ಸ್ಕಾರ್ಫ್ ವಿವಾದ – ಸೌಹಾರ್ದ ಯುತವಾಗಿ ಬಗೆಹರಿಸಬೇಕು : ಜಮಾಅತೆ ಇಸ್ಲಾಮೀ ಮಹಿಳಾ ವಿಭಾಗ

Spread the love

ಸ್ಕಾರ್ಫ್ ವಿವಾದ – ಸೌಹಾರ್ದ ಯುತವಾಗಿ ಬಗೆಹರಿಸಬೇಕು : ಜಮಾಅತೆ ಇಸ್ಲಾಮೀ ಮಹಿಳಾ ವಿಭಾಗ

ಮಂಗಳೂರು: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ನಡೆಯುತ್ತಿರುವ ಸ್ಕಾರ್ಫ್ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ ಸಂಬಂಧಪಟ್ಟವರನ್ನು ಒತ್ತಾಯಿಸಿದೆ.

ವಿವಾದವನ್ನು ರಾಜಕೀಯಗೊಳಿಸಿ, ಕೋಮುಧ್ರುವೀಕರಣ ಗೊಳಿಸುವ ಶಕ್ತಿಗಳ ಷಢ್ಯಂತ್ರಗಳಿಗೆ ಸಮುದಾಯ ಬಲಿ ಬೀಳಬಾರದೆಂದು ಅದು ಎಚ್ಚರಿಸಿದೆ. ಈ ಹಿಂದೆ ಕೂಡಾ ಇಂತಹ ವಿವಾದಗಳು ನಡೆದ ಸಂದರ್ಭಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್, ಎಸ್.ಐ.ಓ ಮತ್ತು ಜಿ.ಐ.ಓ ಮುಂತಾದ ಸಂಘಟನೆಗಳು ಅದನ್ನು ಸೌಹಾರ್ದಯುತವಾಗಿ ಪರಿಹರಿಸುವಲ್ಲಿ ಯಶಸ್ಸನ್ನು ಕಂಡಿದೆ. ಈ ವಿವಾದವನ್ನು ಕೂಡಾ ಮಾತುಕತೆಯ ಮೂಲಕ ಬಗೆಹರಿಸಬೇಕು ಹಾಗೂ ಆಯಾ ಧರ್ಮದ ಧಾರ್ಮಿಕ ಅಸ್ಮಿತತೆಯನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ಸಮಾನ ಅವಕಾಶವಿದೆಯೆಂದು ಅದು ಪ್ರಕಟಣೆಯಲ್ಲಿ ತಿಳಿಸಿದೆ.


Spread the love