ಸುಳ್ಯ : ಸ್ನಾನಕ್ಕೆ ಹೊಳೆಗೆ ಇಳಿದ ವಿದ್ಯಾರ್ಥಿ ನೀರುಪಾಲು

ಸುಳ್ಯ : ಸ್ನಾನಕ್ಕೆ ಹೊಳೆಗೆ ಇಳಿದ ವಿದ್ಯಾರ್ಥಿ ನೀರುಪಾಲು

ಸುಳ್ಯ : ಉಬರಡ್ಕದ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಗೆಳೆಯನೋರ್ವ ನೀರಲ್ಲಿ ಮುಳುಗುತ್ತಿದ್ದ ಸಂದರ್ಭ ಆತನನ್ನು ರಕ್ಷಿಸಿದಾತ ಕೊನೆಗೆ ಮೇಲಕ್ಕೆ‌ ಬರಲಾಗದೆ ನೀರು ಪಾಲಾದ ಘಟನೆ ರವಿವಾರ ಸಂಭವಿಸಿದೆ.

ದುಗಲಡ್ಕ ಬಳಿಯ ಕಮಿಲಡ್ಕದ ರಿಕ್ಷಾ ಚಾಲಕ ಹರೀಶ್ ಗೌಡ ಅವರ ಪುತ್ರ, ಸುಳ್ಯ ಜೂನಿಯರ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಯಶ್ವಿತ್ (15) ಮೃತ ದುರ್ದೈವಿ.

ರವಿವಾರ ಮಧ್ಯಾಹ್ನ ಇತರ ಮೂವರೊಂದಿಗೆ ಸ್ನಾನಕ್ಕೆಂದು ಉಬರಡ್ಕ ಹೊಳೆಗೆ ಹೋಗಿದ್ದ. ನೀರಿನ ಆಳ ಹೆಚ್ಚು ಇರುವ ಗುಂಡಿಗೆ ಹೋದ ಅವರು ಸ್ನಾನ ಮಾಡುತ್ತಿದ್ದಾಗ ಕಿರಣ ಎಂಬ ಯುವಕ ನೀರಲ್ಲಿ ಮುಳುಗ ತೊಡಗಿದಾಗ ಯಶ್ವಿತ್ ಮತ್ತು ಇತರ ಇಬ್ಬರು ಸೇರಿ ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.

ಆದರೆ ಈ ವೇಳೆ ಯಶ್ವಿತ್ ಆಯ ತಪ್ಪಿ ನೀರಿನ ಆಳಕ್ಕೆ ಬಿದ್ದ‌ ಎನ್ನಲಾಗಿದೆ. ಆ ಸಂದರ್ಭ ಯಾರಿಗೂ ಈಜಲು ಗೊತ್ತಿಲ್ಲದ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸಮೀಪದಲ್ಲಿ ಯಾವುದೇ ಮನೆಗಳು ಇರಲಿಲ್ಲ. ದೂರದಲ್ಲಿನ

ಮನೆಯವರಿಗೆ ವಿಷಯ ತಿಳಿಸಿ ಅವರು ಬರುವ ವೇಳೆಗಾಗಲೇ ಯಶ್ವಿತ್ ನೀರು ಪಾಲಾಗಿದ್ದ. ಬಳಿಕ ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆ ಎತ್ತಲಾಯಿತು. ಮೃತರು ತಂದೆ, ತಾಯಿ ಮತ್ತು ಅಣ್ಣನನ್ನು ಅಗಲಿದ್ದಾರೆ.