ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಮತ್ತಷ್ಟು ವೇಗ : ವೇದವ್ಯಾಸ ಕಾಮತ್

Spread the love

ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಮತ್ತಷ್ಟು ವೇಗ : ವೇದವ್ಯಾಸ ಕಾಮತ್

ಮಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಮತ್ತಷ್ಟು ವೇಗ ನೀಡಲಾಗುವುದು. ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸುಂದರ ಮಂಗಳೂರು ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸ್ಮಾರ್ಟ್ ಸಿಟಿಯ 35 ಕೋಟಿ ರೂ ಅನುದಾನದಲ್ಲಿ ಉರ್ವ ಮಾರುಕಟ್ಟೆಯ ರಾಧಾಕೃಷ್ಣ ಮಂದಿರ ಬಳಿ ಸ್ಪೋರ್ಟ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗುವುದು. ಅಂತರಾಷ್ಟ್ರೀಯ ಮಟ್ಟದ ಬ್ಯಾಂಡ್ಮಿಂಟನ್ ಕೋರ್ಟ್, ಕಬ್ಬಡ್ಡಿ ಕೋರ್ಟ್, ಕ್ರೀಡಾಪಟುಗಳಿಗೆ ಹೆತ್ತವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಉನ್ನತ ಮಟ್ಟದ ಆಸನಗಳ ವ್ಯವಸ್ಥೆ, ಆಡಳಿತ ಕಚೆರಿ ಕ್ರೀಡಾಕೇಂದ್ರ, ಸ್ಪೋರ್ಟ್ ಹಬ್, ವಾಣಿಜ್ಯ ಕಟ್ಟೆ ನಿರ್ಮಾಣಗೊಳ್ಳಲಿದೆ ಎಂದರು.

ಮಂಗಳಾ ಕ್ರೀಡಾಂಗಣದ ಉನ್ನತೀಕರಣಕ್ಕೆ 10ಕೋಟಿ ರೂ ಮೀಸಲಿರಿಸಲಾಗಿದೆ. ಮಂಗಳ ಕ್ರೀಡಾಂಗಣ ಸುತ್ತಲಿನ ಒಟ್ಟಾರೆ ಅಭಿವೃದ್ಧಿಗಾಗಿ 180 ಕೋಟಿ ರೂ ಯೋಜನೆ ನಮೂದಿಸಲಾಗಿದೆ. ಈ ಯೋಜನೆಯಲ್ಲಿ ಮಂಗಳಾ ಸ್ಟೇಡಿಯಂ ಒಳಭಾಗದಲ್ಲಿ ಕುಳಿತುಕೊಳ್ಲುವ ಸ್ಥಳಗಳಿಗೆ ಮೇಲ್ಚಾವಣಿಯನ್ನು ಅಳವಡಿಸಲಾಗುವುದು. ಸ್ವಿಮ್ಮೀಂಗ್ ಫೂಲ್, ಟೆನ್ನಿಸ್ ಕ್ರೀಡಾಂಗಣ, ಬಾಸ್ಕೆಟ್ ಬಾಲ್, ವಾಲಿಬಾಲ್ ಕ್ರೀಡಾಂಗಣ ಅಭಿವೃದ್ಧಿ ಹಾಲಿ ಇರುವ ಕ್ರೀಡಾಂಗ ಹಾಸ್ಟೆಲ್ ಅಭಿವೃದ್ಧಿಗೊಳಿಸಲಾಗುವುದು ಎಂದರು.


Spread the love