ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದು ಬೇಗನೆ ಸೇವೆಗೆ ಮರಳಲಿದ್ದಾರೆ – ಸಚಿವ ಆರ್ ಅಶೋಕ್

Spread the love

ಸಿಎಂ ಯಡಿಯೂರಪ್ಪ ಆರೋಗ್ಯವಾಗಿದ್ದು ಬೇಗನೆ ಸೇವೆಗೆ ಮರಳಲಿದ್ದಾರೆ – ಸಚಿವ ಆರ್ ಅಶೋಕ್

ಉಡುಪಿ: ಸಿಎಂ ಯಡಿಯೂರಪ್ಪ ಸಂಪೂರ್ಣ ಅರೋಗ್ಯದಿಂದ, ಲವಲವಿಕೆಯಿಂದ ಇದ್ದು, ಅದಷ್ಟು ಬೇಗ ಗುಣಮುಖರಾಗಿ ನಿಮ್ಮ ಮುಂದೆ ಬರುತ್ತಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.

ಅವರು ಶುಕ್ರವಾರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಗೆ ಕೊರೋನಾ ಪಾಸಿಟಿವ್ ವಿಚಾರದಲ್ಲಿ ಪ್ರತಿಕ್ರಿಯಿಸಿ ದಿನಕ್ಕೆ ಎರಡು ಮೂರು ಬಾರಿ ನಮ್ಮೊಂದಿಗೆ ಮಾತನಾಡುತ್ತಾರೆ ಅಲ್ಲದೆಸಚಿವರು, ಅಧಿಕಾರಿಗಳೊಂದಿಗೆ ಪ್ರತಿದಿನ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಕೊವಿಡ್, ಪ್ರವಾಹ ಸಮಯದಲ್ಲಿ ಮುಖ್ಯಮಂತ್ರಿಗಳು ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿದ್ದರೂ ಕೂಡ ಸರಕಾರದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ ಅವರು ಶೀಘ್ರ ಗುಣಮುಖವಾಗಿ ಬರಲಿ ಎಂದು ನಾನು ಪ್ರಾರ್ಥನೆ ಮಾಡುತ್ತೇನೆ ಎಂದರು.

ಗುರುವಾರದ ಬಿಬಿಎಂಪಿ ಹೆಲ್ತ್ ಬುಲೆಟಿನ್ ನಲ್ಲಿ ಸಿಎಂ ಡಿಸ್ಚಾರ್ಜ್ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.


Spread the love