ಸ್ವಚ್ಚ ಮಂಗಳೂರು ಅಭಿಯಾನದ 21 ನೇ ವಾರದಲ್ಲಿ ಜರುಗಿದ 10 ಸ್ವಚ್ಛತಾ ಕಾರ್ಯಕ್ರಮ

Spread the love

ಸ್ವಚ್ಚ ಮಂಗಳೂರು ಅಭಿಯಾನದ 21 ನೇ ವಾರದಲ್ಲಿ  ಜರುಗಿದ 10  ಸ್ವಚ್ಛತಾ ಕಾರ್ಯಕ್ರಮ

230) ಎಕ್ಕೂರು: ಸ್ವಚ್ಛ ಎಕ್ಕೂರಿಗಾಗಿ ರೂಪುಗೊಂಡ ತಂಡದ ಸದಸ್ಯರಿಂದ ಎಕ್ಕೂರಿನಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಸ್ವಾಮಿ ಜಿತಕಾಮಾನಂದಜಿ ಹಾಗೂ ಶ್ರೀ ಭರತ್ ಶೆಟ್ಟಿ  ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಚಾಮುಂಡೇಶ್ವರಿ ಕಟ್ಟೆಯ ಸುತ್ತಮುತ್ತ ಸ್ವಚ್ಛತಾ ಕಾರ್ಯ ಮಾಡಲಾಯಿತು. ಸ್ವಚ್ಛತೆಯ ಮಹತ್ವ ಸಾರುವ ಫಲಕಗಳನ್ನು ಬರೆಸಲಾಗಿದೆ. ಹಿಂದೂ ಯುವಸೇನೆ, ಅಯ್ಯಪ್ಪ ಭಜನಾ ಮಂದಿರ ಹಾಗೂ ನಂದಾದೀಪ ಭಜನಾ ಮಂದಿರದ ಸದಸ್ಯರು ಅಭಿಯಾನದಲ್ಲಿ ಪಾಲ್ಗೊಂಡು ಸಹಯೋಗ ನೀಡಿದರು. ಶ್ರೀಮತಿ ಜಯಲತಾ, ಮೋನಿಶಾ ಸೇರಿದಂತೆ ನೂರಕ್ಕೂ ಮಿಕ್ಕಿ ಜನ ಭಾಗವಹಿಸಿದರು.

231) ಅತ್ತಾವರ: ಚಕ್ರಪಾಣಿ ದೇವಸ್ಥಾನದಿಂದ ಅತ್ತಾವರ ಕಟ್ಟೆಯ ತನಕ ಚಕ್ರಪಾಣಿ ದೇವಸ್ಥಾನದ ಭಕ್ತರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಶ್ರೀ ಜಯಕುಮಾರ ಹಾಗೂ ಶ್ರೀ ದೇವದಾಸ ಕೊಟ್ಟಾರಿ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಎನ್ ವಿ ಫ್ರೆಂಡ್ಸ್ ಹಾಗೂ ಎಸ್ ಎಂ ಕುಶೆ ಶಾಲೆಯಯವರು ಅಭಿಯಾನಕ್ಕೆ ಸಹಯೋಗ ಒದಗಿಸಿದರು. ಶ್ರೀ ಎಂ ಎಸ್ ಕೊಟ್ಯಾನ್, ಶ್ರೀ ಪ್ರತಿಮ್ ಕುಮಾರ್, ಶ್ರೀ ಅನಿಲ್ ನಾಯಕ್ ಸೇರಿದಂತೆ ಅನೇಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

232) ವಲಚ್ಚಿಲ: ಶ್ರೀನಿವಾಸ ಇಂಜನಿಯರಿಂಗ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಂದ ವಲಚ್ಚಿಲ ಹೆದ್ದಾರಿಯ ಬದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವಚ್ಚ ಮಂಗಳೂರು ಅಭಿಯಾನದ ಪ್ರಧಾನ ಸಂಯೋಜಕ ಶ್ರೀ ದಿಲ್ ರಾಜ್ ಆಳ್ವ ಹಾಗೂ ಪೆÇ್ರ. ಹರ್ಷವರ್ಧನ್ ಹೆಗ್ಡೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ವಲಚ್ಚಿಲ ಜಂಕ್ಷನ್‍ನಲ್ಲಿರುವ ಎರಡು ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಿದರು. ನಂತರ ಆಟೊ ಪಾರ್ಕ್ ಸೇರಿದಂತೆ ರಸ್ತೆ ವಿಭಾಜಕಗಳನ್ನು ಗುಡಿಸಿ ಶುಚಿಗೊಳಿಸಿದರು. ಶ್ರೀ ಅಭಿಷೇಕ್, ಶ್ರೀ ಸಚಿನ್ ಸೇರಿದಂತೆ ಅನೇಕರು ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

233) ಬೋಳಾರ: ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಬೋಳಾರ – ಮುಳಿಹಿತ್ಲು ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀ ಲೋಕಯ್ಯ ಶೆಟ್ಟಿ ಶ್ರೀ ಅಜಯ ಆಳ್ವ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.  ರಸ್ತೆ ತೋಡುಗಳನ್ನು ಶುಚಿಗೊಳಿಸಿದ್ದಲ್ಲದೇ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರದ ದಿಮ್ಮಿಯನ್ನು ತೆರವುಗೊಳಿಸಲಾಯಿತು. ಮನೆಮನೆಗೆ ತೆರಳಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿ ಕರಪತ್ರ ಹಂಚಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ಕಳೆಗುಂದಿದ್ದ ಮಾರ್ಗಸೂಚಕ ಫಲಕವನ್ನು ಹೊಸದಾಗಿ ಬರೆಸಲಾಗಿದೆ. ಅಭಿಯಾನದ ಮುಖ್ಯ ಸಂಯೋಜಕ ಶ್ರೀ ಉಮಾನಾಥ್ ಕೋಟೆಕಾರ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

234) ಮಾಲೆಮಾರ್: ಭಾರತೀ ಗ್ರೀನ್ ಪಾರ್ಕ್ ರಸ್ತೆ ಮಾಲೆಮಾರ್ ನಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ವಿಜಯ ಕುಮಾರ ಶೆಟ್ಟಿ ಹಾಗೂ ರತ್ನಾಕರ ಬಿ ಅಭಿಯಾನಕ್ಕೆ ಚಾಲನೆ ನೀಡಿದರು. ಮಾಲೆಮಾರ್ ಪರಿಸರದ ರಸ್ತೆ ತೋಡುಗಳನ್ನು ಶುಚಿಗೊಳಿಸಲಾಯಿತು. ಅಲ್ಲಲ್ಲಿ ನೇತಾಡಿಕೊಂಡಿದ್ದ ಹಳೆಯ ಬ್ಯಾನರ್‍ಗಳನ್ನು ತೆಗೆಯಲಾಯಿತು. ಶ್ರೀ ವಿನ್ಯಾಸ್ ಹಾಗೂ ಶ್ರೀ ಹರಿಪ್ರಸಾದ ಮತ್ತಿರರು ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.

235) ಕೆಪಿಟಿ: ಕರ್ನಾಟಕ್ ಪಾಲಿಟೆಕ್ನಿಕ್ ಮುಂಭಾಗ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದಲ್ಲಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸಲಾಗಿತ್ತು. ಪ್ರಾಧ್ಯಾಪಕ ಶ್ರೀ ಸೂರಜ್ ಪಿ ಎಚ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಕೆಪಿಟಿ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಹೆದ್ದಾರಿ ಪಕ್ಕದ ಜಾಗೆ, Œವೃತ್ತ ಹಾಗೂ ಏರ ಪೆÇೀರ್ಟ್ ರಸ್ತೆಯ ಪುಟ್ ಪಾಥ್ ಗಳನ್ನು ಶುಚಿಗೊಳಿಸಿದರು. ವಿದ್ಯಾರ್ಥಿಗಳಾದ ಅಂಕುಶ್ ಅಹಾಗೂ ಗಣೇಶ್ ಅಭಿಯಾನವನ್ನು ಸಂಯೋಜಿಸಿದರು.

236) ಗಣೇಶಪುರ: ಡಾ. ಸಂಪತ್ ಕುಮಾರ್ ಮಾರ್ಗದರ್ಶನದಲ್ಲಿ ಸ್ಥಳೀಯ ಜೆಸಿಆಯ್ ಸದಸ್ಯರಿಂದ ಗಣೇಶಪುರ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ಚಿರಂಜೀವಿಲು ಹಾಗೂ ಶ್ರೀ ರಘುರಾಮ್ ತಂತ್ರಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಪೆÇೀಸ್ಟ್ ಆಫೀಸ್ ಆವರಣ ಹಾಗೂ ಮುಖ್ಯ ರಸ್ತೆಗಳಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.  ಕೇಸರಿ ಫ್ರೇಂಡ್ಸ್, ನವೋದಯ ಯುವಕ ವೃಂದ, ಆಸರೆ ಹಾಗೂ ಚಿಂತನಾ ತಂಡಗಳ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಶ್ರೀಶ ಕರ್ಮರನ್, ಶ್ರೀ ಧರ್ಮೇಂದ್ರ, ಶ್ರೀ ಹರೀಶ್ ನಾಯ್ಕ್ ಸೇರಿದಂತೆ ಅನೇಕರು ಅಭಿಯಾನದಲ್ಲಿ ತೊಡಗಿಸಿಕೊಂದರು.

237) ಶಿವಭಾಗ್: ಸ್ವಚ್ಛ ಶಿವಭಾಗ್ ತಂಡದ ಸದಸ್ಯರಿಂದ ಶಿವಭಾಗ್ ಮುಖ್ಯರಸ್ತೆಯಲ್ಲಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಡಾ. ಮಾಲಿನಿ ಹೆಬ್ಬಾರ್ ಹಾಗೂ ಶ್ರೀಮತಿ ವಿನುತಾ ಅಭಿಯಾನವನ್ನು ಶುಭಾರಂಭಗೊಳಿಸಿದರು. ಶ್ರೀಮತಿ ಶೀಲಾ ಜಯಪ್ರಕಾಶ್ ಹಾಗೂ ಶ್ರೀಮತಿ ಕಲಾದೀಪಕ್ ಕಾರ್ಯಕ್ರಮವನ್ನು ಸಂಯೋಜಿಸಿದರು.

238) ಕಾರಸ್ಟ್ರೀಟ್: ಶ್ರೀಗೋಕರ್ಣ ಮಠದ ಸೇವಾಸಮಿತಿ ಸದಸ್ಯರ ನೇತೃತ್ವದಲ್ಲಿ ರಥಬೀದಿಯ  ಆಶ್ವಥ ಕಟ್ಟೆಯಿಂದ ಹೂವಿನ ಮಾರುಕಟ್ಟೆಯ ವರೆಗೆ ಸ್ವಚ್ಛತಾ ಕಾರ್ಯವನ್ನು ಆಯೋಜಿಸಲಾಗಿತ್ತು. ಶ್ರೀ ಎಸ್ ಪಿ ಆಚಾರ್ಯ ಹಾಗೂ ಶ್ರೀ ದಾಮೋದರ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯಲ್ಲದೇ ಅಲ್ಲಲ್ಲಿ ಗೋಡೆಗಳಿಗೆ ಅಂಟಿಸಿದ್ದ ಭಿತ್ತಿಪತ್ರಗಳನ್ನು ಕಿತ್ತು ಸ್ವಚ್ಛಗೊಳಿಸಿದರು. ಶ್ರೀ ಕಮಲಾಕ್ಷ ಪೈ ಕಾರ್ಯಕ್ರಮವನ್ನು ಸಂಯೋಜಿಸಿದರು.

239) ಕಪಿತಾನಿಯೋ: ಸ್ವಚ್ಛ ಗರೋಡಿ ತಂಡದ ಸದಸ್ಯರು ಕಪಿತಾನಿಯೋ ಸರಕಾರಿ ಶಾಲೆಯ ಸುತಮುತ್ತ ಸ್ವಚ್ಛತಾ ಕಾರ್ಯ ಹಮ್ಮಿಕೊಂಡರು. ಶ್ರೀ ಹರೀಶ್ ಆಚಾರ್ ಹಾಗೂ ಶ್ರೀ ರಿತೇಶ್ ನಾಗುರಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಶಾಲಾ ಆವರಣದ ಸುತ್ತಮುತ್ತ ಹಾಗೂ ಪಕ್ಕದ ಮಾರ್ಗಗಳನ್ನು ಶುಚಿಗೊಳಿಸಲಾಯಿತು. ಶ್ರೀ ಪ್ರಕಾಶ ಗರೋಡಿ ಹಾಗೂ ಶ್ರೀ ಸಂದೀಪ್ ಗರೋಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.

ಈ ಎಲ್ಲ ಕಾಯಕ್ರಮಗಳಿಗೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸುತ್ತಿದೆ.

ಸಂಪರ್ಕ – 9448353162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ಸ್ವಚ್ಛ ಮಂಗಳೂರು ಅಭಿಯಾನ)


Spread the love