ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳರ ಸೆರೆ

Spread the love

ಸಿಸಿಬಿ ಕಾರ್ಯಾಚರಣೆ: ಕುಖ್ಯಾತ ಅಂತರ್ ಜಿಲ್ಲಾ ಸರಕಳ್ಳರ ಸೆರೆ

ಮಂಗಳೂರು: ನಗರದ ಮೂಡಬಿದ್ರಿ ಪೊಲೀಸ್ ಠಾಣಾ ಹಾಗೂ ಕೇರಳ ರಾಜ್ಯದ ಕಾಸರಗೋಡಿನ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳರಿಬ್ಬರನ್ನು ಬಂಧಿಸಿ ಸುಲಿಗೆ ಮಾಡಿದ ಚಿನ್ನಾಭರಣ ಹಾಗೂ ಸರಕಳ್ಳತನ ಮಾಡಲು ಉಪಯೋಗಿಸಿದ ದ್ವಿಚಕ್ರ ವಾಹನನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಇತ್ತೀಚೆಗಿನ ದಿನಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸರಕಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ ಸಮಯ ಸರಕಳ್ಳತನ ಮಾಡುವ ಇಬ್ಬರು ಯುವಕರು ನೊಂದಾಣೆ ಸಂಖ್ಯೆ ಅಳವಡಿಸದೇ ಇರುವ ದ್ವಿಚಕ್ರ ವಾಹನದಲ್ಲಿ ಮೂಡಬಿದ್ರಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದಾರೆಂಬ ಖಚಿತ ಮಾಹಿತಿಯಂತೆ ಮಂಗಳೂರು ಸಿಸಿಬಿ ಪೊಲೀಸರು ದ್ವಿಚಕ್ರ ವಾಹನವನ್ನು ಬೆನ್ನಟ್ಟಿ ಹಿಡಿದು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿ ಕಣ್ಣೂರು ನಿವಾಸಿ ಕೆ ನೂಮನ್ (23), ಸಂಶೀರ್ @ ತಂಜೀ(21)ಎಂಬವರನ್ನು ವಶಕ್ಕೆ ಪಡೆದುಕೊಂಡು ಅವರಿಂದ ಈ ಕೆಳಕಂಡ ಸರಕಳ್ಳತನ ಪ್ರಕರಣಗಳಲ್ಲಿ ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

1. ಮೂಡಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂತ್ಯ ಎಂಬಲ್ಲಿ ದಿನಾಂಕ: 15-02-2019 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ದಾರಿ ಕೇಳುವ ನೆಪದಲ್ಲಿ ಶ್ರೀಮತಿ ಅನುಪಮ ಎಸ್ ಹೆಗ್ಡೆ ರವರ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಸುಲಿಗೆ ಮಾಡಿದ ಪ್ರಕರಣ.(ಮೂಡಬಿದ್ರಿ ಪೊಲೀಸ್ ಠಾಣಾ ಮೊ.ನಂ: 33/2019 ಕಲಂ: 392 ಐಪಿಸಿ).

2. ಕೇರಳ ರಾಜ್ಯ ಕಾಸರಗೋಡು ಜಿಲ್ಲೆ ಅದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಾರು ಎಂಬಲ್ಲಿ ದಿನಾಂಕ: 17-02-2019 ರಂದು ಬೆಳಿಗ್ಗೆ 08-00 ಗಂಟೆ ಸುಮಾರಿಗೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಚೈನ್ ನ್ನು ಸುಲಿಗೆ ಮಾಡಿದ ಪ್ರಕರಣ ( ಕಾಸರಗೋಡು ಅದೂರು ಪೊಲೀಸ್ ಠಾಣಾ ಮೊ.ನಂ: 44/2019 ಕಲಂ: 394 ಐಪಿಸಿ).

ಆರೋಪಿಗಳ ಪೈಕಿ ನೂಮನ್ ಎಂಬಾತನ ವಿರುದ್ಧ ಈ ಹಿಂದೆ ಬಂಟ್ವಾಳ ಗ್ರಾಮಾಂತರ, ಬಂಟ್ವಾಳ ನಗರ ಠಾಣೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ತಲಾ 2 ಸರಕಳ್ಳತನ ಪ್ರಕರಣ,ಮಂಗಳೂರು ಪೂರ್ವ ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಸರಕಳ್ಳತನ ಹೀಗೆ ಒಟ್ಟು 8 ಪ್ರಕರಣ ದಾಖಲಾಗಿರುತ್ತದೆ. ಈತನು ಸುಮಾರು 15 ದಿನಗಳ ಹಿಂದೆ ಈ ಪ್ರಕರಣಗಳಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿರುವುದಾಗಿದೆ. ಆರೋಪಿಗಳಿಂದ 2 ಚಿನ್ನದ ಸರ, 2 ಮೊಬೈಲ್ ಫೋನ್, ಒಂದು ಹೊಂಡಾ ಡಿಯೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸರಕಳ್ಳತನ ಮಾಡುವ ಸಮಯ ವಾಹನದ ನಂಬ್ರ ಪ್ಲೇಟ್ ಗಳನ್ನು ಅಳವಡಿಸದೇ ಕೃತ್ಯವನ್ನು ಮಾಡುತ್ತಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 1,10,900/- ಆಗಿರುತ್ತದೆ.

ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮೂಡಬಿದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಆಯುಕ್ತರಾದ ಟಿ. ಆರ್ ಸುರೇಶ್, ಐ.ಪಿ.ಎಸ್, ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಉಮಾ ಪ್ರಶಾಂತ್ (ಅಪರಾಧ & ಸಂಚಾರ) ರವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐ ಶ್ಯಾಮ್ ಸುಂದರ್, ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

1 Comment

Comments are closed.