ಸೆ. 7 : ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರು, ಉಡುಪಿ ಪ್ರವಾಸ

Spread the love

ಸೆ. 7 : ಮುಖ್ಯಮಂತ್ರಿ ಕುಮಾರಸ್ವಾಮಿ ಮಂಗಳೂರು, ಉಡುಪಿ ಪ್ರವಾಸ

ಮಂಗಳೂರು/ಉಡುಪಿ: ರಾಜ್ಯದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಪ್ಟೆಂಬರ್ 7 ರಂದು ದ.ಕ ಮತ್ತು ಉಡುಪಿ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

ಬೆಳಿಗ್ಗೆ 8.45 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲಪುವ ಮುಖ್ಯಮಂತ್ರಿಗಳು ಬಳಿಕ ಉಡುಪಿಗೆ ತೆರಳಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿರುವರು. ಬಳಿಕ ಮಧ್ಯಾಹ್ನ 3 ಗಂಟೆಗೆ ಮಂಗಳೂರಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳೊಡನೆ ಸಭೆಯನ್ನು ನಡೆಸಲಿರುವರು. ತದ ನಂತರ ಪಕ್ಷದ ಮುಖಂಡರೊಡನೆ ಮಾತುಕತೆ ನಡೆಸಿ, 7.00 ಘಂಟೆಗೆ ಬೆಂಗಳೂರಿಗೆ ಹಿಂತಿರುಗಲಿರುವರು


Spread the love