ಸಿಸಿಬಿ ಪೋಲಿಸರಿಂದ ಮಟ್ಕಾ ಅಡ್ಡೆಗೆ ಧಾಳಿ ಒರ್ವನ ಬಂಧನ

Spread the love

ಸಿಸಿಬಿ ಪೋಲಿಸರಿಂದ ಮಟ್ಕಾ ಅಡ್ಡೆಗೆ ಧಾಳಿ ಒರ್ವನ ಬಂಧನ

ಮಂಗಳೂರು: ನಗರದ ಪಾಂಡೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯ ಅತ್ತಾವರ ಜೆಪ್ಪು ಮಾರ್ಕೆಟ್ ಬಳಿಯ ಲೋಬೊ ಬೇಕರಿಯ ಹತ್ತಿರ ಮಟ್ಕಾ ಆಟದಲ್ಲಿ ನಿರತರಾದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೋಲಿಸರು ಶನಿವಾರ ಬಂಧಿಸಿದ್ದಾರೆ.

ಬಂಧಿತನನ್ನು ಜೆಪ್ಪು ನಿವಾಸಿ ಕಿಶೋರ್ ಶೆಟ್ಟಿ (42) ಎಂದು ಗುರುತಿಸಲಾಗಿದೆ.

ಅತ್ತಾವರ ಜೆಪ್ಪು ಮಾರ್ಕೆಟ್ ಬಳಿಯ ಲೋಬೊ ಬೇಕರಿಯ ಹತ್ತಿರ ಮಟ್ಕಾ ಆಟದಲ್ಲಿ ನಿರತರಾದ ಕುರಿತ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಿ ಪೋಲಿಸರು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದ ಕಿಶೋರ್ ಶೆಟ್ಟಿಯನ್ನು ದಸ್ತಗಿರಿ ಮಾಡಿ ಆತನಿಂದ ಮಟ್ಕ ಆಟದಲ್ಲಿ ಸಂಗ್ರಹವಾಗಿದ್ದ ಒಟ್ಟು 54,000/- ರೂಪಾಯಿ, ಮಟ್ಕ ಚೀಟಿ, ಬಾಲ್ ಪೆನ್ ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಇದರ ಒಟ್ಟು ಬೆಲೆ 55,000/- ರೂಪಾಯಿ ಆಗಿರುತ್ತದೆ. ಆರೋಪಿಯನ್ನು ಮತ್ತು ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಗೆ ಸಿಸಿಬಿ ಪೊಲೀಸರು ಹಸ್ತಾಂತರಿಸಿರುತ್ತಾರೆ.

ನಗರ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರ ಆದೇಶದಂತೆ ಪೊಲೀಸ್ ಉಪ – ಆಯುಕ್ತರು ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಮತ್ತು ಸಂಚಾರ ರವರ ಮಾರ್ಗದರ್ಶನದಂತೆ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್ಐ ರವರಾದ ಶ್ಯಾಮ್ ಸುಂದರ್.ಹೆಚ್.ಎಂ ಮತ್ತು ಸಿಬ್ಬಂದಿಯವರು ಭಾಗವಹಿಸಿದ್ದರು.


Spread the love