ಸಾಲಿಗ್ರಾಮ ಗಣೇಶೋತ್ಸವ ಬೆಳ್ಳಿ ಹಬ್ಬದ ಆಚರಣೆ: ಸಾಧಕರಿಗೆ ಸನ್ಮಾನ, ಗೌರವಾರ್ಪಣೆ

ಸಾಲಿಗ್ರಾಮ ಗಣೇಶೋತ್ಸವ ಬೆಳ್ಳಿ ಹಬ್ಬದ ಆಚರಣೆ: ಸಾಧಕರಿಗೆ ಸನ್ಮಾನ, ಗೌರವಾರ್ಪಣೆ

ಕೋಟ: ಇಂದಿನ ಮಕ್ಕಳಿಗೆ ನಮ್ಮ ಧರ್ಮ, ಸಂಸ್ಕøತಿ, ಸಂಸ್ಕಾರಗಳ ಕುರಿತು ಮಾರ್ಗದರ್ಶನ ಮಾಡಬೇಕಾದ ಅಗತ್ಯತೆ ಇದೆ. ಶಾಲೆಯಲ್ಲಿ ಶಿಕ್ಷಣ ಮಾತ್ರ ಪಡೆಯಬಹುದು ಆದರೆ ಇವುಗಳನ್ನು ಗಣೇಶೋತ್ಸವದಂತಹ ಸಾರ್ವಜನಿಕ ಧಾರ್ಮಿಕ ಆಚರಣೆಗಳು ಮೂಲಕ ಪಡೆಯಬಬಹುದಾಗಿದೆ. ಇಂದು ಇದೇ ಸಂಸ್ಕಾರ ಮತ್ತು ಸಂಸ್ಕøತಿಯ ಕಾರಣಕ್ಕೆ ಪ್ರಪಂಚವೇ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ ಎಂದು ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಹೇಳಿದರು.

ಅವರು ಸಾಲಿಗ್ರಾಮ ದೇವಸ್ಥಾನದ ತೆರೆದ ರಂಗಮಂದಿರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಆಯೋಜಿಸಲಾದ ಸಾಧಕರಿಗೆ ಸನ್ಮಾನ, ಗೌರವಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗಣೇಶೋತ್ಸವ ಸಮಿತಿಯ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

silver-jubilee-ganapathi-saligrama

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಲೋಕ ಮಾನ್ಯ ತಿಲಕರು ಸಮಾಜವನ್ನು ಒಗ್ಗೂಡಿಸಲು ಪ್ರಾರಂಭಿಸಿದ ಗಣೇಶೋತ್ಸವ ಇಂದು ಪ್ರತಿ ಊರಿನ ಗಲ್ಲಿಗಲ್ಲಿಯಲ್ಲಿ ಪ್ರಾರಂಭವಾಗಿದೆ. ಗಣೇಶೋತ್ಸವ ಏಕತೆಯ ಸಂಕೇತವಾಗುತ್ತಿದೆ ಎಂದರು. ಕಾರ್ಯಕ್ರಮ ದಲ್ಲಿ ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸಮಿತಿಯ ಗೌರವಾಧ್ಯಕ್ಷ ಡಾ.ಗಣೇಶ್ ಯು., ಉದ್ಯಮಿ ರವೀಂದ್ರ ನಾಯಕ್, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಅನಂತ ಪದ್ಮನಾಭ ಐತಾಳ್, ವೇದಮೂರ್ತಿ ಅನಂತ ಪದ್ಮನಾಭ ಐತಾಳ್, ಉದ್ಯಮಿ ಕೆಪಿ ಶೇಖರ, ಉದ್ಯಮಿ ಗಣೇಶ್ ರಾವ್, ಸಾಲಿಗ್ರಾಮ ವಿರಾಡ್ವಿಶ್ವಕರ್ಮ ಸಮಾಜೋದ್ದಾರಕ ಸಂಘದ ಅಧ್ಯಕ್ಷ ಜನಾರ್ದನ ಆಚಾರ್ಯ, ಸಾಲಿಗ್ರಾಮ ಗಾಣಿಗ ಯುವ ಸಂಘಟನೆಯ ಮಾಜಿ ಅಧ್ಯಕ್ಷ ಪ್ರಶಾಂತ್ ಗಾಣಿಗ ಸಮಿತಿಯ ಕಾರ್ಯದರ್ಶಿ ಆನಂದ ಪೂಜಾರಿ ಉಪಸ್ಥಿತರಿದ್ದರು.

silver-jubilee-ganapathi-saligrama-00

ಇದೇ ಸಂದರ್ಭ ವೈದ್ಯ ಡಾ.ಕೆ.ವಿಶ್ವೇಶ್ವರ ತುಂಗ, ಈಜುಪಟು ಗೋಪಾಲ ಅಡಿಗ, ಯಕ್ಷಗಾನ ಅಕಾಡೆಮಿಯ ಕಿಶನ್ ಹೆಗ್ಡೆ ಬೈಲೂರು, ಸೈನಿಕ ಉದಯ ಮರಕಾಲ, ಶೈಕ್ಷಣಿಕ ಸಾಧಕಿ ಚಂದನ ಎನ್.ಮೆಂಡನ್ ಕೋಡಿ, ಪ್ರಗತಿ ಎನ್., ಶ್ರೀಲತಾ ಅಡಿಗ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಹೊಸ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿ ಮತ್ತು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ದತ್ತುನಿಧಿ ವಿತರಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಧನ ಸಹಾಯ ಮಾಡಲಾಯಿತು.

ಸಮಿತಿಯ ಗೌರವಾಧ್ಯಕ್ಷ ಅಚ್ಚುತ ಪೂಜಾರಿ ಕಾರ್ಕಡ ಸ್ವಾಗತಿಸಿದರು. ಮಂಜುನಾಥ ನಾಯಿರಿ ಸನ್ಮಾನಿತರ ಪರಿಚಯ ಮಾಡಿದರು. ಶಿಕ್ಷಕ ಸಂಜೀವ ಗುಂಡ್ಮಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ರಘು ಹೆಬ್ಬಾರ್ ವಂದಿಸಿದರು.