ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಟೋಟ – ಇಬ್ಬರ ಸಾವು

Spread the love

ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಟೋಟ – ಇಬ್ಬರ ಸಾವು
ಬಂಟ್ವಾಳ: ಸಿಡಿಮದ್ದು ತಯಾರಿಕಾ ಘಟಕದಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಟೋಟದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲ ಪೋಲಿಸ್ ಠಾಣಾ ವ್ಯಾಪ್ತಿಯ ಕಂಬಳಬೆಟ್ಟುವಿನ ನೂಜಿ ಎಂಬಲ್ಲಿ ನಡೆದಿದೆ.

ಮೃತರನ್ನು ಕಂಬಳಬೆಟ್ಟು ಶಾಂತಿನಗರ ನಿವಾಸಿ ಹಾಶಿಮ್ (25) ಮತ್ತು ಸುಂದರ ಪೂಜಾರಿ (39) ಎಂದು ಗುರುತಿಸಲಾಗಿದೆ.

ದಿ. ಗರ್ನಲ್ ಸಾಹೇಬರ ಮನೆಯಲ್ಲಿ ಹಲವು ವರುಷಗಳಿಂದ ಸಿಡಿಮದ್ದು ತಯಾರಿ ನಡೆಯುತ್ತಿದ್ದು, ಗರ್ನಲ್ ಸಾಹೀಬ್ ಮರಣ ನಂತರ ಅವರ ಮಕ್ಕಳಾದ ಗಫೂರ್ ಮತ್ತು ರಫೀಕ್ ಎಂಬವರು ನಡೆಸುತ್ತಿದ್ದು, ಸಿಡಿಮದ್ದು ತಯಾರಿಕೆಗೆ ಪರಿಕರಗಳನ್ನು ಅರಿಯುತ್ತಿದ್ದ ವೇಳೆ ಈ ಭೀಕರ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟಕದಲ್ಲಿ ಆರು ಮಂದಿ ಕೆಲಸ ನಿರ್ವಹಿಸುತ್ತಿದ್ದು, ಸ್ಪೋಟದ ತೀವ್ರತೆಗೆ ಒಂದು ಮೃತದೇಹ ಘಟಕದ ಮಾಡಿನ ಮೇಲೆ ಎಸೆಯಲ್ಪಟ್ಟಿದ್ದು, ಇನ್ನೊಂದು ಮೃತದೇಹ ಘಟಕದಿಂದ ಸುಮಾರು 25 ಮೀಟರ್ ದೂರಕ್ಕೆ ಎಸೆಯಲ್ಪಿಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ,
ಸ್ಪೋಟದ ತೀವೃತೆಗೆ ಎರಡೂ ಮೃತದೇಹಗಳೂ ಛಿದ್ರಗೊಂಡಿದ್ದು, ಘಟಕದ ಹಂಚುಗಳು ಕೂಡ ಹಾರಿ ಹೋಗಿದೆ,
ಸುದ್ದಿ ತಿಳಿದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಜಿಲ್ಪಾ ಎಸ್ಪಿ ಭೂಷಣ್ ಜಿ ಭೊರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ ಆರ್, ಸಿಐ ಬಿಕೆ ಮಂಜಯ್ಯ ವಿಟ್ಲ ಠಾಣಾಧಿಕಾರಿ ನಾಗರಾಜ್ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love