ಸೆ. 8 ಮೊಂತಿ ಹಬ್ಬಕ್ಕೆ ದಕ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ

ಸೆ. 8 ಮೊಂತಿ ಹಬ್ಬಕ್ಕೆ ದಕ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ಘೋಷಣೆ

ಮಂಗಳೂರು: ಕರಾವಳಿ ಕ್ರೈಸ್ತರು ಸಪ್ಟೆಂಬರ್ 8ರಂದು ಆಚರಿಸುವ ಕೊಯಿಲು ಹಬ್ಬ ಅಥವಾ ಮರಿಯ ಜಯಂತಿ ಹಬ್ಬಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿ ದಕ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ, ಕರಾವಳಿ ಕ್ರೈಸ್ತ ಬಾಂಧವರು ಪ್ರತಿ ವರ್ಷ ಸಪ್ಟೆಂಬರ್ 8ನ್ನು ಅನಾದಿಕಾಲದಿಂದಲೂ ವಿಶೇಷ ಹಬ್ಬದ ದಿನವನ್ನಾಗಿ ಆಚರಿಸುತ್ತಾ ಬಂದಿದ್ದು, ಸದ್ರಿ ದಿನವನ್ನು ಸರ್ಕಾರಿ ರಜಾ ದಿನವನ್ನಾಗಿ ಘೋಷಿಸುವಂತೆ ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ ಇವರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ಸಾರ್ವತ್ರಿಕ ರಜೆಯನ್ನಾಗಿ ಘೋಷಿಸುವಂತೆ ಸಾರ್ವಜನಿಕರಿಂದ ಹಾಗೂ ವಿದ್ಯಾರ್ಥಿಗಳಿಂದ ಬೇಡಿಕೆಗಳು ಬರುತ್ತಿವೆ.

ಈಗಾಗಲೇ ಕೆಲವು ಶಿಕ್ಷಣ ಸಂಸ್ಥೆಗಳು ತಮಗೆ ನೀಡಲಾಗಿರುವ ವಿವೇಚನಾಧಿಕಾರವನ್ನು ಬಳಸಿ ಸಪ್ಟೆಂಬರ್ 8ರಂದು ರಜೆಯನ್ನು ನೀಡುತ್ತಿದ್ದು, ರಜೆ ನೀಡದ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥೀಗಳಿಗೆ ತಾರತಮ್ಯ ಮಾಡಿದಂತಾಗಿ ಹಾಗೂ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲು ತೊಡಕುಂಟಾಗುತ್ತದೆ ಆದ್ದರಿಂದ ಏಕರೂಪದಲ್ಲಿ ನಿರ್ದೇಶನ ನೀಡುವುದು ಸೂಕ್ತ ಎಂದು ಪರಿಗಣಿಸಿ ಎಲ್ಲಾ ಶಿಕ್ಷಣ ಸಂಸ್ಥೆ ಮತ್ತು ಶಾಲೆಗಳೀಗೆ ಸಪ್ಟೆಂಬರ್ 8ರಂದು ರಜೆ ಘೋಷಿಸಲು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.