ದೇಶದಿಂದ, ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸುವಿಕೆಯಿಂದ ಸದೃಡ ದೇಹಾರೋಗ್ಯ ವನ್ನು ಕಾಪಾಡುವ ಉದ್ದೇಶ.

ಈ ಸಹ್ಯಾದ್ರಿ 10ಕೆ ರನ್ ಗೆ ಸುಮಾರು 10,000 ಜನರ ವಿವಿಧ ವಿಭಾಗಗಳಿಂದ ಪಾಲ್ಗೊಳ್ಳುವ ನಿರೀಕ್ಷಯಿದೆ. ಈ ಓಟದಲ್ಲಿ ಎಲ್ಲಾ ವಯಸ್ಸಿನ ಪುರುಷರು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಬಹುದು. ಈ ಓಟದ ಮೂಲಕ ನಾವು ಸಮಾನ ಮನಸ್ಕ ಜನರನ್ನು ಒಟ್ಟುಗೂಡಿ, ನಮ್ಮ ಮಂಗಳೂರಿನ ಪರಿಸರ ಸ್ವಚ್ಛ ಗೊಳಿಸುವಲ್ಲಿ ಮತ್ತು ಮುಂದಿನ ಯುವ ಪೀಳಿಗೆಗೆ ತಮ್ಮ ಪಾತ್ರವನ್ನು ನಿರ್ವಹಿಸಲು, ಅವರನ್ನು ಪೆÇ್ರೀತ್ಸಾಹಿಸಲು ಮತ್ತು ಪ್ರೇರೇಪಿಸಬಹುದು. ಜನ ಸಾಮಾನ್ಯರ ಪಾಲ್ಗೊಳ್ಳುವಿಕೆ ಮತ್ತು ಭಾಗವಹಿಸುವಿಕೆಯ ಮೂಲಕ ‘ಹಸಿರು, ಆರೋಗ್ಯಕರ – ಮಂಗಳೂರನ್ನು ರೂಪಿಸುವ ಮೂಲಕ, ಈ ನಮ್ಮ ಧ್ಯೇಯವಾಕ್ಯವನ್ನು ಸಾಧಿಸಲು ನಮಗೆ ಸಾಧ್ಯವಾಗುತ್ತದೆ ಎಂದು ನಾವು ತಿಳಿದಿರುತ್ತೇವೆ.
ನಾವು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಏನ್‍ಜಿಓ ಮತ್ತು ವಿವಿಧ ವೃತ್ತಿಪರ ಜನರನ್ನು ಆಹ್ವಾನಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಆರೋಗ್ಯ ಮತ್ತು ಫಿಟ್ನೆಸ್ ಪ್ರಜ್ಞೆಯ ಕುರಿತು ದಕ್ಷಿಣ ಕನ್ನಡ ಪ್ರದೇಶದಲ್ಲಿ ಜಾಗ್ರತಿ ಮೂಡಿಸಬಹುದು.
“ಆರೋಗ್ಯವಂತ ನಮ್ಮ ಮಂಗಳೂರಿಗಾಗಿ ಎಲ್ಲಾ ಯುವಕರು, ಮಹಿಳೆಯರು ಮತ್ತು ಪುರುಷರು ನಮ್ಮೊಂದಿಗೆ ಬಂದು ಓಟದಲ್ಲಿ ಭಾಗವಹಿ, ಆರೋಗ್ಯಕರ ಮಂಗಳೂರನ್ನು ರೂಪಿಸಬಹುದು”
ಹೆಚ್ಚಿನ ಮಾಹಿತಿ ಮತ್ತು ನೋಂದಣಿ ಗಾಗಿ ತಿತಿತಿ.10ಞಡಿuಟಿmಚಿಟಿgಚಿಟuಡಿu.ಛಿom ನ್ನು ಸಂಪರ್ಕಿಸಿ


Spread the love