ಹರೀಶ್ ಆಚಾರ್ ಸೇವೆ ಸ್ಮರಣೀಯ

ಹರೀಶ್ ಆಚಾರ್ ಸೇವೆ ಸ್ಮರಣೀಯ

ಮಂಗಳೂರು : ಜುಲೈ 9 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು.

ಇವರು ಕಳೆದ 24 ವರ್ಷಗಳಿಂದ ಪಣಂಬೂರು ಘಟಕದ ಘಟಕಾಧಿಕಾರಿಯಾಗಿ ಅಪೂರ್ವ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ: ಮುರಲೀ ಮೋಹನ್ ಚೂಂತಾರು ಇವರು ಹರೀಶ್ ಆಚಾರ್ ಅವರಿಗೆ ಹೂ, ಹಾರ, ಹಣ್ಣು ನೀಡಿ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ ಮಾಡಿದರು.

ಉಪಸಮಾದೇಷ್ಠರಾದ ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸನತ್ ಕುಮಾರ್ ಇವರು ಪ್ರಾರ್ಥನೆ ನೆರವೇರಿಸಿದರು. ಹಿರಿಯ ಗೃಹರಕ್ಷಕರಾದ ಸುರೇಶ್ ಶೇಟ್ ಮತ್ತು ಶಿವಪ್ಪ ನಾಯ್ಕ ಅವರು ತಮ್ಮ ಸೇವಾ ಅನುಭವ ಮತ್ತು ಹರೀಶ್‍ರವರ ವೃತ್ತಿ ಒಡನಾಟದ ಬಗ್ಗೆ ಹಾಗೂ ಸೇವಾ ಬದ್ದತೆಯ ಬಗ್ಗೆ ಕೊಂಡಾಡಿದರು. ರಮೇಶ್ ಭಂಡಾರಿಯವರು ವಂದನಾರ್ಪಣೆ ಮಾಡಿದರು. ಕಚೇರಿಯ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜೆ ಸಹಾಯಕಿ ಅನಿತಾ, ಸುಖಿತಾ ಎ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಪಣಂಬೂರು ಘಟಕದ ಘಟಕಾಧಿಕಾರಿಯಾಗಿ ೀ ಶಿವಪ್ಪ ನಾಯಕ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.