ಸಾಲಿಗ್ರಾಮ ದೇವಸ್ಥಾನದ ಪುಷ್ಕರಿಣಿಯಲ್ಲಿ ಮುಳುಗಿ ತೀರ್ಥ ಯಾತ್ರಿಕ ಸಾವು

Spread the love

ಸಾಲಿಗ್ರಾಮ ದೇವಸ್ಥಾನದ ಪುಷ್ಕರಿಣಿಯಲ್ಲಿ ಮುಳುಗಿ ತೀರ್ಥ ಯಾತ್ರಿಕ ಸಾವು

ಕೋಟ: ತೀರ್ಥಯಾತ್ರೆಗೆ ಆಗಮಿಸಿದ್ದ ಬೆಂಗಳೂರಿನ ಎಂಜಿನಿ ಯರಿಂಗ್‌ ಪದವೀಧರ, ಬೆಂಗಳೂರು ಕೆ.ಆರ್‌.ಪುರಂ ಬಿದರನಹಳ್ಳಿ ನಿವಾಸಿ ಪವನ್‌ ಕುಮಾರ್‌ (23) ಎಂಬವರು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಶಂಕತೀರ್ಥ ಪುಷ್ಕರಿಣಿ ಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ಬೆಳಗಿನ ಜಾವ ಸಂಭವಿಸಿದೆ.

ಈತ ಎಂಜಿನಿಯರಿಂಗ್‌ ಪದವಿ ಮುಗಿಸಿ ಉದ್ಯೋಗ ಸೇರುವ ಸಿದ್ಧತೆಯಲ್ಲಿದ್ದು, ತಾಯಿ ಹಾಗೂ ಊರಿನ 30 ಮಂದಿಯ ತಂಡದೊಂದಿಗೆ ಫೆ. 14ರಂದು ಬೆಂಗಳೂರಿನಿಂದ ದ.ಕ., ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇಗುಲ ಯಾತ್ರೆ ಕೈಗೊಂಡಿದ್ದ. ಶನಿವಾರ ರಾತ್ರಿ ಉಡುಪಿಯಲ್ಲಿ ವಾಸ್ತವ್ಯವಿದ್ದು, ರವಿವಾರ ಬೆಳಗ್ಗಿನ ಜಾವ 5.30ಕ್ಕೆ ಸಾಲಿಗ್ರಾಮಕ್ಕೆ ಆಗಮಿಸಿ ಎಲ್ಲರೂ ಜತೆಯಾಗಿ ಪುಷ್ಕರಿಣಿಯಲ್ಲಿ ತೀರ್ಥ ಸ್ನಾನಕ್ಕಾಗಿ ಇಳಿದಿದ್ದರು. ಈ ಸಂದರ್ಭ ಪವನ್‌ ನೀರಿನಲ್ಲಿ ಸ್ವಲ್ಪ ಮುಂದಕ್ಕೆ ತೆರಳಿದ್ದು, ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಜತೆಗಿದ್ದವರು ಎಷ್ಟೇ ಪ್ರಯತ್ನಿಸಿದರೂ ರಕ್ಷಿಸಲು ಸಾಧ್ಯವಾಗಿರಲಿಲ್ಲ.

ಅನಂತರ ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರು ಹಾಗೂ ಜೀವನ್‌ಮಿತ್ರ ನಾಗರಾಜ್‌ ಪುತ್ರನ್‌ ಸಹಕಾರ ದೊಂದಿಗೆ ಶವವನ್ನು ಮೇಲೆತ್ತಿದರು.


Spread the love