ಸೋನಿಯಾ ಗಾಂಧಿ ಹುಟ್ಟು ಹಬ್ಬದ ಪ್ರಯಕ್ತ ಬಡ ರೋಗಿಗಳಿಗೆ ಉಪಾಹಾರ ವಿತರಣೆ

Spread the love

ಸೋನಿಯಾ ಗಾಂಧಿ ಹುಟ್ಟು ಹಬ್ಬದ ಪ್ರಯಕ್ತ ಬಡ ರೋಗಿಗಳಿಗೆ ಉಪಾಹಾರ ವಿತರಣೆ

ಮಂಗಳೂರು: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ಸಾರಥಿ ಸೌಹಾನ್ ಎಸ್.ಕೆ ಹಾಗೂ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂಧಕ್ ನೇತೃತ್ವದಲ್ಲಿ ಹಾಗೂ ವೆನ್ಲಾಕ್ ರೋಗಿಗಳ ಪಾಲಿನ ಆಶಾಕಿರಣ ಫ್ರೆಂಡ್ಸ್ ಕಾರುಣ್ಯ ಯೋಜನೆ ಸಹಯೋಗದೊಂದಿಗೆ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಸೋಮವಾರದಂದು ಸಂಜೆ ಬಡ ನಿರ್ಗತಿಕ ರೋಗಿಗಳಿಗೆ ಉಪಹಾರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಂತಲಾ ಗಟ್ಟಿ, ನವಾಜ್ ಜೆಪ್ಪು, ರಮಾನಂದ್ ಪೂಜಾರಿ, ಅನ್ಸಾರುದ್ದೀನ್ ಸಾಲ್ಮರ, ಸಮರ್ಥ್ ಭಟ್, ಪ್ರದೀಪ್ ಬೇಕಲ್, ಹಾಶಿರ್ ಪೆರಿಮಾರ್, ಶ್ರೇಯಸ್ ಭಟ್, ಸವಾದ್ ಸುಳ್ಯ, ಹಿಷಾಮ್ ಜೋನ್, ಪ್ರಶಾಂತ್ ಬಶೀರ್ ಮತ್ತು ಮುಸ್ತಫ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.


Spread the love