ಸುರತ್ಕಲ್: ಆಶಾ ಕಾರ್ಯಕರ್ತರಿಗೆ ಕೊಡೆ, ಕಿಟ್ ವಿತರಣೆ

Spread the love

ಸುರತ್ಕಲ್: ಆಶಾ ಕಾರ್ಯಕರ್ತರಿಗೆ ಕೊಡೆ, ಕಿಟ್ ವಿತರಣೆ

ಸುರತ್ಕಲ್: ಕೊರೋನ ವೈರಸ್ ವಿರುದ್ಧ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಬಿರು ಬಿಸಿಲಿಗೆ ಹಾಗೂ ಮುಂದಿನ ಮಳೆಗಾಲದಲ್ಲಿ ಸುರಕ್ಷಿತವಾಗಿ ಕಾರ್ಯ ನಿರ್ವಹಿಸುವಂತಾಗಲು ಕೊಡೆಯನ್ನು ವಿತರಿಸಿದ ಶಾಸಕ ಡಾ. ಭರತ್ ಶೆಟ್ಟಿ ದಿನಸಿ ಸಾಮಗ್ರಿ ಕಿಟ್ ಮತ್ತು ಗೌರವ ಧನವನ್ನು ಹಸ್ತಾಂತರಿಸಿದರು.

ಸುರತ್ಕಲ್, ಕುಳಾಯಿ, ಕಾಟಿಪಳ್ಳ ಹೀಗೆ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವಿಭಾಗದಲ್ಲಿ ಕೆಲಸ ನಿರ್ವಹಿಸುವ ಆಶಾ ಕಾರ್ಯಕರ್ತರು, ಆರೋಗ್ಯ ಕೇಂದ್ರದ ನರ್ಸ್, ಸಿಬ್ಬಂದಿ ವರ್ಗ, ಆಯಂಬುಲೆನ್ಸ್ ಚಾಲಕರಿಗೆ ದಿನಸಿ ಸಾಮಗ್ರಿಯ ಕಿಟ್ ವಿತರಿಸಲಾಯಿತು.

ಈ ಸಂದರ್ಭ ಉಪಮೇಯರ್ ವೇದಾವತಿ, ಕಾರ್ಪೊರೇಟರ್ ವರುಣ್ ಚೌಟ, ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಠಾಣೆಯ ಸಿಐ ಚಂದ್ರಪ್ಪ, ಬಿಜೆಪಿ ಮುಖಂಡರಾದ ತಿಲಕ್‌ರಾಜ್ ಕೃಷ್ಣಾಪುರ, ವಿಠಲ ಸಾಲಿಯಾನ್,ರಾಜೇಶ್ ಕೊಠಾರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


Spread the love