ಸುವರ್ಣರು ಮತ್ತೆ ನಾಟಕ ಕಟ್ಟಲಿ-ನಟೇಶ್ ಉಳ್ಳಾಲ್

Spread the love

ಸುವರ್ಣರು ಮತ್ತೆ ನಾಟಕ ಕಟ್ಟಲಿ-ನಟೇಶ್ ಉಳ್ಳಾಲ್

ಕನ್ನಡರಂಗಭೂಮಿಯ ಮೂಲಕ ಈ ಕ್ಷೇತ್ರಕ್ಕೆ ಮತ್ತು ಚಲನಚಿತ್ರರಂಗಕ್ಕೆಅಸಾಮಾನ್ಯ ಪ್ರತಿಭೆಗಳನ್ನು ನೀಡಿರುವ ಸದಾನಂದ ಸುವರ್ಣರು ಮತ್ತೆ ನಾಟಕಕಟ್ಟ ಬೇಕು ಎಂದುಖ್ಯಾತ ಸಾಕ್ಷ್ಯಚಿತ್ರ ನಿರ್ದೇಶಕ ನಟೇಶ್ ಉಳ್ಳಾಲ್ ಹೇಳಿದರು.

ಸದಾನಂದ ಸುವರ್ಣ ಗೌರವಾರ್ಥ ಅರೆಹೊಳೆ ಪ್ರತಿಷ್ಠಾನ ಮತ್ತು ಸುಮನಸಾ ಕೊಡವೂರು, ಉಡುಪಿ ಜಂಟಿಯಾಗಿ ಆಯೋಜಿಸಿದ್ದ ಐದು ದಿನಗಳ ನಾಟಕೋತ್ಸವ ‘ಅರೆಹೊಳೆ ರಂಗ ಹಬ್ಬ’ದ ಎರಡನೇ ದಿನದ ‘ಸುವರ್ಣಾನುಭವ’ದಲ್ಲಿ ಅವರು ಮಾತಾಡುತ್ತಿದ್ದರು.

ಸದಾನಂದ ಸುವರ್ಣರದ್ದು ಆರ್ಥಿಕ ವ್ಯವಾಹಾರದ ಲಾಭದ ನಿರೀಕ್ಷೆಯ ಹೊರತಾದ ಕಲಾ ಜೀವನ ಎಂದೂ ಅವರು ಹೇಳಿದರು

ಕರಾವಳಿ ನಾಟಕಕಲಾವಿದರಒಕ್ಕೂಟದಅಧ್ಯಕ್ಷ ಲಯನ್‍ಕಿಶೋರ್ ಡಿ ಶೆಟ್ಟಿ ಮಂಗಳೂರಿನ ಮಟ್ಟಿಗೆಐದು ದಿನಗಳಲ್ಲಿ ಎಂಟು ನಾಟಕ ಪ್ರದರ್ಶನಗಳಲ್ಲಿ ತುಳು ನಾಟಕಕ್ಕೂಆದ್ಯತೆ ನೀಡಿರುವುದುದಾಖಲೆಯ ಹೆಜ್ಜೆಎಂದರು.

ಸುಮನಸಾ ಕೊಡವೂರುಗೌರವಾಧ್ಯಕ್ಷ, ಹಿರಿಯರಂಗಕಲಾವಿದ ಎಂ ಎಸ್ ಭಟ್ ಹಾಗೂ ಅರೆಹೊಳೆ ಸದಾಶಿವ ರಾವ್ ವೇದಿಕೆಯಲ್ಲಿದ್ದು.ಚಿನ್ಮಯಿ ವಿ ಭಟ್ ಮತ್ತುಧನ್ಯಾಅಡ್ತಲೆಕಾರ್ಯಕ್ರಮ ನಿರ್ವಹಿಸಿದರು.

ಎರಡನೆಯ ದಿನ ಮೊದಲುಜರ್ನಿಥೇಟರ್‍ಗ್ರೂಪ್‍ಕಲಾವಿದರಿಂದ‘ಪೊಲಿಸರಿದ್ದಾರೆಎಚ್ಚರಿಕೆ’ ಹಾಗೂ ನಂತರ ಮುಂಬೈನ ಸಪ್ತಸ್ವರಕಲ್ಚರಲ್ ಅಸೋಸಿಯೇಶನ್ ಅವರಿಂದ‘ದೇಯೆಕ್ಕನದೈವದಿಲ್ ತುಳು ನಾಟಕ ಪ್ರದರ್ಶನಗೊಂಡಿತು


Spread the love