ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 28 ನೇ ವಾರದ ಸ್ವಚ್ಛತಾ ಕಾರ್ಯಕ್ರಮ

Spread the love

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 28 ನೇ ವಾರದಲ್ಲಿ (16-04-17) ಜರುಗಿದ 14 ಸ್ವಚ್ಛತಾ ಕಾರ್ಯಕ್ರಮಗಳ ವರದಿ

327) ವೆಲೆನ್ಸಿಯಾ: ಸ್ವಚ್ಛ ಗರೋಡಿ ತಂಡದವರಿಂದ ವೆಲೆನ್ಸಿಯಾ ವೃತ್ತ ಹಾಗೂ ಮುಖ್ಯರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀಮತಿ ವಿಜಯಶ್ರಿ ಹಾಗೂ ಪೂಜಾ ರಾಜ್ ಕಾರ್ಯಕ್ರಮಕ್ಕೆಚಾಲನೆ ನೀಡಿದರು. ರಸ್ತೆ ಸ್ವಚ್ಛ ಮಾಡುವುದರ ಜೊತೆಗೆ ಅಕ್ಕಪಕ್ಕದಲ್ಲಿದ್ದ ತೋಡುಗಳನ್ನೂ ಸ್ವಚ್ಛಗೊಳಿಸಲಾಯಿತು. ಬಳಿಕ   ವೆಲೆನ್ಸಿಯಾ ಬಸ್ ನಿಲ್ದಾಣವನ್ನು ಶುಚಿಗೊಳಿಸಿ, ಬಣ್ಣ ಬಳಿದು ಅಂದಗೊಳಿಸಲಾಯಿತು. ಅಲ್ಲದೇ “ನೇತ್ರಾವತಿ ಉಳಿಸಿ” ಎಂಬ ವಾಕ್ಯವಿರುವ ಉತ್ತಮ ಗ್ರಾಫಿಕ್ಸ್‍ನಿಂದ ಕೂಡಿದ ಫಲಕವನ್ನು ಬಸ್ ತಂಗುದಾಣಕ್ಕೆ ಅಳವಡಿಸಲಾಗಿದೆ. ಶ್ರೀನವೀನ ಪೂಜಾರಿ ಹಾಗೂ ಶ್ರೀಪ್ರಕಾಶ್ ಗರೋಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.

328) ಬೊಂದೆಲ್ : ಸ್ವಚ್ಛ ಕಾವೂರು ತಂಡದಿಂದ ಬೊಂದೆಲ್ ವೃತ್ತದ ಆಸುಪಾಸಿನಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಪ್ರಾಚಾರ್ಯ ಶ್ರೀ ಬಿ ಎನ್ ಕುಂಬಾರ ಹಾಗೂ ಶ್ರೀ ಕೆ ದಿವಾಕರ್ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಶ್ರೀಸಚಿನ ಹಾಗೂ ಶ್ರೀ ಮೋಹನ್ ಪೂಜಾರಿ ಮಾರ್ಗದರ್ಶನದಲ್ಲಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಮುಂಭಾಗದ ರಸ್ತೆ ಹಾಗೂ ಬೊಂದೆಲ್ ಮುಖ್ಯರಸ್ತೆಗಳನ್ನು ಶುಚಿಗೊಳಿಸಲಾಯಿತು. ಜೊತೆಗೆ ಅಲ್ಲಲ್ಲಿ ನೇತಾಡುತ್ತಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು. ಕಾಂಕ್ರೀಟ್ ರಸ್ತೆಯ ಮೇಲೆ ಹರಡಿಕೊಂಡಿದ್ದ ಮಣ್ಣನ್ನು ತೆಗೆಯಲಾಯಿತು. ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯರು ಅಭಿಯಾನಕ್ಕೆ ಸಾಥ್ ನೀಡಿದರು. ಶ್ರೀ ಸುಧಾಕರ್ ಕೆ ಹಾಗೂ ಶ್ರೀ ಗಣೇಶ್ ಶೆಟ್ಟಿ ಕಾರ್ಯಕ್ರಮವನ್ನು ಸಂಘಟಿಸಿದರು.

329) ಕದ್ರಿ ಪಾರ್ಕ್ ರಸ್ತೆ: ದಕ ಹವ್ಯಕ ಸಭಾದ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನವನ್ನು ನಂತೂರ್ ಪದವಿನಿಂದ ಕದ್ರಿ ಪಾರ್ಕ್ ಸಾಗುವ ಮಾರ್ಗದಲ್ಲಿ ಕೈಗೊಳ್ಳಲಾಯಿತು. ಡಾ. ರಾಜೇಂದ್ರ ಪ್ರಸಾದ ಹಾಗೂ ಶ್ಯಾಮ್ ಭಟ್ ಕೆ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ರಸ್ತೆಯ ಅಕ್ಕಪಕ್ಕದ ಸ್ಥಳಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹೆಕ್ಕಲಾಯಿತು ಹಾಗೂ ತೋಡುಗಳನ್ನು ಶುಚಿಗೊಳಿಸಲಾಯಿತು. ಶ್ರೀ ವೇಣುಗೋಪಾಲ ಭಟ್ ಕಾರ್ಯಕ್ರಮವನ್ನು ಸಂಯೋಜಿಸಿದರು.

330) ಯಯ್ಯಾಡಿ : ಫ್ರೆಂಡ್ಸ್ ಫಾರ್ ಎವರ್ ಬಳಗದ ಸಹಯೋಗದಲ್ಲಿ ಯಯ್ಯಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶ್ರೀ ಸುಕುಮಾರ್ ಹಾಗೂ ಶ್ರೀ ಚರಣಪ್ರಸಾದ ಆಡ್ಯಂತಾಯ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಪೆÇೀಲಿಸ್ ಅಧಿಕಾರಿ ಶ್ರೀ ವೇದಮೂರ್ತಿ, ಶ್ರೀ ನಿರ್ಮಲ್ ಕುಮಾರ್, ಶ್ರೀ ಬಾಲಕೃಷ್ಣ ರೈ ಮತ್ತಿತರರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಸುಭೋದಯ ಆಳ್ವ ಹಾಗೂ ಶ್ರೀ ಸುಜಿತ್ ಅಭಿಯಾನವನ್ನು ಸಂಯೋಜಿಸಿದರು.

331) ಹಂಪಣಕಟ್ಟೆ: ಶ್ರೀ ಕೃಷ್ಣ ಭವನ ಆಟೋ ಚಾಲಕರ ಸಹಯೋಗದಲ್ಲಿ ಕ್ಲಾಕ್ ಟವರ್ ಸುತ್ತಮುತ್ತ ಸ್ವಚ್ಛತಾ ಅಭಿಯಾನ ಜರುಗಿತು. ಪ್ರಥಮದಲ್ಲಿ ಮಿನಿ ವಿಧಾನಸೌಧದ ಆವರಣ ಗೋಡೆಗಳಿಗೆ ಅಂಟಿಸಿದ್ದ ಪೆÇೀಸ್ಟರ್ ತೆಗೆದು ಶುಚಿಗೊಳಿಸಲಾಯಿತು. ತದನಂತರ ರಸ್ತೆವಿಭಾಜಕಗಳಲ್ಲಿ ಬೆಳೆದಿದ್ದ ಕಳೆ ಕಿತ್ತು ಸ್ವಚ್ಚಗೊಳಿಸಲಾಯಿತು. ಟೌನ್ ಹಾಲ್ ಹೊರಭಾಗದಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಶ್ರೀ ದಿಲ್‍ರಾಜ್ ಆಳ್ವ ಕಾರ್ಯಕ್ರಮವನ್ನು ಸಂಯೋಜಿಸಿದರು.

332) ಕೊಟ್ಟಾರ: ಕುಮಾರ್ ಜಿಮ್ ಫ್ರೆಂಡ್ಸ್ ಸದಸ್ಯರಿಂದ ಕೊಟ್ಟಾರ ಚೌಕಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಸಂತೋಷ ಕುಮಾರ್ ಹಾಗೂ ಶ್ರೀ ಪ್ರವೀಣ ಕುಮಾರ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಒಂದು ತಂಡ ಶ್ರೀ ರಘು ಶೆಟ್ಟಿ ಮಾರ್ಗದರ್ಶನದಲ್ಲಿ ಮೇಲ್ಸೇತುವೆ ಕೆಳಭಾಗದಲ್ಲಿ ಸ್ವಚ್ಛತೆಯನ್ನು ಕೈಗೊಂಡಿತು. ಮತ್ತೊಂದು ತಂಡ ಶ್ರೀ ಯಶವಂತ ಆಚಾರ್ಯ ನೇತೃತ್ವದಲ್ಲಿ ಪ್ಲೈಒವರ್ ಕಂಬಗಳನ್ನು ಶುದ್ಧಗೊಳಿಸಿ ಬಣ್ಣ ಬಳಿದು ಸುಂದರ ಚಿತ್ರಗಳನ್ನು ಬರೆಯಿತು. ಶ್ರೀ ಕಿರಣ ಕುಮಾರ ಅಭಿಯಾನವನ್ನು ಸಂಯೋಜಿಸಿದರು.

333) ಜೆಪ್ಪು: ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರಿಂದ ಜೆಪ್ಪು ಮಾರ್ಕೆಟ್ ಬಳಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಜೆಪ್ಪು ಕೂಡುರಸ್ತೆಯನ್ನು ಸ್ವಚ್ಛಗೊಳಿಸಿ ತದನಂತರ ಗೋಡೆಗಳಿಗೆ ಅಂಟಿಸಲಾಗಿದ್ದ ಪೆÇೀಸ್ಟರ್ ಗಳನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಶ್ರೀ ಕಮಲಾಕ್ಷ ಬೋಳಾರ, ರಮೇಶ ಕೊಟ್ಟಾರಿ, ಶ್ರೀ ಸುರೇಶ ಶೆಟ್ಟಿ ಮತ್ತಿತರರು ಅಭಿಯಾನದಲ್ಲಿ ಭಾಗವಹಿಸಿದರು.

334) ಆರ್ ಟಿ ಓ ವೃತ್ತ: ಶ್ರೀರಾಮ್ ಟ್ರಾನ್ಸಪೆÇೀಟ್ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳು ಆರ್ ಟಿ ಓ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛ ಮಾಡಿದರು. ಕಂಪನಿಯ ಡಿಜಿಎಮ್ ಶ್ರೀ ಶರತ್ ಕುಮಾರ್ ಹಾಗೂ ಶ್ರೀ ಸತ್ಯನಾರಾಯಣ ಕೆ ವಿ ಅಭಿಯಾನವನ್ನು ಪ್ರಾರಂಭಗೊಳಿಸಿದರು. ಶ್ರೀ ಸುದರ್ಶನ ಎಸ್ ಕಾರ್ಯಕ್ರಮವನ್ನು ಸಂಯೋಜಿಸಿದರು.

335) ಮಣ್ಣಗುಡ್ದ: ಗುಂಡೂರಾವ್ ಲೇನ್ ನಲ್ಲಿ ಸ್ಥಳಿಯ ಯುವಕರ ಸಹಕಾರದಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ರಸ್ತೆತೋಡುಗಳನ್ನು ಸ್ವಚ್ಛ ಮಾಡಿದ್ದಲ್ಲದೇ ನಿರುಪಯುಕ್ತವಾಗಿದ್ದ ಹಾಗೂ ಕಸದಿಂದ ತುಂಬಿದ್ದ ಸಾರ್ವಜನಿಕ ಆಟದ ಮೈದಾನವನ್ನು ಸ್ವಚ್ಛಗೊಳಿಸಲಾಯಿತು. ಶ್ರೀ ಮನೋಹರ್ ಪ್ರಭು ಕಾರ್ಯಕ್ರಮವನ್ನು ಸಂಯೋಜಿಸಿದರು.

336) ಕಿನ್ಯ ಕೈಕಂಬ: ಸ್ವಚ್ಛ ಕೋಟೆಕಾರ ತಂಡದ ಸದಸ್ಯರಿಂದ ಕಿನ್ಯ ಕೈಕಂಬದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಮನೋಹರ್ ಮಧುಪಾಲ್ ಹಾಗೂ ಶ್ರೀ ಶಿವಾನಂದ ಮಿತ್ರನಗರ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯರಾದ ಶ್ರೀಅಣ್ಣು ಸೇರಿದಂತೆ ಅನೇಕರು ಅಭಿಯಾನದಲ್ಲಿ ಪಾಲ್ಗೊಂಡರು. ಶ್ರೀ ಸೀತಾರಾಮ್ ಸೋವೂರು ಅಭಿಯಾನವನ್ನು ಸಂಘಟಿಸಿದರು.

337) ಕೊಣಾಜೆ: ಸ್ವಚ್ಛ ಮಂಗಳಗಂಗೋತ್ರಿ ತಂಡದ ಸದಸ್ಯರಿಂದ ಪಜೀರ್‍ನಲ್ಲಿ ಸ್ವಚ್ಛತಾ ಕೈಂಕರ್ಯ ನಡೆಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಪೆÇ್ರ. ಬಾಲಕೃಷ್ಣ ಹಾಗೂ ಶ್ರೀ ಶೇಷಪ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಶ್ರೀಕೃಷ್ಣ ಭಜನಾ ಮಂದಿರದ ಸದಸ್ಯರೂ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು.

338) ಬಿಜೈ: ಮಂಗಳೂರಿನ ಹಿರಿಯರು ಸ್ವಚ್ಛತಾ ಅಭಿಯಾನವನ್ನು ಬಿಜೈ ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಕೈಗೊಂಡರು. ಹಿರಿಯರಾದ ಶ್ರೀನಾಗೇಶ್ ಮಾರ್ಗದರ್ಶನದಲ್ಲಿ ಭಾರತ ಮಾಲ್ ಸರ್ಕಲ್ ನಿಂದ ಪ್ರಾರಂಭಿಸಿ ಬಿಜೈ ಚರ್ಚ್ ಗೆ ಸಾಗುವ ಮಾರ್ಗದ ಎರಡು ಬದಿಗಳನ್ನು ಗುಡಿಸಿ ಶುಚಿಗೊಳಿಸಲಾಯಿತು. ಶ್ರೀ ರಾಮಕುಮಾರ್ ಬೇಕಲ್ ಅಭಿಯಾನವನ್ನು ಸಂಯೋಜಿಸಿದರು.

339) ಮಂಗಳಾದೇವಿ: ಶ್ರೀಶಾರದಾ ಮಹಿಳಾ ವೃಂದದವರಿಂದ ರಾಮಕೃಷ್ಣ ಮಠದ ಎದುರು ರಸ್ತೆ ಹಾಗೂ ಮಂಕಿಸ್ಟಾಂಡ್ ಬಳಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶ್ರೀಮತಿ ಮಣಿ ರೈ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಸುಮಾರು ಎರಡು ಗಂಟೆಗಳ ಕಾಲ ಅಭಿಯಾನ ನಡೆಯಿತು. ಕಾಪೆರ್Çರೇಶನ್ ಬ್ಯಾಂಕನ್ ಎಜಿಎಂ ಶ್ರೀ ರವಿಶಂಕರ ಮತ್ತಿತರರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

340) ದೇರಲಕಟ್ಟೆ: ರೋಟರಿ ಕ್ಲಬ್ ಸಹಯೋಗದಲ್ಲಿ ಸ್ವಚ್ಚತಾ ಅಭಿಯಾನವನ್ನು ಪೆರ್ಮನೂರು ಪ್ರದೇಶದಲ್ಲಿ ಸ್ವಚ್ಛಗೊಳಿಸಲಾಯಿತು. ಪೆರ್ಮನೂರು ಮುಖ್ಯರಸ್ತೆ ಹಾಗೂ ಅಕ್ಕಪಕ್ಕದ ಸ್ಥಳವನ್ನು ಶುಚಿಗೊಳಿಸಲಾಯಿತು. ಶ್ರೀ ಪುರುಷೋತ್ತಮ್ ಅಂಚನ್ ಕಾರ್ಯಕ್ರಮವನ್ನು ಸಂಯೋಜಿಸಿದರು.

ಈ ಅಭಿಯಾನಕ್ಕೆ ಎಂಆರ್‍ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪೆÇ್ರೀತ್ಸಾಹಿಸುತ್ತಿವೆ.  327 ರಿಂದ 340 ರ ಅಭಿಯಾನಗಳ ಕೆಲ ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ವರದಿಯನ್ನು ಪ್ರಕಟಿಸಿ ಈ ಮೂಲಕ ನೀವೂ ಈ “ಸ್ವಚ್ಚ ಮಂಗಳೂರು ಅಭಿಯಾನ” ದಲ್ಲಿ ಕೈಜೋಡಿಸಿ ಸಹಕರಿಸಬೇಕೆಂದು ಕೇಳಿಕೊಳ್ಳುವೆವು.

ಸಂಪರ್ಕ – 9448353162 (ಸ್ವಾಮಿ ಏಕಗಮ್ಯಾನಂದ, ಸಂಚಾಲಕ, ಸ್ವಚ್ಛ ಮಂಗಳೂರು ಅಭಿಯಾನ)


Spread the love