ಸೇತುವೆಯಲ್ಲಿ ಮೀನಿನ ಲಾರಿ ಉರುಳಿ ಒಂದು ಸಾವು, ಇನ್ನೋರ್ವ ಗಾಯ

Spread the love

ಸೇತುವೆಯಲ್ಲಿ ಮೀನಿನ ಲಾರಿ ಉರುಳಿ ಒಂದು ಸಾವು, ಇನ್ನೋರ್ವ ಗಾಯ

ಕಾಸರಗೋಡು: ಮೀನು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಲ್ಲಿ ಉರುಳಿಬಿದ್ದ ಪರಿಣಾಮ ಲಾರಿಯ ಸಹಾಯಕ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಕಾಂಞಗಾಡ- ಕಾಸರಗೋಡು ರಾಜ್ಯ ಹೆದ್ದಾರಿಯಲ್ಲಿ ಶನಿವಾರ ಸಂಭವಿಸಿದೆ.

ಮೃತರನ್ನು ಅಲಪ್ಪುಝ ಜಿಲ್ಲೆಯ ಪುನ್ನಪ್ರ ಗ್ರಾಮದ ನಿವಾಸಿ ನಾಸರ್ (36) ಎಂದು ಗುರುತಿಸಲಾಗಿದೆ. ಲಾರಿ ಚಾಲಕ ಹಾರಿಸ್ (35) ಗಾಯಗೊಂಡಿದ್ದಾರೆ.

ಶನಿವಾರ ಮುಂಜಾನೆ ಐದು ಗಂಟೆ ಸುಮಾರಿಗೆ ಈ ಅಫಘಾತ ಸಂಭವಿಸಿದ್ದು, ಗೋವಾದಿಂದ ಅಲಪ್ಪುಝಕ್ಕೆ ಮೀನು ಹೇರಿಕೊಂಡು ಹೋಗುತ್ತಿದ್ದ ಲಾರಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಕಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಈ ಘಟನೆ ಸಂಭವಿಸಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸೇತುವೆ ತಡೆಗೋಡೆಗೆ ಡಿಕ್ಕಿಯಾಗಿ ಸೇತುವೆಯ ಮೇಲೆ ಮಗುಚಿಬಿದ್ದ ಪರಿಣಾಮ ನಾಸರ್ ಹೊಳೆಗೆ ಎಸೆಯಲ್ಪಟ್ಟು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಕರಾವಳಿ ಪಡೆ, ಸ್ಥಳೀಯರು ಶೋಧ ನಡೆಸಿ ಹಲವು ಗಂಟೆಗಳ ಬಳಿ ಚೆಮ್ನಾಡ್ ಸಮೀಪದ ಹೋಳೆಯಲ್ಲಿ ಮೃತದೇಹ ಪತ್ತೆಯಾಗಿದೆ.


Spread the love