ಸುಳ್ಯ: ಪರೀಕ್ಷೆ ಭಯದಿಂದ ವಿಷ ಸೇವಿಸಿದ್ದ ಯುವತಿ ಸಾವು

Spread the love

ಸುಳ್ಯ: ಪರೀಕ್ಷೆ ಭಯದಿಂದ ವಿಷ ಸೇವಿಸಿದ್ದ ಯುವತಿ ಸಾವು
 
ಸುಳ್ಯ: ಪರೀಕ್ಷೆ ಭಯದಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಮಾ. 4ರಂದು ಮೃತಪಟ್ಟಿದ್ದಾರೆ.

ಸುಳ್ಯ ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರು ಸೋಮಸುಂದರ ಅವರ ಪುತ್ರಿ ಪುತ್ತೂರಿನ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಆರತಿ (17) ಮೃತಪಟ್ಟವರು.

ಹೆತ್ತವರು ಮತ್ತು ಸಹೋದರರನ್ನು ಅವರು ಅಗಲಿದ್ದಾರೆ.

ಆರತಿ ಹೆಚ್ಚಾಗಿ ಮೊಬೈಲ್‌ ಪೋನ್‌ ಬಳಕೆ ಮಾಡುತ್ತಿದ್ದುದಕ್ಕೆ ಓದಿನ ಕಡೆ ಗಮನ ನೀಡಿದಂತೆ ಮನೆಯವರು ಬುದ್ಧಿವಾದ ಹೇಳಿದ್ದರು. ಫೆ. 22ರಂದು ಕಾಲೇಜಿನಿಂದ ಮನೆಗೆ ಬಂದ ಆಕೆ ನನಗೆ ಪರೀಕ್ಷೆಯ ಭಯವಾಗುತ್ತದೆ. ನಾನು ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದರು.

ಕೂಡಲೇ ಮನೆಯವರು ಸುಳ್ಯದ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಮಾ. 2ರಂದು ಮತ್ತೆ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love