ಸ್ಥಳೀಯರ ಗಮನಕ್ಕೆ ತಾರದೆ ಪಚ್ಚನಾಡಿ ರುದ್ರಭೂಮಿಯಲ್ಲಿ ಕೋವಿಡ್ ಸೊಂಕಿತರ ಅಂತ್ಯ ಸಂಸ್ಕಾರ ಬೇಡ – ಶಾಸಕ ಭರತ್ ಶೆಟ್ಟಿ

Spread the love

ಸ್ಥಳೀಯರ ಗಮನಕ್ಕೆ ತಾರದೆ ಪಚ್ಚನಾಡಿ ರುದ್ರಭೂಮಿಯಲ್ಲಿ ಕೋವಿಡ್ ಸೊಂಕಿತರ ಅಂತ್ಯ ಸಂಸ್ಕಾರ ಬೇಡ – ಶಾಸಕ ಭರತ್ ಶೆಟ್ಟಿ

ಮಂಗಳೂರು: ಕೊರೋನಾ ವೈರಸ್ ಸೋಂಕಿನಿಂದ ಗುರುವಾರ ಮೃತಪಟ್ಟ ಮಹಿಳೆ ಶವ ಸಂಸ್ಕಾರವನ್ನು ದಕ ಜಿಲ್ಲಾಡಳಿತ ಪಚ್ಚನಾಡಿ ಸ್ಮಶಾನದಲ್ಲಿ ನೆರವೇರಿಸಲು ನಿರ್ಧರಿಸಿದ್ದು ಇದಕ್ಕೆ ಸ್ಥಳೀಯ ಜನತೆ ವಿರೋಧ ವ್ಯಕ್ತಪಡಿಸಿದ್ದು ಜನತೆಯ ಬೆಂಬಲಕ್ಕೆ ಸ್ಥಳೀಯ ಶಾಸಕ ಡಾ|ಭರತ್ ಶೆಟ್ಟಿ ಕೂಡ ನಿಂತಿದ್ದಾರೆ.

ಕೊರೋನಾ ಸೋಂಕಿತ ವೃದ್ಧೆಯ ಮೃತದೇಹವನ್ನು ವಾಮಂಜೂರು ಬಳಿಯ ಪಚ್ಚನಾಡಿ ರುದ್ರಭೂಮಿಯಲ್ಲಿ ಸಂಸ್ಕಾರ ಮಾಡಲು ದಕ ಜಿಲ್ಲಡಳಿತ ನಿರ್ಧರಿಸಿದ್ದರ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು.

ಈ ಕುರಿತು ಮಾಹಿತಿ ಪಡೆದ ಶಾಸಕ ಭರತ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪಚ್ಚನಾಡಿಯಲ್ಲಿ ಮೃತರ ಅಂತ್ಯಕ್ರಿಎಯ ನಡೆಸುವ ಕುರಿತು ನನಗೆ ಯಾರೂ ಕೂಡ ಮಾಹಿತಿ ನೀಡಿದಲ್ಲಿ ಇಲ್ಲಿನ ಜನತೆ ವಿರೋಧ ವ್ಯಕ್ತಪಡಿಸಿದ್ದು ಇದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಗಮನಕ್ಕೆ ತರಲಾಗಿದೆ. ಇಲ್ಲಿನ ಜನರು ಯಾರೂ ಕೂಡ ಭಯ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.


Spread the love