ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ನಾಗರಪಂಚಮಿ ಸಂದೇಶ

Spread the love

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ನಾಗರಪಂಚಮಿ ಸಂದೇಶ

ಮುಂಬಯಿ : ಬಹುತೇಕರಿಗೆ ಇಂದು ಮತ್ತು ಕೆಲವರಿಗೆ ನಾಳೆ ನಾಗರ ಪಂಚಮಿಯನ್ನು ಆಚರಿಸುವಂತಹ ಒಂದು ಸಂದರ್ಭ. ವಿಶೇಷವಾಗಿ ನಾಗನನ್ನು ಸಂತೃಪ್ತ್ತಿ ಪಡಿಸುವುದರಿಂದ ಒಳ್ಳೆಯ ಸಂತತಿ, ಒಳ್ಳೆಯ ಸಂಪತ್ತು ಮತ್ತು ಆರೋಗ್ಯ ಸಿಗುತ್ತದೆ ಎನ್ನುವಂತದ್ದು ಸರ್ಪ ಪ್ರೀತಿ ರಾವಸ್ಯಮೇವಕರಣೀ ಆರೋಗ್ಯ ಪುತ್ರಾಪ್ತೆ ಎನ್ನುವಂತಹ ಮಾತಿನಿಂದ ತಿಳಿಯುತ್ತಿದೆ. ಅಂತಹ ನಾಗನಿಗೆ ಇಷ್ಟವಾದ ದಿನವೆಂದರೆ ಪಂಚಮಿ. ಒಂದೊಂದು ದೇವತೆಗಳಿಗೆ ಒಂದೊಂದು ತಿಥಿಯನ್ನು ಅಭಿಮಾನ್ಯ ತಿಥಿsಯನ್ನಾಗಿ ಪ್ರಾಚೀನರು ಹೇಳಿದ್ದಾರೆ. ಹಾಗಾಗಿ ತೃಥಿಯಯಕ್ಕೆ ಗೌರಿ ಎಂಬುವುದು ಅದಿದೇವತೆ. ಚತುರ್ಥಕ್ಕೆ ಗಣಪತಿ, ಪಂಚಮಿಗೆ ಸರ್ಪಗಳು ಸೃಷ್ಟಿಗೆ ಸ್ಕಂದ ಎಂಬುವುದಾಗಿದೆ. ಈಗೇ ಒಂದೊಂದು ತಿಥಿsಗೂ ಒಬ್ಬೊಬ್ಬ ಅಭಿಮಾನ ದೇವತೆಗಳಿಗೆ ಎಂದು ಅದಿದೇವತೆಗಳು ಹೇಳಿದ್ದಾರೆ. ಅದರಲ್ಲಿ ನಾಗರಪಂಚಮಿ ಎಂಬುವುದು ಪಂಚಮಿಗೆ ನಾಗದೇವತೆಗಳು ಸರ್ಪಗಳು ಅದಿ ದೇವತೆಗಳು ಆದುದರಿಂದ ಆ ಪಂಚಮಿಯ ದಿನದಂದು ನಾಗದೇವರ ಆರಾಧನೆ ಮಾಡಿದರೆ ವಿಶೇಷವಾದ ಫಲ ಸಿಗುತ್ತೇ ಎಂಬುವುದು ಸಂಪ್ರದಾಯ ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್ ಶ್ರೀ ಸಂಪುಟ ನರಸಿಂಹಸ್ವಾಮಿ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ  ನುಡಿದರು.

ಇಂದಿಲ್ಲಿ ಸುಬ್ರಹ್ಮಣ್ಯ ಮಠದಲ್ಲಿ ಶ್ರೀಗಳು ನಾರಗರ ಪಂಚಮಿ ಶುಭಾಶಯಗಳನ್ನು ಹಾರೈಸಿ ಮಾತನಾಡುತ್ತಾ ಹಿಂದೊಮ್ಮೆ ಒಂದೇ ಮನೆಯ ಎಂಟು ಮಕ್ಕಳಲ್ಲಿ ಒಬ್ಬಳು ಮಾತ್ರ ಹೆಣ್ಣು ಮಗಳು ಇದ್ದು ಏಳು ಗಂಡು ಮಕ್ಕಳು. ಆ ಮಕ್ಕಳು ಕೂತುಹಲದಿಂದ ಹುತ್ತದೊಳಗೆ ಕೈ ಹಾಕಿದಾಗ ಸರ್ಪ ಕಡಿದು ಆ ಏಳು ಮಂದಿ ಗಂಡು ಮಕ್ಕಳು ಸತ್ತಾಗ ಹೆಣ್ಣು ಮಗಳು ಸರ್ಪನನ್ನು ವಿಶೇಷವಾಗಿ ಪ್ರಾರ್ಥನೆ ಮಾಡಿ, ತಪಸ್ಸು ಮಾಡಿ ಅವನಿಗೆ ವಿವಿಧವಾದ ಹಾಲು ತನಿ ಹೆರೆದು ಪೂಜೆ ಮಾಡಿ ಸರ್ಪನನ್ನು ಪ್ರಸನ್ನಗೊಳಿಸಿ ಆ ಸರ್ಪನ ಹತ್ತಿರ ವರ ಕೇಳುತ್ತಾ ತನ್ನ ಎಲ್ಲಾ ಅಣ್ಣ ತಮ್ಮಂದಿರನ್ನು ಬದುಕಿಸಬೇಕು ಎಂದು ಮೊರೆಯಿಟ್ಟಾಗ ಸಂಪ್ರಿತನಾದ ನಾಗ ಅನುಗ್ರಹದಿಂದ ಸತ್ತು ಹೋದ ಏಳು ಮಂದಿ ಅಣ್ಣ ತಮ್ಮಂದಿರು ಬದುಕಿ ಬರುತ್ತಾರೆ.  ಬಳಿಕ ಅವರು ತನ್ನ ತಂಗಿಯ ಮೇಲೆ ತುಂಬಾ ಪ್ರೀತಿಯಿಂದ, ಅಭಿಮಾನ ಉಳ್ಳವಾಗಿರುತ್ತಾರೆ. ಈ ರೀತಿ ಸಹೋದರಿಯ ಪ್ರಯತ್ನದಿಂದ ತಮ್ಮ ಬದುಕು ಉಜ್ಜೀವನವಾಯಿತು ಎಂಬ ಕಾರಣಕ್ಕೆ ಈ ದಿವಸ ಸಹೋದರಿಯರು ತಮ್ಮ ಅಣ್ಣತಮ್ಮಂದಿರಿಗೆ ವಿಶೇಷವಾಗಿ ಬಹುಮಾನ ನೀಡುವಂತಹ ಸಂಪ್ರದಾಯವಿದೆ. ಚತುಥಿರ್s ದಿನದಂದು ಈ ಆಚರಣೆ ಮಾಡುವಂತದು ಅಥವಾ ಹೆಣ್ಣು ಮಕ್ಕಳು ನಾಗನಿಗೆ ತನು ಎರೆಯುವಂತದು. ಆಮೇಲೆ ಅನ್ನಾಧಿ ಸ್ವೀಕಾರ ಮಾಡದೆ ಉಪ್ಪು ಇತ್ಯಾದಿಗಳನ್ನು ಸೇರಿಸದೆ ಇರತಕ್ಕಂತಹ ಶುದ್ಧವಾದ ಫಲಹಾರ ಸ್ವೀಕಾರ ಮಾಡಿ ಆಚರಣೆ ಮಾಡುವಂತದು ಇದೆ. ಹೆಣ್ಣು ಮಕ್ಕಳಿಗೆ ವಿಶೇಷವಾಗಿ ನಾಗಚತುಥಿರ್s ದಿವಸ ನಾಗ ಒಲಿಯುತ್ತಾನೆ ಎಂಬ ಕಾರಣಕ್ಕೆ ಅದೇ ಅಭಿಷೇಕ ಮಾಡಿದ ಹಾಲನ್ನು ಪಂಚಮಿ ದಿವಸ ತನ್ನ ಅಣ್ಣತಮ್ಮಂದಿರ ಬೆನ್ನಿನ ಮೇಲೆ ನಾಗನ ಚಿತ್ರ ಬಿಡಿಸಿ ಆ ಮೂಲಕ ಅವರನ್ನು ಅಭಿಮಾನ ಮಾಡುವ ಸಂದರ್ಭವಿದೆ. ಈ ಮೂಲಕ ಚತುಥಿರ್s ದಿವಸ ಹೆಣ್ಣು ಮಕ್ಕಳಿಗೆ ಹೆಣ್ಣು ನಾಗದೇವತೆ ಪ್ರೀತಿಕರವಾದರೆ ಪಂಚಮಿ ಗಂಡು ನಾಗಗಳಿಗೆ ಪ್ರೀತಿಕರ ದಿನವಾಗಿದೆ. ಆ ಎರಡು ದಿನಗಳಲ್ಲಿ ನಾಗದೇವರ ಆರಾಧನೆ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಆಚರಣೆ ಮಾಡುವ ಸಂಪ್ರದಾಯವಿದೆ. ಈ ರೀತಿ ಕುಟುಂಬದಲ್ಲಿ ಭೃತೃಪ್ರೀತಿ ಸಮಗ್ರ ಸಮಾಜವನ್ನೇ ಪ್ರೀತಿ ಮಾಡಬೇಕಾದ ಸಂದರ್ಭ. ಆದು ಆಗದಿದ್ದರೂ ಕೂಡ ಕನಿಷ್ಠ ಕುಟುಂಬದಲ್ಲಾದರೂ ಭ್ರತೃಪ್ರೀತಿ ಇರಲಿ ಎಂಬ ಕಾರಣಕ್ಕೆ ಈ ಆಚರಣೆ ಎಂಬುವುದು ಇವತ್ತಿಗೂ ಕೂಡ ಪ್ರಸ್ತುತವಾಗಿರುವ ತಕ್ಕಂತಹ ಆಚರಣೆ. ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರೂ ಸಂತೋಷವಾಗಿರಲೂ ಇದೊಂದು ಸಂದರ್ಭ. ಇದೆ ನೆಪದಲ್ಲಿ ಅವರು ಜೀವನದ ಕೊನೆಯ ವರೆಗೆ ಕೂಡ ಸಂತೋಷದಲ್ಲಿರಬೇಕು ಎಂಬುವುದು ಸಾಮಾಜಿಕ ಸಾಮರಸ್ಯಕ್ಕೆ ಈ ಆಚರಣೆ ಪೂರಕವಾಗಿದೆ. ನಾಗದೇವರ ಪಂಚಮಿ ದಿವಸ ನಾಗದೇವರ ಆರಾಧನೆ ಮಾಡುವುದರ ಮೂಲಕ ಆಧ್ಯಾತ್ಮಿಕವಾಗಿ ನಾಗದೇವರ ಅನುಗ್ರಹವಾಗಿ ಆ ಮೂಲಕ ನಮ್ಮ ಎಲ್ಲಾ ಸಕಲ ಅಭಿಷ್ಠೆಗಳು ಸಿದ್ಧಿಗೊಳ್ಳುತ್ತವೆ ಎಂಬುವುದು ಸಂಪ್ರದಾಯಗಳಿಂದ ತಿಳಿದ ನಂಬಿಕೆ. ನಾಗದೇವರ ಪಂಚಮಿ ದಿವಸ ಆ ಕಾರಣಕ್ಕೆ ಶಾಸ್ತ್ರೀಯವಾಗಿರ ತಕ್ಕಂತಹ ಈ ನಾಗರ ಪಂಚಮಿಯನ್ನು ಪ್ರತಿಯೊಬ್ಬರೂ ಕೂಡ ಆಚರಣೆ ಮಾಡುವುದರ ಮೂಲಕ ಶ್ರೀ ನಾಗದೇವರ ಮತ್ತು ಅಂರ್ತಗತನಾದ ಶಂಕರ ರೂಪಿಯಾದ ಭಗವಂತನ ಅನುಗ್ರಹಕ್ಕೆ  ಭಾಜನರಾಗುವಂತಾಗಲಿ ಎಂದು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ  ಅನುಗ್ರಹಿಸಿದರು.


Spread the love