ಸ್ವಂತ ರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರು ಸಂಪರ್ಕಿಸಿ -ಜಿಲ್ಲಾಧಿಕಾರಿ ಜಿ ಜಗದೀಶ್

Spread the love

ಸ್ವಂತ ರಾಜ್ಯಕ್ಕೆ ತೆರಳುವ ವಲಸೆ ಕಾರ್ಮಿಕರು ಸಂಪರ್ಕಿಸಿ -ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ : ಕೊರೋನಾ ವೈರಸ್ ಕಾಯಿಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಉಡುಪಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಉಳಿದಿರುವ ಹೊರ ರಾಜ್ಯಗಳ ವಲಸೆ ಕಾಮಿಕರನ್ನು ಈಗಾಗಲೇ ಅವರ ಸ್ವಂತ ಊರುಗಳಿಗೆ ಜಿಲ್ಲಾಡಳತದಿಂದ ಟ್ರೆನ್ /ಬಸ್ಸು ಮೂಲಕ ಈಗಾಗಲೇ ಕಳುಹಿಸಿಕೊಡಲಾಗಿದೆ.

ಇನ್ನೂ ಕೂಡ ಜಿಲ್ಲೆಯಲ್ಲಿ ಹೊರ ರಾಜ್ಯದ ವಲಸೆ ಕಾರ್ಮಿಕರು ಅವರ ಸ್ವಂತ ಊರಿಗೆ ಹೋಗಲು ಬಾಕಿಯಾಗಿದ್ದಲ್ಲಿ , ಅಂತಹ ವಲಸೆ ಕಾರ್ಮಿಕರು ಅವರ ಸ್ವಂತ ರಾಜ್ಯಕ್ಕೆ ಹೋಗಲು ಇಚ್ಛಿಸಿದ್ದಲ್ಲಿ , ದೂರವಾಣಿ ಸಂಖ್ಯೆ (0820-2571500) ಕರೆ ಮಾಡುವಂತೆ ಅಥವಾ ವ್ಯಾಟ್ಸಪ್ ನಂಬರ್ (98808 31516)ಗೆ ದಾಖಲೆಗಳನ್ನು ಕಳುಹಿಸಿ ನೊಂದಾವಣೆ ಮಾಡುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love